ಮಹಿಳೆ-ಮನೆ-ಬದುಕು

ಉಮಾ ಚಿತ್ರ ಮಂದಿರ

ಅದ್ಭುತ ಚಿತ್ರಕಲೆ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರುವವರ ಸಾಲಿನಲ್ಲಿ ನಿಲ್ಲುವ ಬೆಂಗಳೂರಿನ ಶ್ರೀನಿವಾಸನಗರದ ಉಮಾ ಸತೀಶ್, ತಮ್ಮೀ ಕಲಾ ಸಾಧನೆಗೆ ಮಾಧ್ಯಮವಾಗಿ ಆಯ್ದುಕೊಂಡಿದ್ದು ಕೊಬ್ಬರಿಯನ್ನು. ಮನೆಯ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಹೇಗಾದರೂ ಸುಧಾರಿಸಬೇಕು, ತಾವೂ ಸಮಾಜದಲ್ಲಿ ಚೆನ್ನಾಗಿ ಬಾಳಬೇಕು, ಮನೆಗೆ ತನ್ನಿಂದಾದ ಕಿಂಚಿತ್ ಸಹಾಯ ಮಾಡಬೇಕು ಎಂದು ಯೋಚಿಸುತ್ತಿರುವಾಗ ಮೊಳೆತದ್ದೇ 'ಕೊಬ್ಬರಿ ಕಲೆ'.
18 ವರ್ಷಗಳಿಂದ ಈ ಉದ್ಯೋಗದಲ್ಲಿ ನಿರತರಾಗಿರುವ ಉಮಾ, ಮೊದಮೊದಲು ತಮ್ಮ ಮನಸ್ಸಿಗೆ ಬಂದ ದೇವ, ದೇವತೆಯರ ಚಿತ್ರಗಳನ್ನು ಬಿಡಿಸುತ್ತಿದ್ದರು. ಕೇವಲ ಕೊಬ್ಬರಿ ಕೆತ್ತನೆಯಿಂದ ಪ್ರಾರಂಭವಾದ ಇವರ ಕಲೆ ಈಗ ಮರದ ಗೊಂಬೆಗಳಿಗೆ ಅಲಂಕಾರ ಮಾಡುವುದು, ಮದುವೆಯಲ್ಲಿ ವಧುವಿಗೆ ಅಲಂಕಾರ, ಬಾಸಿಂಗ ತಯಾರಿಕೆವರೆಗೂ ವಿಸ್ತರಿಸಿದೆ. ವಿಶೇಷವೆಂದರೆ ಇವರು ಮೇಣ(ವ್ಯಾಕ್ಸ್)ದಿಂದ ತಯಾರಿಸಿದ ವಿವಿಧ ಬಗೆಯ ಸಿಹಿ ತಿಂಡಿಗಳು, ಭಕ್ಷ್ಯಗಳು, ಮಸಾಲೆ ದೋಸೆ ಮುಂತಾದ ತಿಂಡಿಗಳು ಎಷ್ಟು ನೈಜವಾಗಿವೆಯೆಂದರೆ ನೋಡುಗರ ಬಾಯಲ್ಲಿ ನೀರೂರಿಸುತ್ತವೆ.
'ಕೊಬ್ಬರಿ ಕಲೆಯಲ್ಲಿ ಪ್ರಮುಖವಾದದ್ದು ಕೊಬ್ಬರಿ ಆಯ್ಕೆ. ಕೊಬ್ಬರಿ ಚೆನ್ನಾಗಿ ಬಲಿತು, ಚಪ್ಪಟೆ ತಳ ಹೊಂದಿರಬೇಕು. ಸರಿಯಾಗಿ ಒಣಗಿದ ಹಾಗೂ ಉತ್ತಮ ರೂಪು ಹೊಂದಿದ ಕೊಬ್ಬರಿಯಲ್ಲಷ್ಟೇ ವಿನ್ಯಾಸ ಸುಂದರವಾಗಿ ಮೂಡಿಬರಲು ಸಾಧ್ಯ. ವರಪೂಜೆಗೆ ಕೊಬ್ಬರಿ ಇಟ್ಟಾಗ 'ಯಾರು ಮಾಡಿದ್ದು? ಚೆನ್ನಾಗಿದೆ' ಎಂದು ಜನ ಮಾತನಾಡುವಾಗ ಕಲಾವಿದರಿಗೆ ಇದಕ್ಕಿಂತ ತೃಪ್ತಿಯ ವಿಷಯ ಬೇರೇನಿದೆ' ಎನ್ನುತ್ತಾರೆ ಉಮಾ ಸತೀಶ್.
ಇದುವರೆಗೆ ಸುಮಾರು ಒಂಬತ್ತು ಸಾವಿರ ಕೊಬ್ಬರಿ ಕೆತ್ತನೆ ಮಾಡಿದ್ದಾರೆ. ದೇವ, ದೇವತೆಯರ ಚಿತ್ರಗಳ ಜತೆ ವಿವಿಧ ವಿನ್ಯಾಸಗಳ ಹೂವಿನ ಬುಟ್ಟಿ, ವೀಣೆ, ಕುಂಕುಮದ ಬಟ್ಟಲು, ಅಕ್ಷತೆಯ ಬಟ್ಟಲು, ಪನ್ನೀರುದಾನಿ... ಹೀಗೆ ಕೊಬ್ಬರಿಯಲ್ಲೇ ಹತ್ತಕ್ಕಿಂತಲೂ ಹೆಚ್ಚು ವೈವಿಧ್ಯಗಳಿವೆ. ಇವರು ಕೊಬ್ಬರಿಯಲ್ಲಿ ಕೆತ್ತಿದ ಲಕ್ಷ್ಮೀ ವಿಗ್ರಹ ಅದ್ಭುತವಾಗಿದೆ. ಕೊಬ್ಬರಿಯನ್ನು ಅಡುಗೆಗೆ ಬಳಸುವುದು ಗೊತ್ತು. ಆದರೆ ಅದನ್ನು ಚಿತ್ರಕಲೆಗೆ ಬಳಸಿ ಬೆರಗುಗೊಳಿಸಿದ್ದಾರೆ ಉಮಾ. ನೋಡುಗರಲ್ಲಿ ವಿಸ್ಮಯ ಹಾಗೂ ತಲ್ಲೀನತೆಯನ್ನು ಮೂಡಿಸುವುದು ಉಮಾ ಸತೀಶ್(ಮೊ. 9538318430) ಅವರ ಚಿತ್ರಗಳ ವೈಶಿಷ್ಟ್ಯ.

