ಜುವಾರಿ ಕಂಪನಿಯು ಇಂಪೀರಿಯಲ್ ಟೀಕ್‌ನಿಂದ ಹೊಸ ಟೇಬಲ್ ರೂಪಿಸಿದೆ. ಬೆಡ್‌ರೂಮ್‌ನಲ್ಲಿ ಬೆಡ್ ಹತ್ತಿರ ಇಡುವ ಈ ಟೇಬಲ್ ಅನ್ನು ಅತ್ಯಾಧುನಿಕವಾಗಿ ತಯಾರಿಸಲಾಗಿದೆ. ಎರಡು ಡ್ರಾಗಳನ್ನು ಹೊಂದಿರುವ ಟೇಬಲ್‌ಗೆ ಅಲ್ಪಪ್ರಮಾಣದ ಫೈಬರ್ ಅನ್ನೂ ಬಳಸಲಾಗಿದೆ. ಜತೆಗೆ ತುಂಬಾ ಮೃದುವಾಗಿ ಇದನ್ನು ರೂಪಿಸಲಾಗಿದ್ದು, ಓದಲು, ಬರೆಯಲು, ವೈಯಕ್ತಿಕ ವಸ್ತುಗಳನ್ನು ಇಟ್ಟುಕೊಳ್ಳಲು ಇದು ಸುಲಭ. ಅಂದಹಾಗೆ ಇದರ ಬೆಲೆ ರು. 3,475.
ಗೋಡೆಗೆ ಫಿಲಿಪ್ಸ್ ಬೆಳಕು
ಸೂರ್ಯ ಮುಳುಗುತ್ತಿದ್ದಂತೆ ಸೂರಿನಲ್ಲಿ ಕತ್ತಲು. ಆದರೆ, ಅಲ್ಲಿಯೂ ಮರಿಸೂರ್ಯ ಬೆಳಗುತ್ತಿದ್ದರೆ ಎಷ್ಟು ಚೆನ್ನ! ಅದಕ್ಕಾಗಿಯೇ ಫಿಲಿಪ್ಸ್ ಕಂಪನಿಯು ಈಗ ಗೋಡೆಗೆ ಅಳವಡಿಸುವ ಹೊಸ ಮಾದರಿಯ ಬಲ್ಬ್ ಮತ್ತು ಸಾಧನವನ್ನು ತಯಾರಿಸಿದೆ. ಇದು ಸಂಪೂರ್ಣವಾಗಿ ಗ್ಲಾಸ್‌ನಿಂದ ಕೂಡಿದ್ದು ಬಿಳಿ ಬಣ್ಣದ್ದಾಗಿದೆ. ಗೋಡೆಯ ಬಣ್ಣವೂ ಅದೇ ಬಣ್ಣದ್ದಾಗಿದ್ದರೆ ಬೆಳಕು ಮತ್ತಷ್ಟು ಮಿನುಗುತ್ತದೆ. ಅಷ್ಟೇ ಅಲ್ಲ, ಈ ಬಲ್ಬ್ ನಿಮಗೆ ಶೇ.80ರಷ್ಟು ವಿದ್ಯುತ್ ಅನ್ನು ಉಳಿತಾಯ ಮಾಡುತ್ತದೆಯಂತೆ. ಅಂದಹಾಗೆ ಇದರ ಬೆಲೆ ರು. 1700.