ಮಹಿಳೆ-ಮನೆ-ಬದುಕು

ಕಾರ್ಪೇಟ್ ಪೇಟೆ

ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಮನೆಗಿಂತ ಸುಂದರ ಪರಿಸರ ಬೇರಾವುದಿದೆ? ಕಚೇರಿಗಿಂತ, ಹೊರಗಿನ ಜಂಜಾಟಕ್ಕಿಂತ ಸೂರೇ ವಾಸಿ ಎನ್ನುವ ತೃಪ್ತಿ. ಮನೆಯಲ್ಲಿ ಅಂಥ ವಾತಾವರಣ ನಿರ್ಮಾಣವಾಗಬೇಕಾದರೆ, ಅದಕ್ಕೊಂದಿಷ್ಟು ಶ್ರಮ ಸುರಿಯಲೇಬೇಕು.
ಮನೆಯನ್ನು ಕೆಲವರು ಹೆಚ್ಚು ಇಷ್ಟಪಡಲು ಇನ್ನೊಂದು ಕಾರಣವುಂಟು. ಇಲ್ಲಿ ಪ್ರತಿ ವಸ್ತು, ರೀತಿನೀತಿಗಳು ನಮ್ಮದೇ ಆಯ್ಕೆಗಳಾಗಿರುತ್ತವೆ. ಹೀಗಾಗಿ ದಿನ ಬಳಕೆಯ ವಸ್ತುಗಳೊಂದಿಗೆ ಕಿಟಕಿಗೆ ಬಳಸುವ ಕರ್ಟೈನ್, ಹಾಸಿಗೆ ಕವರ್, ಬೆಡ್‌ಶೀಟ್, ಫರ್ನಿಚರ್, ನೆಲಕ್ಕೆ ಹಾಸಿಕೊಂಡು ಮಲಗಿದಂತೆ ಇರುವ ಕಾರ್ಪೆಟ್ ಮೊದಲಾದವುಗಳ ಬಗ್ಗೆ ಮೊದಲೇ ಯೋಜನೆ ಹಾಕಿಕೊಳ್ಳಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಮನೆಯೊಳಗೆ ಬಳಸುವ ಕಾರ್ಪೆಟ್ ಬಗ್ಗೆಯೂ ಮೊದಲೇ ಸರಿಯಾದ, ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮನೆ ಸ್ವಚ್ಛವಾಗಿದೆ, ಶುಭ್ರವಾಗಿದೆ ಎಂದು ಎಲ್ಲರೂ ಹೇಳುವುದು ಗೋಡೆಯನ್ನು ನೋಡಿಯಾಗಲಿ, ದೇವರಮನೆಯನ್ನು ನೋಡಿಯಾಗಲಿ ಅಲ್ಲ. ಬದಲಾಗಿ ನೆಲ ಎಷ್ಟು ಸ್ವಚ್ಛವಾಗಿದೆ ಎಂಬುದರ ಆಧಾರದ ಮೇಲೆ.
ಒಮ್ಮೆ ಕಾರ್ಪೆಟ್ ಹಾಕಿಬಿಟ್ಟರೆ, ಅದು ಆದಷ್ಟು ಮನೆಯ ನೆಲವನ್ನು ರಕ್ಷಿಸುತ್ತದೆ ಮತ್ತು ಶುಭ್ರವಾಗಿಡುತ್ತದೆ. ಮನೆಯ ಹೊರಗೆ ಹಾಸುವ ಸಣ್ಣ ಕಾರ್ಪೆಟ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಇದು ಮಾರ್ಕೆಟ್‌ನಲ್ಲಿ ಹೆಚ್ಚು ಗುಣಮಟ್ಟ ಮಾತ್ರವಲ್ಲ ಅಗ್ಗವಾಗಿಯೂ, ಬೇರೆ ಬೇರೆ ವಿಧದಲ್ಲೂ ಸಿಗುತ್ತದೆ. ಜತೆಗೆ ನೈಸರ್ಗಿಕವಾದ ಕಾರ್ಪೆಟ್‌ಗಳೂ (ತೆಂಗಿನ ನಾರಿನಿಂದ ರೂಪಿಸಿದ) ಲಭ್ಯವಾಗುತ್ತವೆ.

ಮನೆಯ ಹಾಲ್, ವಿಶ್ರಾಂತಿ ಕೊಠಡಿಯಲ್ಲಿ ಬಳಸುವ ಕಾರ್ಪೆಟ್‌ಗಳು ಹೆಚ್ಚು ಬಾಳಿಕೆಯೊಂದಿಗೆ ಮನಸ್ಸಿಗೆ ಮುದ ನೀಡುವಂತಿರಬೇಕು. ಅಲ್ಲದೆ ಆಕರ್ಷಕವಾಗಿರಬೇಕು. ಹಾಲ್‌ನಲ್ಲಿಯೇ ಹೆಚ್ಚು ಕಾಲ ಕಳೆಯುವುದರಿಂದ ಹಾಗೂ ಅತಿಥಿಗಳು ಇಲ್ಲಿಯೇ ಕೂರುವುದರಿಂದ ಕಾರ್ಪೆಟ್ ಅವರ ಆಕರ್ಷಣೆಗೆ ಒಳಗಾಗಬೇಕು. ಜತೆಗೆ ಮನಸ್ಸಿಗೆ ಹಿತ ನೀಡುವಂತಿರಬೇಕು. ಇಂಥ ಕಾರ್ಪೆಟ್‌ಗಳನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಮೊದಲೇ ಯೋಜನೆ ಮಾಡಿಕೊಳ್ಳಬೇಕು.

