ಮನೆ ನಿರ್ಮಾಣ ಹಾಗೂ ಅದರ ಆಂತರಿಕ ವಿನ್ಯಾಸ ಈಗ ಜನಪ್ರಿಯ. ಬದಲಾಗುತ್ತಿರುವ ಅಭಿರುಚಿ, ವಿಜ್ಞಾನ ಹಾಗೂ ಜೋತಿಷ್ಯ ಶಾಸ್ತ್ರದ ಆಧಾರದಲ್ಲಿಯೇ ಮನೆ ನಿರ್ಮಿಸುತ್ತಿದ್ದರೂ, ಕೆಲವು ಸಂಗತಿಗಳನ್ನು ನಾವು ಗಮನಿಸಲೇಬೇಕು. ಹಾಗಾದರಷ್ಟೇ ಮನೆಯ ಸೌಂದರ್ಯಕ್ಕೆ ಮತ್ತಷ್ಟು ಜೀವ ತುಂಬಲು ಸಾಧ್ಯ.
- ಮುಖ್ಯವಾಗಿ ನಾವೆಲ್ಲ ಲಿವಿಂಗ್ ರೂಂ ಎಂದು ಹೇಳುವ, ಅತಿಥಿಗಳು ಬಂದಾಕ್ಷಣ ಸ್ವಾಗತಿಸುವ ಕೋಣೆ ಹಲವು ವಿಶೇಷತೆ ಹೊಂದಿರಬೇಕು. ಗೋಡೆಯ ಬಣ್ಣವನ್ನಾಧರಿಸಿ, ಅಲ್ಲಿ ವಿವಿಧ ಕಲಾಕೃತಿಗಳನ್ನು ಅಳವಡಿಸಬೇಕು.
- ಗೋಡೆಗೆ ಹೆಚ್ಚಾಗಿ ಹಸಿರು ಬಣ್ಣ ಹೊಂದಿರುವ (ಪ್ರಾಕೃತಿಕ) ಚಿತ್ರಗಳನ್ನು ಅಳವಡಿಸುವುದು ಸೂಕ್ತ. ಹಸಿರು ಎಲ್ಲರ ಮನಸ್ಸಿಗೆ ಒಪ್ಪುವ ಬಣ್ಣ.
- ಪೇಂಟಿಂಗ್‌ಗಳು ಕೋಣೆಯ ಮೆರಗನ್ನು ಹೆಚ್ಚಿಸಲು ಸಹಕಾರಿ. ಆದರೆ, ಅವುಗಳ ಆಯ್ಕೆ ವೇಳೆಯಲ್ಲಿ ವೈವಿಧ್ಯತೆಯ ಚಿತ್ರಗಳಿಗೆ ಆದ್ಯತೆ ನೀಡಿ.
- ಮನೆಯಲ್ಲಿನ ಹಳೇ ಕಾಲದ ಪೋಟೋಗಳಿಗೆ (ಬ್ಲ್ಯಾಕ್ ಮತ್ತು ವೈಟ್ ಚಿತ್ರಗಳಿಗೆ) ಮೆರಗು ನೀಡುವ ಫ್ರೇಮ್‌ಗಳನ್ನು ಅಳವಡಿಸಿ ಗೋಡೆಗೆ ನೇತಾಕಿ. ಇದು ನಮ್ಮ ಅಭಿರುಚಿ ಮತ್ತು ಕುಟುಂಬದ ಹಿನ್ನೆಲೆಯನ್ನು ಕ್ಷಣಾರ್ಧದಲ್ಲಿಯೇ ಅತಿಥಿಗಳಿಗೆ ತಿಳಿಸಲು ಸಾಧ್ಯವಾಗುತ್ತದೆ.
- ಗೋಡೆಯ ಬಣ್ಣಕ್ಕೆ ವಿರುದ್ಧವಾದ ವರ್ಣ ಕಲಾಕೃತಿಗಳನ್ನೇ ಆಯ್ಕೆ ಮಾಡಿ.
- ನೀವಿದ್ದ ಪ್ರದೇಶದಲ್ಲಿ ಪೇಂಟಿಂಗ್ ಉತ್ಸವಗಳು ನಡೆಯುತ್ತಿದ್ದರೆ ಅಲ್ಲಿಗೆ ಭೇಟಿ ನೀಡಿ. ಉತ್ತಮವಾದುದನ್ನು ಖರೀದಿಸಿ.
- ಸಸ್ಯಗಳು, ಹೂವಿನ ಚಿತ್ರಗಳು, ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿ. ವನ್ಯಮೃಗಗಳ ಚಿತ್ರಗಳೂ ಗೋಡೆಗೆ ಸೂಕ್ತ ಎನ್ನುವ ಭಾವನೆ ನಿಮ್ಮದಾಗಿದ್ದಲ್ಲಿ ಅವುಗಳನ್ನು ಖರೀದಿಸಿರಿ. ಆದರೆ, ವನ್ಯಜೀವಿಗಳ ಚಿತ್ರಗಳು ಮನೆಯ ವಾತಾವರಣಕ್ಕೆ ಹೊಂದಿಕೆಯಾಗದೆ ಇರುವುದರಿಂದ ಅವುಗಳಲ್ಲಿಯೇ ಸಾಫ್ಟ್ ಭಾವ ಹುಟ್ಟಿಸುವ ಚಿತ್ರಗಳನ್ನು ಖರೀದಿಸಿರಿ.
- ಮಕ್ಕಳ ಕೋಣೆಗಳಿಗೆ ಸಾಧ್ಯವಾದಷ್ಟು ಮನ ಅರಳಿಸುವ ಬಣ್ಣಗಳನ್ನೇ ಆಯ್ದುಕೊಳ್ಳಿ.
- ಸಾಧ್ಯವಾದಷ್ಟು ಚೂಪಾದ, ನುಣುಪಾದ ವಸ್ತುಗಳನ್ನು ಅವರ ರೂಂನಲ್ಲಿ ಅಳವಡಿಸಬೇಡಿ. ಮಕ್ಕಳ ರೂಂನಲ್ಲಿ ದೇಶಭಕ್ತಿ, ಶೌರ್ಯ, ಮಮತೆ, ದೈವಭಕ್ತಿ ಮೂಡಿಸುವ ಚಿತ್ರಗಳನ್ನು ಅಳವಡಿಸುವುದರಿಂದ ಅವರ ಚೈತನ್ಯಕ್ಕೆ ಸಹಕಾರಿಯಾಗುತ್ತದೆ.
- ಮಕ್ಕಳ ರೂಂನಲ್ಲಿ ಸಾಧ್ಯವಾದಷ್ಟು ಕಡಿಮೆ ಫರ್ನಿಚರ್ ಅಳವಡಿಸುವುದು ಸೂಕ್ತ. ಇದರಿಂದ ಮಗುವಿಗೆ ಹೆಚ್ಚು ಆಟವಾಡಲು ಸಹಕಾರಿ.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics