ಮನೆಯಲ್ಲಿ ಬೇಕಾದ ವಸ್ತುಗಳ ನಡುವೆ ಬೇಡದ ವಸ್ತುಗಳೂ ಇರುತ್ತವೆ. ಲಿವಿಂಗ್ ರೂಂ, ಬೆಡ್ರೂಮ್ನಲ್ಲಂತೂ ಇವುಗಳ ಕಾಟ ಕೆಲವೊಮ್ಮೆ ಹೆಚ್ಚಾಗಿಯೇ ಇರುತ್ತದೆ. ರೂಮ್ಗಳು ಚಿಕ್ಕದ್ದಾಗಿದ್ದರಂತೂ ಕಥೆ ಮುಗಿಯಿತಂತಲೇ. ಹೀಗಾಗಿ ಅವುಗಳು ಬೇಡವೆಂದಾಗ ತಕ್ಷಣವೇ ಗೇಟ್ಪಾಸ್ ನೀಡಿ. ಇಲ್ಲವಾದರೆ, ಅವುಗಳನ್ನು ತೆಗೆದಿಡಲೆಂದೇ ಪ್ರತ್ಯೇಕ ರೋ ಅನ್ನು ನಿಮ್ಮ ರೂಮ್ನಲ್ಲಿ ಮಾಡಿಸಿರಬೇಕಾಗುತ್ತದೆ.