ಸಿಮೆಂಟ್ ತಯಾರಿಕಾ ಉತ್ಪಾದನಾ ಕಂಪನಿಯಾಗಿರುವ ಜೆ.ಕೆ. ಸೂಪರ್ ಸಿಮೆಂಟ್ ಡಿ.7ರಂದು ಚೆನ್ನೈನಲ್ಲಿ ವರ್ಷದ ವಾಸ್ತು ಶಿಲ್ಪಿ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ. ಜೆ.ಕೆ. ಕಂಪನಿಯೇ ಆಸ್ಥೆ ವಹಿಸಿ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಅತ್ಯುತ್ತಮವಾಗಿ ವಾಸ್ತುಶಿಲ್ಪ ರೂಪಿಸಿರುವ ವ್ಯಕ್ತಿಯೊಬ್ಬರಿಗೆ ಈ ಪ್ರಶಸ್ತಿಯನ್ನು ಕಂಪನಿ ಪ್ರದಾನ ಮಾಡುತ್ತಿದೆ. ಇದು 22ನೇ ಪ್ರಶಸ್ತಿಯಾಗಿದ್ದು, ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರದಾನ ಮಾಡಲಾಗುತ್ತದೆ. ಚೆನ್ನೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜೆ.ಕೆ. ಸಿಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಯದುಪತಿ ಸಿಂಘಾನಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಜೊತೆಗೆ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಹಾಗೂ ನೇಪಾಳ, ಬಾಂಗ್ಲಾದೇಶ ಸೇರಿದಂತೆ ಇನ್ನಿತರೆ ರಾಷ್ಟ್ರಗಳ ಇಬ್ಬರು ಪ್ರತಿನಿಧಿಗಳು ಕೂಡ ಆಗಮಿಸಲಿದ್ದಾರೆ. ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಈ ಪ್ರಶಸ್ತಿಯನ್ನು ಕಂಪನಿಯು ಉತ್ತಮವಾಗಿ ಮನೆಯ ಅಥವಾ ಕಟ್ಟಡದ ವಾಸ್ತುಶಿಲ್ಪವನ್ನು ಯಾರು ನಿರ್ಮಿಸುತ್ತಾರೊ ಅಂತಹವರಿಗೆ ಪ್ರದಾನ ಮಾಡಲಾಗುತ್ತದೆ. ಕಟ್ಟಡ ಕ್ಷೇತ್ರವನ್ನು ಉತ್ತೇಜಿಸುವುದಕ್ಕೋಸ್ಕರವಾಗಿ ಈ ಪ್ರಶಸ್ತಿಯನ್ನು ಕಂಪನಿಯು ನೀಡುತ್ತಿದೆ.