ಮಹಿಳೆ-ಮನೆ-ಬದುಕು

ಗುಚ್ಛ ಗಮನ

ಸೊಗಸಾದ ಸಂಜೆಕೂಟಕ್ಕೆ ತಾಜಾತನದ ಮೆರುಗು ಹೂಗೊಂಚಲಿಂದ ಸಾಧ್ಯ. ಹೀಗಾಗಿ ಡೈನಿಂಗ್ ಟೇಬಲ್‌ನ ವಿನ್ಯಾಸ ಮಾಡೋದೂ ಒಂದು ಕಲೆ. ಪ್ರಸ್ತುತಕ್ಕೆ ಇಂಪು ನೀಡಿ ನೆರೆದವರಿಗೆ ಕಂಪು ಒದಗಿಸುತ್ತದೆ. ಮನಸು ಬಿಚ್ಚಿ ಬೆರೆಯುವ, ಮಾತನಾಡುವ ಮುಕ್ತ ವಾತಾವರಣ ಒದಗಿಸುತ್ತದೆ.

ಆಕರ್ಷಕ ಹೂಗುಚ್ಛ
ಸುಂದರ ಹೂಗುಚ್ಚ ಡೈನಿಂಗ್ ಟೇಬಲ್ ಮೇಲೆ ಕಂಗೊಳಿಸುತ್ತಿದ್ದರೆ ಕೂಟಕ್ಕೊಂದು ಕೋಡು. ನೀವೇ ಕೈಯ್ಯಾರೆ ವಿಸ್ಮಿತ ಹೂಗುಚ್ಛ ನಿರ್ಮಿಸಲು ಸಾಧ್ಯ. ಖಾಲಿಯಾದ ನಿಮಗಿಷ್ಟದ ಮದ್ಯಬಾಟಲಿಗಳನ್ನು ಆರಿಸಿ. ಚಿನ್ನದ ಬಣ್ಣ ಲೇಪನ ಮಾಡಿ. ಅದರ ಮೇಲಿರುವ ತೇವ ಆರಲು ಸ್ವಲ್ಪ ಸಮಯ ಬಿಡಿ. ಬಣ್ಣ ಒಣಗಿ ಪೂರ್ತಿ ಬಾಟಲಿ ಬಂಗಾರ ಎಂಬಂತೆ ಭಾಸವಾಗುತ್ತದೆ.
ಸುಂದರ ಪುಷ್ಪಗಳನ್ನಷ್ಟೇ ಆಯ್ಕೆಮಾಡಿ. ಹವಾಮಾನಕ್ಕೆ ತಕ್ಕಂತೆ ಹೂ ತಾಜಾ ಪರಿಮಳ ನೀಡುತ್ತದೆ. ಬಿಳಿ ಅಥವಾ ಕೆಂಪು ಗುಲಾಬಿಗಳು ನೀಡುವ ಅಂದ ಅದ್ಭುತ. ಲಿಲ್ಲಿಗಳು ಸೌಂದರ್ಯಕ್ಕೆ ಲಾಲಿತ್ಯ ಹಾಡುತ್ತವೆ. ಸುವಾಸನೆ ಭರಿತ ಹೂಗಳನ್ನು ಬಳಸಿ. ಚಮತ್ಕಾರಕ್ಕನುಗುಣವಾಗಿ ಸೀಸೆ ಒಳಗೆ ಹೂವಿನ ಕಾಂಡವನ್ನು ಮುಳುಗಿಸಿಡಿ.
ಹೂಗಳಿಂದ ಅಲಂಕೃತವಾದ ಸೀಸೆಗಳ ಸುತ್ತ ಸ್ಫಟಿಕಗಳನ್ನು ಜೋಡಿಸಿಡಿ. ಹೂವಿನ ಜೋಡಣೆಯೊಂದಿಗೆ ಸ್ಫಟಿಕವು ಬೆಳಕಿನ ಪ್ರತಿಫಲನಗಳ ಹೊಳಪು ನೀಡುತ್ತದೆ. ಸುತ್ತಲೂ ಹೂಹಣ್ಣುಗಳ ಮಿಶ್ರಣವನ್ನು ಅಲಂಕೃತವಾಗಿ ಜೋಡಿಸಿ. ಸೌಂದರ್ಯದ ಚಿತ್ತಾರ ಇಮ್ಮಡಿಗೊಳ್ಳುತ್ತದೆ.

