ಕಾಫಿ ಮತ್ತು ಟೀ ಪುಡಿಯನ್ನು ಸ್ವಲ್ಪ ಬ್ಲಾಟಿಂಗ್ ಪೇಪರ್ ಮೇಲೆ ಹರಡಿ. ಅದರ ಮೇಲೆ 2-3 ಹನಿ ಪೊಟ್ಯಾಸಿಯಂ ಹೈಡ್ರಾಕ್ಸೈಡ್ ದ್ರಾವಣ ಹಾಕಿ. ಪುಡಿಯ ಸುತ್ತ ನೀಲಿ ಅಥವಾ ಕಂದು ಚುಕ್ಕೆಗಳು ಕಂಡುಬಂದರೆ ಅದು ಕಲಬೆರಕೆ ಎಂದು ತಿಳಿಯಬೇಕು.
ತರಕಾರಿಗಳನ್ನು ಹೆಚ್ಚುವಾಗ ಬಹಳ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಬೇಡಿ. ಮಾಡಿದರೆ ಅವುಗಳಲ್ಲಿನ ಜೀವಾಣುಗಳು, ಲವಣಗಳು ಮತ್ತು ಇತರ ಅಂಶಗಳು ನಷ್ಟ ಹೊಂದುತ್ತವೆ.
ಪ್ರಜ್ಞೆ ತಪ್ಪಿದ ವ್ಯಕ್ತಿಯ ಕಿವಿ ಮತ್ತು ಮೂಗಿನಲ್ಲಿ ಈರುಳ್ಳಿಯನ್ನು ಹಿಸುಕಿ ಇಟ್ಟರೆ, ಪ್ರಜ್ಞೆ ಬರುತ್ತದೆ.
ಧಾನ್ಯಗಳಿಗೆ ಹುಳು ಹಿಡಿಯದಂತಿರಲು ಅವನ್ನು ಇಟ್ಟಿರುವ ಡಬ್ಬದಲ್ಲಿ ಒಂದೆರಡು ಒಣಗಿದ ಬೇವಿನ ಸೊಪ್ಪನ್ನು ಹಾಕಿ ಮುಚ್ಚಿಟ್ಟರೆ ಸಾಕು.