ಅಡುಗೆ ಜತೆಗೆ ಅದರ ಮನೆಯೂ ಬದಲಾಗಿದೆ. ಅಷ್ಟೇ ಅಲ್ಲ ಕಾಲಕ್ಕೆ ತಕ್ಕಂತೆ ಅಡುಗೆ ಮಾಡುವ ವಿಧಾನವೂ ಬದಲಾಗಿದೆ. ಅಡುಗೆ ಮಾಡಲು ಬಳಸುವ ಸಾಧನಗಳೂ ಸಾಕಷ್ಟು ರೂಪಾಂತರಗೊಂಡಿವೆ.
ಅಡುಗೆಗೆ ಮೊದಲು ಒಲೆ ಉರಿಸಿ ಮಾಡುತ್ತಿದ್ದರು. ಅದರೊಟ್ಟಿಗೆ ಬೆರಣಿ ತಟ್ಟಿ ಅದನ್ನು ಉರಿಸಿಯೂ ಮಾಡುತ್ತಿದ್ದರು. ಇದಾದ ಬಳಿಕ ಮರದ ಹುಡಿಯ ಒಲೆ (ಸ್ಟೌ) ಬಂತು, ಸೀಮೆ ಎಣ್ಣೆಯ ಒಲೆ ಬಂತು. ಸಂಶೋಧನೆ ಹೆಚ್ಚಾದಂತೆ ಎಲೆಕ್ಟ್ರಿಕ್ ಓವನ್ ಒಲೆಯೂ ಅಡುಗೆ ಮನೆಗೆ ಕಾಲಿಟ್ಟಿತು.
ಇದೆಲ್ಲಕ್ಕಿಂತ ಮುಖ್ಯವಾಗಿ ಗೃಹಿಣಿಯರ ಮನ ಗೆದ್ದು ಅಡುಗೆ ಮನೆಯಲ್ಲೇ ಸ್ಥಾನ ಪಡೆದಿರುವುದು ಗ್ಯಾಸ್ ಒಲೆ. ಇದು ಗೃಹಿಣಿಯರ ಮೆಚ್ಚುಗೆಗೆ ಪಾತ್ರವಾಯಿತು. ಎಲೆಕ್ಟ್ರಾನಿಕ್‌ಗಿಂತ ಗ್ಯಾಸ್ ಒಲೆಯೇ ಹೆಚ್ಚು ಅನುಕೂಲವಾಗಿ ಪರಿಣಮಿಸಿತು. ದೀರ್ಘ ಕಾಲ ಬಾಳಿಕೆ, ಹೆಚ್ಚು ಶ್ರಮವಿಲ್ಲದೆ ಕಡಿಮೆ ಅವಧಿಯಲ್ಲಿ ಅಡುಗೆ ತಯಾರಿ ಇದಕ್ಕೆ ಪ್ರಮುಖ ಕಾರಣವಾಯಿತು.
ಗ್ಯಾಸ್ ಒಲೆಯಲ್ಲೂ ಹಲವು ವಿಧ. ಹಾಗಾದರೆ, ಯಾವ ರೀತಿಯ ಒಲೆ ಗೃಹಿಣಿಯರಿಗೆ ಉತ್ತಮ? 4 ಉರಿಯುವ ಒಲೆ, 2 ಉರಿಯುವ ಒಲೆ, 3 ಉರಿಯುವ ಒಲೆಯಲ್ಲಿ ಯಾವುದು ಸೂಕ್ತ ಎಂಬ ತೊಳಲಾಟದಲ್ಲಿ ಗೃಹಿಣಿಯರಿದ್ದಾರೆ. ಅದಕ್ಕೆ ಇಲ್ಲಿವೆ ಕೆಲವು ಅಗತ್ಯ ಮಾಹಿತಿಗಳು...