ಕಾರ್ಪೆಟ್‌ಗಳನ್ನು ಹೆಚ್ಚಾಗಿ ಮನೆಯ ಹೃದಯ ಭಾಗದಲ್ಲಿ ಅಂದರೆ ಮಧ್ಯ ಹಾಸಲಾಗುತ್ತದೆ. ಹೀಗಾಗಿ ಅದು ಹೆಚ್ಚು ಆಕರ್ಷಕವಾದ ಬಣ್ಣ, ವಿನ್ಯಾಸವನ್ನೊಳಗೊಂಡಿರಲಿ. ಸಾಮಾನ್ಯವಾಗಿ ಎಲ್ಲ ಕಾಲಕ್ಕೂ ಒಗ್ಗಿಕೊಳ್ಳುವ ಕಾರ್ಪೆಟ್ ಅದಾಗಿರಲಿ. ಮಳೆಗಾಲದಲ್ಲಿ ಅದು ಒದ್ದೆಯಾದರೆ, ವಾಸನೆ ಬರಲಾರಂಭಿಸುತ್ತದೆ. ಸೊಳ್ಳೆಗಳೂ ಹುಟ್ಟಿಕೊಳ್ಳಬಹುದು. ಮಕ್ಕಳು, ಪ್ರಾಣಿಗಳು ಇರುವ ಮನೆಗೆ ತುಂಬಾ ಮೃದು ಮತ್ತು ಹೆಚ್ಚು ಗಾಢ ಬಣ್ಣದ ಕಾರ್ಪೆಟ್‌ಗಳು ಉತ್ತಮ. ಏಕೆಂದರೆ ಮೃದುವಾದ ಕಾರ್ಪೆಟ್‌ನಿಂದ ಮಕ್ಕಳಿಗೆ ಯಾವುದೇ ತೊಂದರೆಯಾಗದು. ಗಾಢ ಬಣ್ಣ ಕೊಳಕನ್ನು ಎತ್ತಿ ತೋರಿಸಲ್ಲ. ಪ್ರಾಣಿಗಳು ಹೆಚ್ಚಾಗಿ ತಮ್ಮ ಚೂಪಾದ ಉಗುರಿನಿಂದ ಕಾರ್ಪೆಟ್ ಹಾಳು ಮಾಡಬಹುದು. ಹೀಗಾಗಿ, ಮೃದು ಕಾರ್ಪೆಟ್ ಹೆಚ್ಚು ಸೂಕ್ತ. ಒಗೆದಾಗ, ಬಿಸಿಲಿಗೆ ಒಣ ಹಾಕಿ. ಇದರಿಂದ ಬಣ್ಣ ಹಾಳಾಗದು. ನಿಮ್ಮ ಮನೆಯ ಬಣ್ಣಕ್ಕೆ, ಲೈಟ್‌ಗೆ, ನೆಲಕ್ಕೆ ಒಗ್ಗಿಕೊಳ್ಳುವ, ಆದಷ್ಟು ಸಹಜ ಬಣ್ಣಗಳ ಕಾರ್ಪೆಟ್ ಉತ್ತಮವಾಗಿರುತ್ತದೆ.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಕಾರ್ಪೆಟ್‌ಗಳು ಲಭ್ಯ. ನಿಮಗೆ ಕೊಳ್ಳಲು ಎಷ್ಟು ಸಾಮರ್ಥ್ಯ ಇರುತ್ತದೋ, ಅಷ್ಟು ಬೆಲೆಯೊಳಗೆ ಈ ಕಾರ್ಪೆಟ್ ಖರೀದಿಸಿ. ಅತೀ ಆಕರ್ಷಕ ಕಾರ್ಪೆಟ್‌ಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು.

ನ್ಯಾಚುರಲ್ (ನೈಸರ್ಗಿಕ ಸೊತ್ತುಗಳಿಂದ ತಯಾರಿಸಿದ) ಮತ್ತು ಸಿಂಥೆಟಿಕ್ ಫೈಬರ್ಸ್ (ಕೃತಕ)ವಾದ ಕಾರ್ಪೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಸಿಂಥೆಟಿಕ್ ಫೈಬರ್ಸ್ ಕಾರ್ಪೆಟ್‌ಗಳು ನಿಮ್ಮ ಬಜೆಟ್‌ಗೆ ಅನುಗುಣವಾಗಿಯೂ ಇರುತ್ತವೆ ಮತ್ತು ಎಲ್ಲ ವಯೋವಾನದವರ ಬಳಕೆಗೆ ಯೋಗ್ಯ. ಮಾತ್ರವಲ್ಲ ಸಿಂಥೆಟಿಕ್ ಕಾರ್ಪೆಟ್‌ಗಳು ಬಳಸಲು, ಕ್ಲೀನ್ ಮಾಡಲು ಸುಲಭ. ಆದ್ದರಿಂದ ಮನೆಗೆ ಸೂಕ್ತ ಮತ್ತು ಎಲ್ಲರಿಗೂ ಇಷ್ಟವಾಗುವ ಕಾರ್ಪೆಟ್ ಖರೀದಿಸಿ. ನಿಮ್ಮ ಮನೆಯನ್ನು ಅಕರ್ಷವಾಗಿ ಕಾಣುವಂತೆ ಮಾಡಿ.

- ವಿದ್ಯಾ ಇರ್ವತ್ತೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!