ಮಹಿಳೆ-ಮನೆ-ಬದುಕು

ಕ್ಲೀನ್ ಕಷ್ಟ...

ಸ್ವಚ್ಛತೆ ನಿತ್ಯ ಕಾಡುವ ಸಮಸ್ಯೆ. ಹಾಗೆಂದ ಮಾತ್ರಕ್ಕೆ ಮನೆಯನ್ನು, ಮನೆಯಲ್ಲಿರುವ ವಸ್ತುಗಳನ್ನು ಅಶುಚಿಯಿಂದ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಿತ್ತಲಿನಿಂದ ಹಿಡಿದು ಹೊರಾಂಗಣದವರೆಗೆ ಸ್ವಚ್ಛತೆ ಕಾಪಾಡಬೇಕಾದ ಅನಿವಾರ್ಯತೆ. ಮನೆಯನ್ನಷ್ಟೇ ಸ್ವಚ್ಛವಾಗಿಟ್ಟರೆ ಸಾಲದು. ಅದರೊಟ್ಟಿಗೆ ಮನೆಯಲ್ಲಿರುವ ವಸ್ತುಗಳನ್ನೂ ಕೇರ್ ಮಾಡಬೇಕು. ಇದರಲ್ಲಿ ಪ್ರಮುಖವಾಗಿರುವುದು ಹೊರಾಂಗಣದಲ್ಲಿ ಪೀಠೋಪಕರಣಗಳು.
ಪೀಠೋಪಕರಣಗಳನ್ನು ಶುಚಿಯಾಗಿಡಲು ಹಲವಾರು ವಿಧಗಳು, ವೈಶಿಷ್ಟಗಳು ಇವೆ. ದಿನನಿತ್ಯ ಅವುಗಳ ಕಡೆ ಗಮನ ನೀಡುತ್ತ ಬಂದರೆ ಅದು ಸುಲಭ. ಇಲ್ಲವಾದರೆ ಕಠಿಣ.
ಹಾಗಾದರೆ ಪೀಠೋಪಕರಣ ಶುಚಿಯಾಗಿಡಲು ಕೆಲವು ಸಂಗತಿ ನಿಮಗಾಗಿ ಇಲ್ಲಿವೆ:
    ಪೀಠೋಪಕರಣಗಳನ್ನು ನೀಡಿದ ಕಂಪನಿಯವರು ಶುಚಿಯಾಗಿಡಲು ನಿಮಗೆ ನೀಡಿದ ಸಲಹೆ, ಸೂಚನೆಗಳನ್ನು ಪಾಲಿಸಿ.
    ಹಸಿ ಬಟ್ಟೆ, ಮೃದುವಾದ ಬಟ್ಟೆಯಿಂದ ಬೇಗನೆ ಸ್ವಚ್ಛ ಮಾಡಬಹುದು.
    ಪೀಠೋಪಕರಣಗಳಿಗೆ ಧೂಳು ಬಾರದಂತೆ ಎಚ್ಚರ ವಹಿಸಿ.
    ಜೇಡ, ತಿಗಣೆಯಂತಹ ಕಾಟ ಇದ್ದಾಗ, ಅಗತ್ಯ ಸೀಮೆಎಣ್ಣೆ ಹಚ್ಚಿರಿ. ನಂತರ ಬಿಸಿಲಿಗೆ ಪೀಠೋಪಕರಣವನ್ನು ಇಡಿ.
    ಕಬ್ಬಿಣದ ಪೀಠೋಪಕರಣಗಳಾದರೆ, ಒದ್ದೆಯಾದ ಬಟ್ಟೆಯಿಂದ ಶುಚಿಗೊಳಿಸಿ. ಕಟ್ಟಿಗೆಯದ್ದಾಗಿದ್ದರೆ, ಮೆತ್ತನೆಯ ಒಣ ಬಟ್ಟೆಯಿಂದ ಒರೆಸಿದರೆ ಸಾಕು.
    ಒಂದು ವೇಳೆ ಪೇಸ್ಟ್ ಹಚ್ಚುವ ಸಂದರ್ಭ ಬಂದರೆ, ಮೊದಲು ಪೀಠೋಪಕರಣವನ್ನು ಬಿಸಿಲಿಗೆ ಸಂಪೂರ್ಣವಾಗಿ ಒಣಗಲು ಬಿಡಿ.
    ಕಟ್ಟಿಗೆಯ ಪೀಠೋಪಕರಣಗಳಿಗೆ ವರ್ಷಕ್ಕೊಮ್ಮೆಯಾದರೂ ವಾರ್ನಿಷ್ ಹಚ್ಚುತ್ತಿರಿ. ಇದರಿಂದ ಅದರ ಹೊಳಪು ಹೆಚ್ಚುತ್ತೆ.
    ಮಳೆಗಾಲ ಮತ್ತು ಚಳಿಗಾಲದಂತಹ ಸಂದರ್ಭದಲ್ಲಿ ಹೊರಗಡೆ ಕಟ್ಟಿಗೆಯ ಪೀಠೋಪಕರಣ ಇಡಬೇಡಿ.

- ಎಚ್ಚೆನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!