ಸೂರು ಕಟ್ಟುವಾಗ ಸ್ನಾನದ ಕೋಣೆಗೆ ಉಳಿದ ರೂಮ್‌ಗಳಿಗಿಂತ ಹೆಚ್ಚು ಗಮನ ಹರಿಸುವವರ ಸಂಖ್ಯೆ ಕಡಿಮೆ. ಹಾಗೆಂದು ಅದನ್ನು ಸಂಪೂರ್ಣವಾಗಿ ಯಾರೂ ಕಡೆಗಣಿಸುವುದಿಲ್ಲ. ಉಳ್ಳವರು ದೊಡ್ಡ ಪ್ರಮಾಣದಲ್ಲಿ, ಉಳ್ಳದವರು ಸಿಂಪಲ್ಲಾಗಿ ಸ್ನಾನದ ಕೋಣೆಯನ್ನು ರೂಪಿಸಿಕೊಳ್ಳುತ್ತಾರೆ. ಆದರೆ, ಅಂದಚೆಂದದಲ್ಲಿ ಮಾತ್ರ ಎಡವುತ್ತಾರೆ. ಹಾಗಾದರೆ ಕಡಿಮೆ ಜಾಗದಲ್ಲೇ ಹೆಚ್ಚು ಬಾತ್‌ರೂಂ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು? ಯಾವ ರೀತಿಯ ವಸ್ತುಗಳಿದ್ದರೆ ಚೆನ್ನ? ಇಲ್ಲಿವೆ ಕೆಲವು ಐಡಿಯಾಗಳು...
- ಬಾತ್‌ರೂಮ್‌ನ ಬಾಗಿಲಿನ ಹಿಂದೆ ಟವೆಲ್, ಬಟ್ಟೆಯನ್ನು ಹಾಕಲು ಸ್ಟೀಲಿನ ಸಳಿಯನ್ನು ಅಳವಡಿಸಿ.
- ಬಾತ್‌ರೂಮ್‌ಗೆ ಅಳವಡಿಸುವ ವಾಲ್ ಕ್ಯಾಬಿನೆಟ್‌ಗಳು ಮಾರುಕಟ್ಟೆಯಲ್ಲಿವೆ. ಎರಡು, ಮೂರು ಅಥವಾ ಅದಕ್ಕಿಂತ ಹೆಚ್ಚಿನ ರೋಗಳಿರುವ ಕ್ಯಾಬಿನೆಟ್‌ಗಳನ್ನು ಹಾಕಿ.
- ಕನ್ನಡಿ ಸಣ್ಣದಿದ್ದರೆ ಸಾಕು. ಕನ್ನಡಿಯ ಕೆಳಗೆ ಕಟ್ಟಿಗೆಯಿಂದ ಮಾಡಿದ ಕಪಾಟು ಇದ್ದರೆ ಚೆನ್ನ. ಇದರಲ್ಲಿ ನಿತ್ಯದ ಉಡುಪುಗಳನ್ನು ಸಂಗ್ರಹಿಸಿಡಬಹುದು.
- ಅನಾ ಎಂಬ ಕಂಪನಿಯು ಏಣಿಯಂತೆ ವಸ್ತು ಸಂಗ್ರಹಿಸುವ ಸಾಧನವನ್ನು ರೂಪಿಸಿದ್ದು, ಬಾತ್‌ರೂಮ್‌ನಲ್ಲಿ ಯಾವ ಭಾಗದಲ್ಲಾದರೂ ಇದನ್ನು ಇಡಬಹುದು.
- ಕನ್ನಡಿಯ ಅಕ್ಕಪಕ್ಕದಲ್ಲಿ ಗೂಡು ತಯಾರಿಸಿಬಹುದು. ಇದಕ್ಕೆ ವ್ಯಾನಿಟಿ ನಿಚೆಸ್ ಎಂಬ ಹೆಸರು. ಇದು ತುಂಬಾ ಬಾತ್‌ರೂಮ್‌ನ ಹಳೆಯ ವಿನ್ಯಾಸ.
- ಸುಲಭವಾಗಿ ಎತ್ತಿಡಬಹುದಾದ ಸ್ಟೀಲ್‌ಸ್ಟ್ಯಾಂಡನ್ನು ಇಡಬಹುದು. ಅದರ ಮೇಲೆ ಪರದೆ ಹಾಕಿದರೆ, ಎಷ್ಟು ಬೇಕೋ ಅಷ್ಟು ವಸ್ತುಗಳನ್ನು ಇಟ್ಟುಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics