ಮಹಿಳೆ-ಮನೆ-ಬದುಕು

ಚಂದ್ರಲಾ ಲಹರಿ

ಯಾವುದಾದರೊಂದು ಲೇಖನ ಕೊಟ್ಟು ಓದು ಎಂದರೆ 'ಆಂಟಿ ನನಗೆ ಕನ್ನಡ ಫ್ಲ್ಯೂಯೆನ್ಸಿ ಇಲ್ಲ. ಅಮ್ಮನಿಗೆ ಕೊಡುತ್ತೇನೆ' ಎನ್ನುವ ಯುವಜನರ ಮಧ್ಯ ನವೆಂಬರ್...

ಯಾವುದಾದರೊಂದು ಲೇಖನ ಕೊಟ್ಟು ಓದು ಎಂದರೆ 'ಆಂಟಿ ನನಗೆ ಕನ್ನಡ ಫ್ಲ್ಯೂಯೆನ್ಸಿ ಇಲ್ಲ. ಅಮ್ಮನಿಗೆ ಕೊಡುತ್ತೇನೆ' ಎನ್ನುವ ಯುವಜನರ ಮಧ್ಯ ನವೆಂಬರ್ ತಿಂಗಳ ಕನ್ನಡ ಕಹಳೆ ಅರಣ್ಯರೋದನವಾಗುತ್ತಿದೆಯೇ ಎನಿಸದಿರದು. ಆದರೆ ಡಿವಿಜಿಯವರ ನುಡಿಯಂತೆ 'ಇಳೆಯಿಂದ ಮೊಳಕೆಯೊಡೆವಂದು ತಮಟೆಗಳಿಲ್ಲ, ಫಲಮಾಗುವಂದು ತುತ್ತೂರಿ ದನಿಯಿಲ್ಲ, ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ'ವೆಂಬಂತೆ ಅನೇಕ ಮಹಿಳೆಯರಿಂದ ಸದ್ದಿಲ್ಲದೇ ಕನ್ನಡದ ಸೇವೆ ಆಗುತ್ತಿರುವುದು ಕನ್ನಡಾಂಬೆ ಬಂಜೆಯಲ್ಲವೆಂಬುದನ್ನು ಸಾಬೀತುಪಡಿಸುತ್ತಿದೆ.
ಅಂಥ ಸಾಧಕರು ಹರಿಹರದ ಚಂದ್ರಲಾ ನಾಯಕ್. ಅವರು ಕನ್ನಡದ ಸಾಹಿತ್ಯಮಾಲೆಗೆ ತಮ್ಮೆರಡು ಕೃತಿಗಳನ್ನು ಸೇರಿಸಿ ಶ್ರೀಮಂತವಾಗಿಸಿದ್ದಾರೆ. ಈ ಕೃತಿಗಳು ಹಲವು ಬಾರಿ ವಾಚನಗೊಂಡಿವೆ. ಕೇಳುಗರಿಗೂ, ವಾಚಿಸುವವರಿಗೂ ಆನಂದವನ್ನುಂಟುಮಾಡಿವೆ.
ಕನ್ನಡದ ಅಪೂರ್ವ ಛಂದಸ್ಸಾದ ಭಾಮಿನಿ ಹಾಗೂ ವಾರ್ಧಕ ಷಟ್ಪದಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿ ಪಂಡಿತ ಹಾಗೂ ದೇಶಿ ಭಾಷೆಗಳೆರಡನ್ನು ಬಳಸಿ ಪಂಡಿತ- ಪಾಮರರಿಗೆ ಕಾವ್ಯದಲ್ಲಿ ಆಸಕ್ತಿ ಮೂಡಿಸಿ ಕಾವ್ಯಗಳನ್ನು ಆಸ್ವಾದಿಸುವಂತೆ ರಚಿಸಿದ್ದಾರೆ. ಕಾವ್ಯಗುಣ, ಗೇಯತೆ, ಲೋಕೋಕ್ತಿಗಳು, ಭಾವದ ಮಾಧುರ್ಯ, ಕಥಾವಸ್ತು, ಪಾತ್ರ ಪೋಷಣೆ, ರಸಭಾವ ನಿರೂಪಣೆ, ಪದಪೋಷಣೆ ಹಾಗೂ ಉದಾರ-ಗಂಭೀರ- ಭಾವನೆಗಳಿಂದ ಎರಡೂ ಕಾವ್ಯಗಳು ಉತ್ಕೃಷ್ಟವಾಗಿವೆ.
ಚಂದ್ರಲಾರವರ ಅರ್ಥಪೂರ್ಣವಾದ ರಚನೆ ಅವರ ಸದಭಿರುಚಿಯನ್ನು ಬಿಂಬಿಸುತ್ತದೆ. ಅವರ ಚೊಚ್ಚಲ ಕೃತಿ 'ಶ್ರೀ ಚಂದ್ರಲಾ ಪರಮೇಶ್ವರಿ ಚರಿತೆ' ಭಾಮಿನಿ ಷಟ್ಪದಿ ಕಾವ್ಯವಾಗಿದ್ದು, ಏಳು ಸಂಧಿಗಳಿವೆ. ಮಂಗಳಾಚರಣೆ ಪದ್ಯಗಳಿಂದ ಪ್ರಾರಂಭವಾಗುವ ಕೃತಿ ನಮಗರಿವಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಸನ್ನತಿ ಅದ್ಭುತ ಜಾಗೃತ ಸ್ಥಳವಾಗಿದ್ದು, ಮಾತೆ ಚಂದ್ರಲಾಪರಮೇಶ್ವರಿಯ ಕ್ಷೇತ್ರವಾಗಿದೆ. ಈ ದೇಗುಲವು ಬೌದ್ಧರ ಕಾಲದಲ್ಲಿ ಭಗವತಿಯ ಪವಿತ್ರ ಸ್ಥಾನ, ಶೈವರ ಕಾಲದಲ್ಲಿ ಪಾರ್ವತಿ ಮಹಾಂಕಾಳಿಯರ ಸ್ಥಾನ, ವೈಷ್ಣವರಿಗೆ ಶ್ರೀರಮಾ ಸರಸ್ವತಿಯರ ಸ್ಥಾನವಾಗಿದ್ದು ಇಂದು ಚಂದ್ರಲಾ ದೇಗುಲವೆನಿಸಿದೆ. ಈ ಕಥೆಯನ್ನು 'ಶ್ರೀ ಚಂದ್ರಲಾ ಪರಮೇಶ್ವರಿ' ಕಾವ್ಯದಲ್ಲಿ ಮನೋಹರವಾಗಿ ಹಿಡಿದಿಡಲಾಗಿದೆ.  
ಎರಡನೇ ಕೃತಿ 'ಶ್ರೀ ಹರಿಹರೇಶ್ವರ ಮಹಾತ್ಮೆ'. ಇದು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದೆ. ವಿಶೇಷವೆಂದರೆ ಇವರು ಮಾರುಕಟ್ಟೆ ದೃಷ್ಟಿಯಿಂದ ಕಾವ್ಯ ರಚಿಸಿದವರಲ್ಲ, ಕನ್ನಡವನ್ನು ಉಳಿಸಿ, ಬೆಳೆಸುವುದಕ್ಕೋಸ್ಕರ, ತಮ್ಮ ಮನಸ್ಸಂತೋಷಕ್ಕೆ ಕಾವ್ಯ ರಚಿಸಿ, ಪ್ರಕಟಿಸಿ ಬಂಧು-ಮಿತ್ರರಿಗೆ, ಪರಿಚಿತರಿಗೆ ಹಂಚಿ ಬದುಕಿನ ಸಾರ್ಥಕತೆ ಪಡೆಯುತ್ತಿದ್ದಾರೆ. ಇಂಥ ಅಪೂರ್ವ ಮಹಿಳಾ ಪ್ರತಿಭೆಗಳು ಬೆಳಕಿಗೆ ಬರಲಿ, ಕನ್ನಡ ಸಾಹಿತ್ಯ ಬೆಳೆಯಲಿ ಎಂಬುದೇ ಆಶಯ.ಟಿ

- ಸೀತಾ ಎಸ್. ನಾರಾಯಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು