ಮಹಿಳೆ-ಮನೆ-ಬದುಕು

ಲವ್ ಸೈನ್ಸ್

ಸಾಹಿತ್ಯಿಕವಾಗಿ ಪ್ರೀತಿ, ಪ್ರೇಮವನ್ನು ಕಲ್ಪನಾಲಹರಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಅನಾದಿ ಕಾಲದಿಂದಲೂ ನಡೆದಿದೆ. ಮುಂದೆಯೂ ಇರುತ್ತೆ. ಆದರೆ, ಸಾಹಿತ್ಯಿಕ ಪರಿಭಾಷೆಯನ್ನು ಬದಿಗೊತ್ತಿ, ಲವ್ವಲ್ಲಿ ಬೀಳೋದು ಅಂದರೇನು ಎಂಬುದನ್ನು ವೈಜ್ಞಾನಿಕ ಕಣ್ಣಿನಿಂದ ನೋಡಿದ್ದಾರೆ ರೂಟ್‌ಗೆರ್ಸ್ ವಿಶ್ವವಿದ್ಯಾಲಯದ ಹೆಲನ್ ಫಿಶರ್ ನೇತೃತ್ವದ ಸಂಶೋಧಕರ ತಂಡ. ಲವ್ವಲ್ಲಿ ಬಿದ್ದಾಗಿನ ಹಲವು ಲಕ್ಷಣಗಳಿಗೆ ವೈಜ್ಞಾನಿಕ ಕಾರಣಗಳನ್ನು ಅವರು ನಿರೂಪಿಸಿದ್ದಾರೆ.

ಪ್ರೀತೀಲಿ ಬಿದ್ದಾಗ ಹಲವು ಭಾವನೆಗಳು ಒಡಮೂಡುತ್ತವೆ. ಎಲ್ಲದಕ್ಕೂ ನಮ್ಮ ಮನಸ್ಸನ್ನೇ ಕಾರಣಕರ್ತನನ್ನಾಗಿ ಮಾಡುತ್ತೇವೆ. ಆದರೆ ಮೂಲ ಕಳ್ಳನಿರುವುದು ಮೆದುಳಿನಲ್ಲಿ. 'ಐ ಥಿಂಕ್ ಆ್ಯಮ್ ಇನ್ ಲವ್‌' ಅಂತ ಡೌಟ್ ಹುಟ್ಟುವ ಬೆನ್ನಿಗೇ ಸಾಮಾನ್ಯವಾಗಿ ಎಲ್ಲರಿಗೂ ಒಂದಿಷ್ಟು ಅತೀ ಎನಿಸುವಂತಾ, ಆದರೂ ಆಪ್ಯಾಯಮಾನವಾದ ಭಾವನೆಗಳು ಹುಟ್ಟುತ್ತವೆ.
ಅವುಗಳೆಂದರೆ....
ಅವಳೇ ಸರ್ವಸ್ವ
ನಮ್ಮ ಲವ್ ನಮಗೆ ಸರ್ವಸ್ವ ಎನಿಸಲು ಆರಂಭಿಸುತ್ತದೆ.

ಅವಳು ಪರಿಪೂರ್ಣೆ
ನಿಷ್ಕಲ್ಮಷವಾಗಿ ಪ್ರೀತಿಸುವವರು ತಮ್ಮ ಪ್ರಿಯತಮೆಯ ಸಕಾರಾತ್ಮಕ ಗುಣಗಳನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಅವಳೊಬ್ಬಳು ಪರಿಪೂರ್ಣೆ ಎಂದು ಭಾವಿಸುತ್ತಾರೆ.
ಮನತುಂಬೆಲ್ಲಾ ಅವನು!
ಹುಡುಗಿಗೆ ತನ್ನ ಹುಡುಗನ ಬಗ್ಗೆಯೇ ಜಾಸ್ತಿ ಚಿಂತೆ. ಆಕೆ ಆತನ ಜತೆ ಕಳೆದ ಬಹುತೇಕ ಸಮಯದ ಬಗ್ಗೆಯೇ ಚಿಂತಿಸುತ್ತಾಳೆ. ಅವನೊಡನಿರುವ ಕನಸು ಕಾಣುತ್ತಾಳೆ.
ಎಂದೆಂದೂ ಜತೆಗಿರಬೇಕು
ಇಂಥದೊಂದು ಭಾವನೆ ಇಬ್ಬರಲ್ಲೂ ಮಡುಗಟ್ಟಿರುತ್ತದೆ. ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಅರ್ಪಿಸಿಕೊಂಡು ಜೀವನಪೂರ್ತಿ ಹೀಗೆಯೇ ಇರಬೇಕು. ಆತ/ಆಕೆ ತನ್ನನ್ನು ಬಿಟ್ಟು ಹೋಗಬಾರದು. ಹಗಲುಗನಸು ಕಾಣುತ್ತಾ ಮುಂದಿನ ಜೀವನದ ಬಗ್ಗೆ ಯೋಚಿಸುತ್ತಾರೆ. ಎಂದೆಂದಿಗೂ ಜತೆಯಲ್ಲಿರಬೇಕು ಎಂದು ಹೇಳಿಕೊಳ್ಳುತ್ತಾರೆ.
ಏನು ಬೇಕಾದರೂ ಮಾಡಬಲ್ಲೆ
ಲವ್ವಲ್ಲಿ ಬಿದ್ದವರು ತಮ್ಮ ಪ್ರೀತಿಗಾಗಿ ಏನ್ ಬೇಕಾದರೂ ಮಾಡಬಲ್ಲೆ ಎಂಬ ಉತ್ಸಾಹದಲ್ಲಿರುತ್ತಾರೆ. ಆಕೆಯ ನೋವು ತನ್ನದೇ ಎಂದು ಭಾವಿಸಿಕೊಳ್ಳುತ್ತಾರೆ. ಅದರ ನಿವಾರಣೆಗಾಗಿ ಎಂಥದ್ದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ.
ಆತನಿಗೆ ನನ್ನ ಬಟ್ಟೆ ಇಷ್ಟಾನಾ?
ಲವ್ವಲ್ಲಿ ಬಿದ್ದಾಗ ನಮ್ಮಲ್ಲಿ ನಾವು ಕೆಲವೊಂದಿಷ್ಟು ಬದಲಾವಣೆಗಳನ್ನು ತಂದುಕೊಳ್ಳುತ್ತೇವೆ. ನಾನು ತೊಡುವ ಬಟ್ಟೆ ಆತನಿಗೆ ಇಷ್ಟವಾಗುತ್ತಾ ಎಂಬುದರಿಂದ ಹಿಡಿದು ನಮ್ಮ ದಿನನಿತ್ಯದ ಆದ್ಯತೆಗಳು, ನಮ್ಮ ರೀತಿ ರಿವಾಜು, ಹವ್ಯಾಸ, ಮೌಲ್ಯಗಳು.. ಹೀಗೆ ಎಲ್ಲವನ್ನೂ ಆತನಿಗಾಗಿ ಚೇಂಜ್ ಮಾಡುತ್ತೇವೆ.
ಹಾಳಾದೆ ನಾ!
ನಿಮಗೆ ಗೊತ್ತಾ ಲವ್ ಕೂಡಾ ಚಟ! ಒಂದೊಮ್ಮೆ ಲವ್ ನಿಮ್ಮ ಏಳ್ಗೆಗೆ ಕಾರಣವಾದರೆ ಅದೇ ನಿಮ್ಮ ಪತನಕ್ಕೂ ಷರಾ ಬರೆಯುತ್ತದೆ. ಲವ್ವಲ್ಲಿ ಬಿದ್ದವರು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಡಿಸ್ಟರ್ಬ್ ಆಗಿರುತ್ತಾರೆ. ಸಂಬಂಧದಲ್ಲಿ ಚಿಕ್ಕ ಬಿರುಕು ಕಾಣಿಸಿಕೊಂಡರೂ ಸಾಕು, ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಡ್ರಗ್ ಸೇರಿದಂತೆ ಕೆಟ್ಟ ಚಟಗಳಿಗೂ ದಾಸರಾಗುತ್ತಾರೆ.
ಸವಾಲಿನಿಂದ ಸನಿಹ
ಕೆಲವೊಂದು ಸಾರಿ ನಮಗೆ ಎದುರಾಗುವ ಸವಾಲುಗಳು ಇನ್ನೊಬ್ಬರಲ್ಲಿ ಅನುರಕ್ತರಾಗುವಂತೆ ಮಾಡುತ್ತವೆ. ಕಷ್ಟದಲ್ಲಿದ್ದಾಗ ನೆರವಾದ ಕೈಗಳಿಂದ ಪ್ರೀತಿಯ ಸ್ಪರ್ಶಕ್ಕೆ ಹಾತೊರೆಯುತ್ತೇವೆ.
ನಾವಿಬ್ಬರೂ ಅನನ್ಯ!
ಯಾರು ಆಳವಾಗಿ ಪ್ರೀತಿಯಲ್ಲಿ ಬೀಳುತ್ತಾರೆ ಅವರಲ್ಲಿ ಸೆಕ್ಸ್ ವಾಂಛೆ ಟಿಸಿಲೊಡೆಯುತ್ತದೆ.  
ಬರಿ ಸೆಕ್ಸ್ ಅಲ್ಲ!
ಪ್ರೀತಿಯಲ್ಲಿ ಬಿದ್ದೋರಿಗೆ ಸೆಕ್ಸ್ ತುಂಬಾ ಮಹತ್ವ ಅನ್ನಿಸಿಕೊಳ್ಳುತ್ತಿರುವಾಗಲೇ ಭಾವನಾತ್ಮಕ ಬಂಧ ಎದುರಾಗುತ್ತದೆ. ಪ್ರೀತಿ ಎಂದರೆ ಕೇವಲ ಸೆಕ್ಸ್ ಅಲ್ಲ ಎಂಬ ಸತ್ಯ ಕಂಡುಕೊಳ್ಳಲು ಸ್ವಲ್ಪ ಟೈಮ್ ಹಿಡಿಯುತ್ತದೆ.