ಹಳೆಯ 2 ಉರಿಯುವ ಒಲೆಯ ಉಪಯೋಗಗಳು
ದೊಡ್ಡ ದೊಡ್ಡ 2 ತಪಾಲೆ ಇಟ್ಟುಕೊಂಡು ಒಟ್ಟಿಗೆ ಬೇಯಿಸಬಹುದು
ಸ್ಲಾಬನ್ನೂ ಜತೆಯಲ್ಲಿ ಸ್ಟೌವನ್ನೂ ಬೇಗ ಶುಚಿಗೊಳಿಸಬಹುದು
ಎರಡೇ ಒಲೆಗಳು ಇರುವುದರಿಂದ ಗೊಂದಲ ಇಲ್ಲದೆ ರುಚಿಯಾದ ಅಡುಗೆ ಮಾಡಲು ಸಾಧ್ಯ.
ಕೈ ಸುಡುವ ಸಂದರ್ಭಗಳು ಇಲ್ಲಿ ವಿರಳ.
ಎರಡೂ ಒಲೆಗಳ ಮಧ್ಯೆ ಪಾತ್ರೆ ಇಡಲು ಜಾಗ ಇರುತ್ತದೆ.
ಚಪಾತಿ ಉಬ್ಬಿಸಲು ಒಳ್ಳೆಯದಾಗುತ್ತದೆ, ಹೊಸ ಒಲೆಗಳಲ್ಲಿ ಚಪಾತಿ ಹರಿದು ಹೋಗುತ್ತವೆ.
ಜಾಗದ ಪ್ರಮಾಣವೂ ಕಡಿಮೆ ಇದ್ದರೆ ಸಾಕು
ಎರಡು ಒಲೆಗಳ ನಡುವೆ ಹೆಚ್ಚು ಜಾಗ ಇರುವುದು ಉತ್ತಮ ಗುಣ.
ಒಲೆಯನ್ನು ಉರಿಸುವಾಗ, ಅದರ ಮೇಲಿರುವ ಪಾತ್ರೆಗಳು ತಾಗದಂತೆ (ದೊಡ್ಡ ಪ್ರಮಾಣದ) ಇಡಬಹುದು.
ಅಡುಗೆ ಮನೆಯಲ್ಲಿ ಬೇರೆ ಕಡೆಗೂ ಅದನ್ನು ಸ್ಥಳಾಂತರಿಸಬಹುದು. <
ಎರಡಕ್ಕಿಂತ ಹೆಚ್ಚು ಗ್ಯಾಸ್ ಒಲೆ
3, 4 ಒಲೆ ಇರುವುದರಿಂದ ಫಟಾಫಟ್ ಅಡುಗೆ ಮಾಡಬಹುದು
ಶುಭ್ರಗೊಳಿಸುವ ಕ್ರಮ ಸರಿಯಾಗಿ ತಿಳಿದರೆ ಸುಲಭ ಸಾಧ್ಯ.
ಚಿಕ್ಕ ಒಲೆಗಳಲ್ಲಿ ಅತ್ಯಂತ ಕಡಿಮೆ ಬೆಂಕಿ ಬರುವುದು. ಅದು ಕೆಲವೊಂದು ಪದಾರ್ಥ ತಯಾರಿಸಲು ಒಳ್ಳೆಯದು.
ಎರಡು ರೌಂಡ್ ಬೆಂಕಿ ಉರಿಯುವ ಒಲೆ ಒಳ್ಳೆಯದು. ಇಲ್ಲವಾದಲ್ಲಿ ಮಧ್ಯಭಾಗಕ್ಕೆ ಬೆಂಕಿ ಬರುವುದು ಕಷ್ಟ. ಪಾತ್ರೆಯ ಹೊರಬದಿ ಅಷ್ಟಾಗಿ ಸುಟ್ಟು ಹೋಗುವುದಿಲ್ಲ. ಸಮಯ ಉಳಿತಾಯ
ನಮ್ಮ ಮನೆಗೆ ಯಾವ ಒಲೆ ಉತ್ತಮ? ಯಾವುದು ಸೂಕ್ತ ಎಂದು ತಿಳಿದುಕೊಂಡು ಅದನ್ನೇ ಉಪಯೋಗಿಸಿ.
-ಕೃಷ್ಣವೇಣಿ ಪ್ರಸಾದ್ ಮುಳಿಯ