ಮಹಿಳೆ-ಮನೆ-ಬದುಕು

ಇಂಡಕ್ಷನ್ ನೋ ಟೆನ್ಷನ್

ಬೆಳಗ್ಗೆ ಬೆಳಗ್ಗೆ ಎದ್ದು ಅಡುಗೆ ಮಾಡುವುದು ಪ್ರಯಾಸದ ಕೆಲಸವೇ ಸೈ. ಬೇರೆ ಎಲ್ಲ ಮನೆಕೆಲಸಗಳ ನಡುವೆ ಪ್ರತಿ ನಿಮಿಷವೂ ಗಡಿಬಿಡಿಯಿಂದ ಕೂಡಿರುವಾಗ ಅಡುಗೆ ಸುಲಭವಾದರೆ ಎಷ್ಟೋ ಒತ್ತಡ ಕಡಿಮೆಯಾಗುತ್ತದೆ. ಅದು ಹೇಗೆ ಸಾಧ್ಯ ಎಂದೆಣಿಸುತ್ತಿರುವಿರಾ? ಮೊದಲು ಒಲೆಯನ್ನು ಬದಲಾಯಿಸಿ. ಹಲವಾರು ವಿಶಿಷ್ಟ ಸೌಲಭ್ಯಗಳೊಂದಿಗೆ ಬಂದಿರುವ ಇಂಡಕ್ಷನ್ ಒಲೆ ಅಡುಗೆಯನ್ನು ಬಹಳ ಸುಲಭವಾಗಿಸುತ್ತದೆ.
ಹೆಚ್ಚು ಸುರಕ್ಷಿತ
ಬೆಂಕಿಯಿರುತ್ತದೆಂಬ ಕಾರಣಕ್ಕೆ ಹಲವು ಮನೆಯಲ್ಲಿ ಮಕ್ಕಳಿಗೆ ಅಡುಗೆ ಮನೆಯೊಳಗೆ ಪ್ರವೇಶವೇ ಇರುವುದಿಲ್ಲ. ಇದರಿಂದ ಮುಂದಿನ ಸೂಪರ್ ಚೆಫ್ ಅನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ. ಇಂಡಕ್ಷನ್ ಒಲೆ ಇದ್ದರೆ ಬೆಂಕಿಯ ಭಯವೇ ಇರುವುದಿಲ್ಲ. ಇಲ್ಲಿ ಜ್ವಾಲೆ ಇರುವುದಿಲ್ಲ. ಒಂದು ವೇಳೆ ಒಲೆ ಮೇಲೆ ಕೈ ಇಟ್ಟರೂ ಸುಟ್ಟ ಗಾಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ಉಷ್ಣತೆ ಅಯಸ್ಕಾಂತೀಯ ಸಾಧನದ ಮೂಲಕ ಹಾದು ಹೋಗುತ್ತದೆ.
ಹೆಚ್ಚು ಪರಿಣಾಮಕಾರಿ
ಪರಿಸರಸ್ನೇಹಿಯಾದ ಅಡುಗೆ ಒಲೆ ಇಂದಿನ ಅಗತ್ಯ. ಇಂಡಕ್ಷನ್ ಒಲೆ ವಿದ್ಯುತ್ ಉಳಿತಾಯಕ್ಕೆ ಕಾರಣವಾಗುತ್ತದೆ. ವಿದ್ಯುತ್ ಇಲ್ಲಿ ಪೋಲಾಗುವುದಿಲ್ಲ. ಬದಲಿಗೆ ಅಡುಗೆ ಮನೆಯನ್ನು ತಂಪಾಗಿಸುತ್ತದೆ.

- ಮಿಥುನ್ ಚಿಟ್ಟಿಲಪಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!