ನನ್ನ ನಾನು ಸೈರಿಸಿಕೊಳ್ಳಲಾರೆ
ಸಾಮಾನ್ಯವಾಗಿ ಲವ್ವಲ್ಲಿ ಬಿದ್ದವರು ಹೇಳುವ ಮಾತೆಂದರೆ, ನನ್ನನ್ನು ನಾನು ನಿಯಂತ್ರಿಸಿಕೊಳ್ಳಲಾರೆ.  ಈ ಎಲ್ಲ 'ಅನಿಸುತಿದೆ'ಗಳ ಹಿಂದಿರುವ ಕಾಣದ ಕೈ ನಮ್ಮ ಬ್ರೇನ್‌ನಲ್ಲಿರುವ 'ಡೋಪಮೈನ್(ನ್ಯೂರೋಟ್ರಾನಿಸ್ಟರ್)'. ಇದು ನಿಮ್ಮವರ ಮೇಲೆ ಯೋಚನೆಗಳು ಹೆಚ್ಚು ಕೇಂದ್ರೀಕೃತವಾಗುವಂತೆ ರಾಸಾಯನಿಕ ಸಂಯೋಜನೆ ಉಂಟು ಮಾಡುತ್ತದೆ. ಜೊತೆಗೆ ತಾನು ರವಾನಿಸುವ ಸಿಗ್ನಲ್‌ನ ಸಾಮರ್ಥ್ಯ ಹೆಚ್ಚಿಸುತ್ತದೆ. ಇದರಿಂದ ಪ್ರೀತಿಯಲ್ಲಿ ಬಿದ್ದವರಿಗೆ ಅವಳು/ನು ಪರಿಪೂರ್ಣೆಯಾಗುತ್ತಾಳೆ/ನೆ.
ಯಾವಾಗ ಬ್ರೇನ್‌ನಲ್ಲಿರುವ ಈ ಸಂದೇಶವಾಹಕಗಳಲ್ಲಿ ಏರುಪೇರಾಗುತ್ತದೆಯೋ ಆಗ ತಳಮಳ, ಭಯ, ಪೊಸೆಸಿವ್‌ನೆಸ್ ಎಲ್ಲವೂ ಹುಟ್ಟಿಕೊಳ್ಳುತ್ತವೆ. ಸೆಂಟ್ರಲ್ ಸೆರೋಟೋನಿನ್(ಈ10ಏ12ಃ2ಕ) ಲೆವಲ್‌ನಲ್ಲಿ ಆಗುವ ಹೆಚ್ಚಳ ಮನ ತುಂಬಾ ಅವನೇ ತುಂಬಿಕೊಳ್ಳುವಂತೆ ಮಾಡುತ್ತದೆ. ಈಗ ಹೇಳಿ, ಪ್ರೇಮಿಗಳ ಕೈಲೇನಿದೆ? ಪ್ರೀತ್ಸೋದ್ ಕೂಡಾ ಇಲ್ಲ!

ಭಯ ಕಾರಣ
ಪ್ರೇಮಿಗಳು ತಾವಿಬ್ಬರೂ ಎಲ್ಲ ಸಮಯದಲ್ಲಿ ಜತೆಯಲ್ಲಿರಬೇಕು ಎಂದುಕೊಳ್ಳುತ್ತಾರೆ. ತಮ್ಮ ಸಂಬಂಧ ಗಟ್ಟಿಗೊಳಿಸಲು ಭಾವನಾತ್ಮಕವಾಗಿ ಅವಲಂಬಿತವಾಗುತ್ತಾರೆ. ಪೊಸೆಸಿವ್‌ನೆಸ್, ಹೊಟ್ಟೆಕಿಚ್ಚು, ಭಯ, ಎಲ್ಲಿ ನಾವಿಬ್ಬರೂ ಬೇರೆಯಾಗಿ ಬಿಡುತ್ತೇವೆ ಎಂಬ ತಳಮಳ ಬೆನ್ನಿಗಿರುತ್ತದೆ.

-ಮ.ತಿಪ್ಪಾರ
mtippar@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!