ಡೆಮಾ ಕಂಪನಿಯವರು ಇತ್ತೀಚೆಗೆ ಅಡುಗೆಮನೆಗೊಂದು ಹೊಸ ಪಾಟ್ ರೂಪಿಸಿದ್ದಾರೆ. ಇದಕ್ಕೆ ಮಿಕ್ಸೆಡ್ ಹರ್ಬ್ಸ್ ಪಾಟ್ ಎಂದು ಹೆಸರು. ಇದರಲ್ಲಿ ಅಡಗಿಸಿಡುವ ಯಾವ ಪದಾರ್ಥವೂ ಬೇಗನೆ ಕೆಡುವುದಿಲ್ಲ. ಅಷ್ಟೇ ಅಲ್ಲ, ಇದು ತನ್ನ ಮೈಮಾಟದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ. ಅಷ್ಟು ಅಂದವಾಗಿ ಇದನ್ನು ರೂಪಿಸಲಾಗಿದೆ. ಈ ಡಬ್ಬಿಯನ್ನು ಸೀಲ್ ರಬ್ಬರ್‌ನಿಂದ ರೂಪಿಸುವುದರಿಂದ ಇದರಲ್ಲಿ ಪದಾರ್ಥ ಯಾವಾಗಲೂ ಫ್ರೆಶ್ ಆಗಿರುತ್ತದೆ. ಅಂದಹಾಗೆ ಇದರ ಮೌಲ್ಯ ರು. 495 ಮಾತ್ರ.
ಫ್ರೆಂಚ್ ಗಡಿಯಾರ
ಬಹುಶಃ ಈ ಗಡಿಯಾರವನ್ನು ನೋಡಿದರೆ ತುಂಬಾ ಹಳೆಯದರಂತೆ ಕಾಣುತ್ತದೆ. ಅದರಲ್ಲಿ ಅನುಮಾನವೇ ಬೇಡ. ಆದರೆ, ಇದರ ವಿನ್ಯಾಸವೇ ಹೀಗೆ. ಈ ಗಡಿಯಾರ ಫ್ರೆಂಚ್ ಮಾದರಿಯಾಗಿದ್ದು ರೋಜರ್ ಲ್ಯಾಸೆಲ್ಸ್ ಫ್ರೆಂಚ್ ಎಂಬ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೆಂಡಿನಲ್ಲಿ ಈ ಗಡಿಯಾರ ರೆಡಿಯಾಗುತ್ತದೆ. ಉತ್ಪಾದಕ ಸಂಸ್ಥೆ ರೋಜರ್ ಲ್ಯಾಸೆಲ್ಸ್. ಅಂದಹಾಗೆ ಇದರ ಬೆಲೆ 5,402.