ಮಹಿಳೆ-ಮನೆ-ಬದುಕು

ಮಿರಿಮಿರಿ ಮ್ಯೂರಲ್

ಆ ಚಿತ್ರಕಲೆಗಳು ಅವರ ಮನೆಯನ್ನು ವಿಶಿಷ್ಟವಾಗಿ ಕಾಣುವಂತೆ ಮಾಡಿತ್ತು. ಮ್ಯೂರಲ್ ಕಲೆ ಎಲ್ಲರ ಗಮನ ಸೆಳೆಯುವಂತೆ ಮಾಡುವುದೇ ಹೀಗೆ...

ಮೊನ್ನೆ ಪರಿಚಿತರ ಮನೆಗೆ ಭೇಟಿ ನೀಡಿದ್ದೆ. ಅವರ ಮನೆ ಗೋಡೆಯ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿದ್ದವು. ಆ ಬೀದಿಯಲ್ಲಿ ಅನೇಕ ಮನೆಗಳಿದ್ದರೂ ಆ ಚಿತ್ರಕಲೆಗಳು ಅವರ ಮನೆಯನ್ನು ವಿಶಿಷ್ಟವಾಗಿ ಕಾಣುವಂತೆ ಮಾಡಿತ್ತು. ಮ್ಯೂರಲ್ ಕಲೆ ಎಲ್ಲರ ಗಮನ ಸೆಳೆಯುವಂತೆ ಮಾಡುವುದೇ ಹೀಗೆ...

ಏನಿದು ಮ್ಯೂರಲ್?
ಬೇಕಾದ ಚಿತ್ರ ಕಲೆಯ ಪಿಯೋಪಿ ಮೌಲ್ಡ್ ಅನ್ನು ತಯಾರಿಸಿ ದ್ರವೀಕರಿಸಿದ ಲೋಹ, ಸೆರಾಮಿಕ್, ಫೈಬರ್, ಗಾಜು ಇಂಥ ವಸ್ತುಗಳನ್ನು ಅದರೊಳಗೆ ಹಾಕಿ ಚಿತ್ರವನ್ನು ಹೊರತೆಗೆದು ಮನೆಯ ಗೋಡೆಗಳ ಮೇಲೆ ಹಚ್ಚುತ್ತಾರೆ. ಇದೇ ಮ್ಯೂರಲ್.
ಪ್ರಾಚೀನ ಶಿಲ್ಪಕಲೆಯ ಆಧುನಿಕ ರೂಪ ಇದು. ಅರಮನೆಗಳ ಮೇಲೆ ಹಾಗೂ ಹಳೇ ದೇಗುಲಗಳಲ್ಲಿ ಕಾಣಸಿಗುವಂಥ ಶಿಲ್ಪಕಲೆಗಳ ರೀತಿಯಲ್ಲಿ ನಿರ್ಮಿಸಲಾಗುವ ಮ್ಯೂರಲ್‌ಗಳು ಮನೆಯ ಆಂತರಿಕ ಹಾಗೂ ಬಾಹ್ಯ ಸೊಬಗನ್ನು ಹೆಚ್ಚಿಸುತ್ತವೆ. ಹಿಂದೆ ಕೇವಲ ಶ್ರೀಮಂತರ ಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಮ್ಯೂರಲ್‌ಗಳು ಈಗ ಮಧ್ಯಮ, ಬಡವರ ಮನೆಗಳ ಗೋಡೆಗಳಲ್ಲೂ ಅರಳಲು ಶುರು ಮಾಡಿಬಿಟ್ಟಿವೆ.
ತಾಮ್ರ, ಕಂಚು, ಅರೆ ಚಿನ್ನದ ಲೋಹಗಳಿಂದ, ಸೆರಾಮಿಕ್ ಟೈಲ್ಸ್‌ಗಳು, ಗಾಜು, ಫೈಬರ್, ಟೆರಕೋಟವರೆಗೂ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮ್ಯೂರಲ್‌ಗಳನ್ನು ಮಾಡಿಸಬಹುದು.
ಅಂದಹಾಗೆ ಈ ಮ್ಯೂರಲ್‌ಗಳನ್ನು ಹೇಗೆ ಬೇಕೋ ಹಾಗೆ ಮಾಡಿಸುವಂತಿಲ್ಲ. ಹಾಗಂತ ಅದಕ್ಕೆ ನಿಯಮಗಳೇನೂ ಇಲ್ಲ. ವಾಸ್ತು ಪ್ರಕಾರವಾಗಿ ಕೆಲವು ಮೂಲೆಗಳಲ್ಲಿ, ದಿಕ್ಕಿನತ್ತ ಕೆಲವು ಮ್ಯೂರಲ್‌ಗಳನ್ನು ಅರಳಿಸಿದರೆ, ನಿಮಗೂ ಒಳ್ಳೆಯದು.

ಹೇಗಿರಬೇಕು?
ಕುಬೇರನ ಮೂಲೆಯಲ್ಲಿ ಕುದುರೆಯ ಚಿತ್ರ ನಿರ್ಮಿಸಿದರೆ ಹಣದ ಆದಾಯ ಹೆಚ್ಚುತ್ತದೆ. ಅಗ್ನಿ ಮೂಲೆಯಲ್ಲಿ ಸೂರ್ಯನ ಚಿತ್ರ ನಿರ್ಮಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ಹೀಗೆ ಕೆಲವು ನಂಬಿಕೆಗಳಿಂದ ಮ್ಯೂರಲ್ ಚಿತ್ರಕಲೆ ಎಂದು ಕರೆಸಿಕೊಳ್ಳದೆ ವಾಸ್ತುಶಾಸ್ತ್ರ ಕಲೆ ಎನಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಜೋಡಿ ಹಂಸಗಳು, ತೆಂಗಿನ ಮರ, ಸೂರ್ಯ, ಪಂಚಭೂತ, ಪಕ್ಷಿಗಳು ಹೀಗೆ ಯಾವುದನ್ನಾದರೂ ಸರಿ ಮನೆಯ ಗೋಡೆಗಳ ಮೇಲೆ ಮ್ಯೂರಲ್‌ಗಳನ್ನು ಅರಳಿಸಬಹುದು.
ಇದಲ್ಲದೆ ಗಣೇಶ, ಶಿವ, ವೆಂಕಟರಮಣ ಸ್ವಾಮಿ ಸೇರಿದಂತೆ ದೇವರ ಚಿತ್ರಗಳನ್ನೂ ಮೂಡಿಸುತ್ತಾರೆ. ಒಂದು ಚದುರ ಅಡಿಗೆ ರು. 400ರಿಂದ ರು. 600ರ ವರೆಗೂ ವೆಚ್ಚ ತಗಲುತ್ತದೆ. ನೇಮ್ ಬೋರ್ಡ್‌ಗಳಲ್ಲೂ ಮ್ಯೂರಲ್ ಕಲೆ ಕಾಣಸಿಗುತ್ತದೆ. ಇದು ಕೇವಲ ಮನೆಯ ಹೊರಗಡೆ ಮಾತ್ರವಲ್ಲದೆ ಒಳಾಂಗಣದಲ್ಲೂ ಹಾಕಿಸಿಕೊಳ್ಳಬಹುದು.

-ರಾಹುಲ್.ಕೆ.ವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್