ಟೇಬಲ್ ವಿನ್ಯಾಸ
ಸುಖಭರಿತ ಭೋಜನಕ್ಕೆ ಮಜಾ ಎನಿಸುವ ಅಲಂಕಾರ ಡೈನಿಂಗ್ ಟೇಬಲ್ ಮೇಲಿರಬೇಕು. ಇದು ನಿಜಕ್ಕೂ ಸರಳ. ಕೆಲವು ಬಳಕೆಯಾದ ಎಳನೀರ ಕಾಯಿಗಳನ್ನು ಆರಿಸಿ. ಚೆಂಡು ಹೂಗಳು ಬೇಕು. ಈ ಹೂಗಳ ಬಳಕೆ ಸರಳವಾಗಿದ್ದು ಸಂಪ್ರದಾಯದ ಸೂಚ್ಯವಾಗಿವೆ.
ಚೆಂಡು ಹೂಗಳನ್ನು ಸುಂದರ ಕಿರೀಟದಂತೆ ಜೋಡಿಸಿ. ಎಳನೀರ ಮೇಲ್ಭಾಗದಲ್ಲಿ ಅಚ್ಚುಕಟ್ಟಾಗಿ ಅಲಂಕರಿಸಿ. ಸಣ್ಣ ಕಡ್ಡಿಗಳನ್ನು ಬಳಸಿ, ಎಳನೀರು ಕಾಯಿಯ ಸುತ್ತಲೂ ಬಗೆ ಬಗೆಯ ಹೂಗಳನ್ನು ಗುಚ್ಛದಂತೆ ಪೋಣಿಸಿ. ಪುಷ್ಪ ಕಿರೀಟದ ಮೇಲ್ಭಾಗದಲ್ಲೂ ಹೂಗಳನ್ನಿಡಿ.
ರಫಿಯಾ ನಾರಿನಿಂದ ಮಾಡಿದ ಚೆಂಡಿನಾಕೃತಿಯ ಜೋಡಣೆ ಎಂಥವರನ್ನೂ ಆಕರ್ಷಿಸುತ್ತದೆ. ಚೆಂಡಿನ ಮೇಲೆ ಗೋಣಿ ದಾರ ಅಥವಾ ಸೆಣಬಿನ ದಾರವನ್ನು ಸುತ್ತಲೂ ಸುತ್ತಿ. ಮೇಲ್ಭಾಗದಲ್ಲಿ ಹೂಗಳನ್ನು ಜೋಡಿಸಿಡಿ. ಹಳದಿ, ಕಿತ್ತಳೆ ವರ್ಣಗಳ ಚೆಂಡುಹೂಗಳನ್ನು ಅಚ್ಚುಕಟ್ಟಾಗಿ ಆರಿಸಿ ಹೊಂದಿಸಿಡಿ.
ಅರ್ಧಭಾಗ ಮಾಡಿದ ಎಳನೀರ ಕಾಯಿಯ ಒಳಗೆ ಜೇನು ಮೇಣವನ್ನು ತುಂಬಿಸಿಡಿ. ಇದರ ಮಧ್ಯದಲ್ಲಿ ಬೆತ್ತದ ಕಡ್ಡಿಯನ್ನು ನೆಡಿ. ನೀವೇ ಆರಿಸಿದ ಥೀಮ್ ಪ್ರಕಾರವಾಗಿ ಪುಷ್ಪಗಳಿಂದ ಅಲಂಕರಿಸಿ. ಡೈನಿಂಗ್ ಟೇಬಲ್‌ಗಷ್ಟೇ ಇಂಥ ಅಲಂಕಾರ ಸೀಮಿತವೇನಲ್ಲ. ಸ್ಟಡಿ ಟೇಬಲ್, ಬೆಡ್ ಸೈಡ್ ಕ್ಯಾಬಿನೆಟ್‌ಗಳಲ್ಲೂ ಅಲಂಕರಿಸಿಕೊಳ್ಳಬಹುದು. ಬಿಳಿ ಬಣ್ಣದ ಕಾಫಿ ಕಪ್‌ಗಳಲ್ಲಿ ಹೂಗಳನ್ನು ಇರಿಸಿದರೆ, ಅದೂ ಒಂದು ಸೌಂದರ್ಯದ ಸ್ವರ ಹೊಮ್ಮಿಸುತ್ತದೆ. ನಿತ್ಯವೂ ಹೂಗಳನ್ನು ಬದಲಿಸುತ್ತಿರಬೇಕಾದ ಅನಿವಾರ್ಯತೆಯಂತೂ ಇದ್ದೇ ಇರುತ್ತದೆ. ಇಷ್ಟೇ ಅಲ್ಲ... ಡೈನಿಂಗ್ ಟೇಬಲ್, ವರಾಂಡದಲ್ಲಿರುವ ಟೇಬಲ್‌ಗಳ ಮೇಲೆ ನಿಮಗೆ ತಿಳಿದಿರುವ ಸಣ್ಣ ಪ್ರಮಾಣದ ಪುಷ್ಪಾಲಂಕಾರ ಬಗೆ ಗೊತ್ತಿದ್ದರೆ, ಅದನ್ನೂ ರೂಪಿಸಿಡಿ. ಅದರ ಮೆರುಗೂ ವರ್ಣಿಸಲಸದಳ.

- ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!