ಮಹಿಳೆ-ಮನೆ-ಬದುಕು

ಜಲ ದೇವಿ!

ನೆಲದ ಮೇಲೆ ಯೋಗ ಬಹಳ ಸಲೀಸು. ಆದರೆ, ನೀರ ಮೇಲೆ ಯೋಗ ಮಾಡುವವರುಂಟೆ? ಮಾಡುತ್ತಾರೆ ಬಿಡಿ... ಕೆಲವು ಪುರುಷರು. ಆದರೆ, ಮಹಿಳೆ? ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ಶ್ರೀದೇವಿ ಮೀರಜಕರ್ ನೀರಿನಲ್ಲಿ ತುಂಬಾ ಸಲೀಸಾಗಿ ಯೋಗ ಮಾಡುತ್ತಾರೆ. 'ಅಯ್ಯೋ ಪ್ರಾಣದ ಕಥೆ?' ಅಂತ ಕೇಳಿದ್ರೆ, 'ನನ್ಗೆ ಈಜೂ ಬರುತ್ತೆ' ಎಂಬ ಸ್ಪಷ್ಟನೆ ಶ್ರೀದೇವಿಯವರದು. ಬಿ.ಕಾಂ. ಪದವೀಧರೆಯಾದ ಶ್ರೀದೇವಿ ನೀರಿನಲ್ಲಿ ಗಂಟೆಗಟ್ಟಲೆ ಆಸನ ಹಾಕುತ್ತಾರೆ.

ಕಲಿಕೆಗೆ ಪ್ರೇರಣೆ
ಶ್ರೀದೇವಿಯ ಈ ಯೋಗ ಕಲಿಕೆಗೆ ಪ್ರೇರಣೆ, ತಂದೆ ಅರ್ಜುನ್ ಮೀರಜ್‌ಕರ್. ಅವರೂ ಯೋಗಪಟು. ಅರ್ಜುನ್ ಅವರು ಯೋಗವನ್ನು ಯಾವ ಗುರುವಿನಿಂದಲೂ ಕಲಿತವರಲ್ಲ. ಬಿಡುವಿನ ವೇಳೆಯಲ್ಲಿ ಟಿ.ವಿ. ವೀಕ್ಷಿಸುತ್ತಾ ಕುಳಿತಾಗ ಈಜುಪಟುಗಳ ಈಜಾಟ ಮತ್ತು ಯೋಗಾಸನದ ಚಿತ್ರಣಗಳಿಗೆ ಆಕರ್ಷಿತರಾಗಿ ಸ್ವಾನುಭವದಿಂದ ಕಲಿತವರು. ಪ್ರತಿದಿನ ಊರಪಕ್ಕದ ಕೆರೆಗೆ ಯೋಗ ಅಭ್ಯಾಸಕ್ಕೆಂದು ಹೋಗುತ್ತಿದ್ದ ತಂದೆಗೆ ತಾನೂ ಯೋಗ ಕಲಿಯಬೇಕೆಂಬ ಇಚ್ಛೆಯನ್ನು ತಿಳಿಸಿದಳು. ಅರ್ಜುನ್ ಮಗಳ ಈ ಇಚ್ಛೆಯನ್ನು ಆರಂಭದಲ್ಲಿ ನಿರಾಕರಿಸಿದರು. ಮತ್ತೆ ಮತ್ತೆ ಒತ್ತಾಯಿಸಿದಾಗ ಯೋಗ ಮಾಡುವುದು ಸಾಧ್ಯವಾಗದಿದ್ದರೂ ಬರೀ ಈಜನ್ನಾದರೂ ಕಲಿತುಕೊಳ್ಳಲಿ, ಸಂದರ್ಭ ಬಂದಾಗ ಉಪಯೋಗವಾದೀತು ಎಂದುಕೊಂಡು ಜತೆಗೆ ಕರೆದುಕೊಂಡು ಹೋದರು. ಶ್ರೀದೇವಿ ಯೋಗದಲ್ಲೀಗ ಅಪ್ಪನಿಗೇ ಕೊಡುತ್ತಾರೆ.

ಜತೆಯಾದ ಸ್ನೇಹಿತೆಯರು
ಶ್ರೀದೇವಿ ಈಜು ಕಲಿಯಲು ಹೋಗುವ ಸುದ್ದಿ ಅವಳ ಸ್ನೇಹಿತೆಯರಿಗೂ ಗೊತ್ತಾಯಿತು. ಅವರೂ ಜತೆಯಾದರು. ನಿತ್ಯ ಮುಂಜಾನೆ ಈಜಾಡಿ, ಸ್ನಾನ ಮಾಡಿಕೊಂಡು ಬರುವುದು ರೂಢಿಯಾಯಿತು. ವಾರಗಳ ನಂತರ ತಂದೆಯ ಮಾರ್ಗದರ್ಶನದಂತೆ ಯೋಗಾಭ್ಯಾಸ ಶುರು. ನೀರ ಮೇಲಿನ ಆಟ ಮೊದಮೊದಲು ಕಠಿಣ ಎನಿಸಿತು. ಸಾಧನೆ ಮಾಡಲೇಬೇಕೆಂಬ ಛಲ ಮುಂದುವರಿಯುವಂತೆ ಮಾಡಿತು. ಸ್ನೇಹಿತೆಯರೂ ಸಾಥ್ ನೀಡಿದರು. ಆದರೆ, ಎಷ್ಟೇ ಪ್ರಯತ್ನಿಸಿದರೂ ಸ್ನೇಹಿತೆಯರಿಗೆ ಯೋಗದ ಅಭ್ಯಾಸವನ್ನು ಸರಿಯಾಗಿ ಕಲಿಯಲಾಗಲಿಲ್ಲ.

ಒಲಿದ ಯೋಗ
ಸತತ ಪ್ರಯತ್ನದ ಫಲವಾಗಿ ಶ್ರೀದೇವಿ ಯಶಸ್ವಿ ಯೋಗಪಟುವಾದರು. ಈ 2-3 ತಾಸುಗಳ ತನಕ ನೀರಿನಲ್ಲಿ ಆರಾಮಾಗಿ ತೇಲಾಡುತ್ತಾಳೆ. ಪದ್ಮಾಸನ, ಮತ್ಸ್ಯಾಸನ, ಮರ್ಕಟಾಸನ, ಶವಾಸನ... ಹಲವು ಆಸನಗಳನ್ನು ಸಲೀಸಾಗಿ ಹಾಕುತ್ತಾರೆ. ತಂದೆ ಅರ್ಜುನ್ ಈಗಾಗಲೇ ಹಲವು ಊರುಗಳಲ್ಲಿ ಜಲಯೋಗ ಪ್ರದರ್ಶನಗಳನ್ನೂ ನೀಡಿ ಹೆಸರು ಮಾಡಿದ್ದಾರೆ. ಶ್ರೀದೇವಿಗೂ ತಂದೆಯಂತೆಯೇ ಜಲಯೋಗ ಪ್ರದರ್ಶನ ನೀಡಬೇಕೆಂಬ ಬಯಕೆ. ಆ ಯೋಗ ಕಲೆಯನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ಕಲಿಸಿಕೊಡುವ ಆಸಕ್ತಿಯೂ ಶ್ರೀದೇವಿಗಿದೆ (9902523040).

- ಎ.ಎಸ್. ಹೂಲಗೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