- ಶಶಿರೇಖಾ ಹೆಗಡೆ

ನೀವೂ ರಂಗೋಲಿಗೆ ಬರೆಯಬಹುದು...
ಮಹಿಳೆಯರು, ಫ್ಯಾಷನ್‌ಗೆ ಸಂಬಂಧಿಸಿದ ಲೇಖನಗಳನ್ನು ಓದುಗರು ರಂಗೋಲಿ ಪುರವಣಿಗೆ ಬರೆದು ಕಳುಹಿಸಬಹುದು. ಬರವಣಿಗೆ ರೂಪದಲ್ಲಿ ಅಥವಾ ಇ ಮೇಲ್: by2coffe@gmail.comಗೆ ಲೇಖನಗಳನ್ನು ಕಳುಹಿಸಬಹುದು. ಲೇಖನಕ್ಕೆ ಉತ್ತಮವಾದ ಫೋಟೋಗಳು ಇದ್ದರೆ ಚೆನ್ನ. ನಮ್ಮ ವಿಳಾಸ, ರಂಗೋಲಿ ವಿಭಾಗ, ಕನ್ನಡಪ್ರಭ, ಕ್ವೀನ್ಸ್ ರಸ್ತೆ ನಂ.1, ಬೆಂಗಳೂರು- 560001

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!