ಗಂಟು ಬಿಚ್ಚಲು
ಶೂ ಲೇಸ್‌ಗಳು ಗಂಟಿಕ್ಕಿಕೊಂಡಿವೆಯೇ? ಗಂಟಿನ ಮೇಲೆ ಸ್ವಲ್ಪ ಜೋಳದ ಹಿಟ್ಟನ್ನು ಹಾಕಿದರಾಯ್ತು. ಈಗ ಸುಲಭವಾಗಿ ಗಂಟು ಬಿಡಿಸಬಹುದು.
ಕಾರ್ಪೆಟ್ ಸ್ವಚ್ಛಗೊಳಿಸಲು
ಮನೆಯಲ್ಲಿರುವ ಕಾರ್ಪೆಟ್‌ಗಳನ್ನು ಸ್ವಚ್ಛಗೊಳಿಸುವ ಮುನ್ನ ಅವುಗಳ ಮೇಲೆ ಸ್ವಲ್ಪ ಜೋಳದ ಹಿಟ್ಟನ್ನು ಸಿಂಪಡಿಸಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಟ್ಟು, ನಂತರ ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ.
ಸುಟ್ಟ ಕಲೆಗೆ
ಬಟ್ಟೆಗೆ ಇಸ್ತ್ರಿ ಹಾಕುವಾಗ ಉಷ್ಣತೆಯಲ್ಲಿ ಸ್ವಲ್ಪ ಏರುಪೇರಾಗಿ ಬಟ್ಟೆಯ ಮೇಲೆ ಸುಟ್ಟ ಕಲೆಯಾಗಿದೆಯೇ? ಕಲೆಯಾದ ಸ್ಥಳವನ್ನು ಒದ್ದೆ ಮಾಡಿ, ಅದರ ಮೇಲೆ ಜೋಳದ ಹಿಟ್ಟನ್ನು ಅದ್ದಿರಿ. ಸ್ವಲ್ಪ ಹೊತ್ತು ಒಣಗಲು ಬಿಟ್ಟು, ನಂತರ ಬ್ರಷ್‌ನಿಂದ ಚೆನ್ನಾಗಿ ಉಜ್ಜಿರಿ. ಈಗ ಹಿಟ್ಟಿನ ಜತೆಗೆ ಕಲೆಯೂ ಮಾಯವಾಗುತ್ತದೆ.
ಆಟಿಕೆಗಳಿಗೆ
ಮಕ್ಕಳ ಆಟಿಕೆಗಳಲ್ಲಿ ಮಣ್ಣಾಗಿದೆಯೇ? ಆಟಿಕೆಗಳ ಮೇಲೆ ಜೋಳದ ಹಿಟ್ಟನ್ನು ಅದ್ದಿರಿ. 5 ನಿಮಿಷ ಬಿಟ್ಟು ನಂತರ ಸ್ವಚ್ಛಗೊಳಿಸಿ. ತುಂಬಾ ಗೊಂಬೆಗಳನ್ನು ಸ್ವಚ್ಛಗೊಳಿಸಬೇಕೆಂದರೆ ಒಂದು ಬ್ಯಾಗ್‌ನೊಳಗೆ ಅವುಗಳನ್ನೆಲ್ಲ ಹಾಕಿ, ನಂತರ ಅದರೊಳಗೆ ಹಿಟ್ಟನ್ನು ಹಾಕಿ, ಬ್ಯಾಗನ್ನು ಗಟ್ಟಿಯಾಗಿ ಕಟ್ಟಿ. ಬಳಿಕ ಅಲುಗಾಡಿಸಿ. ಬಳಿಕ ತೆಗೆದು ತೊಳೆಯಿರಿ.