ಸುಗಂಧ ದ್ರವ್ಯ ಮನಸ್ಸು, ಇಂದ್ರಿಯಗಳನ್ನು ಪ್ರಫುಲ್ಲಗೊಳಿಸುತ್ತದೆ. ಫ್ರಾನ್ಸ್‌ನಲ್ಲಿ ತಯಾರಿಸಲಾದ ಟೈಟಾನ್ ಸ್ಕಿನ್ ವಿದೇಶಿ ಗಿಡಮೂಲಿಕೆಗಳಿಂದ ಭಟ್ಟಿ ಇಳಿಸಿದ ಸುಗಂಧವಾಗಿದೆ. 'ಸ್ಕಿನ್ ಟೈಟಾನ್' ಟೈಟಾನ್ ಕಂಪನಿಯ ಇತ್ತೀಚಿನ ಉತ್ಪನ್ನವಾಗಿದೆ. ಟಾಟಾ ಸಮೂಹದಿಂದ ಹೊರಬಂದಿರುವ ಈ ಆರು ಬಗೆಯ ಸುಗಂಧ ದ್ರವ್ಯಗಳು ಹಾಲ್‌ಮಾರ್ಕ್‌ನಿಂದ ಕೂಡಿವೆ.
ಈ 6 ಫ್ರೆಂಚ್ ಸುಗಂಧ ದ್ರವ್ಯಗಳು ಮಹಿಳೆಯರ ಆಯ್ಕೆಗಳಾದ ನ್ಯೂಡ್, ಸೆಲೆಸ್ಟ್ ಮತ್ತು ಇಮೇರಾ ಯೂ ಡಿ ಪರ್‌ಫ್ಯೂಮ್‌ಗಳನ್ನು ಹೊಂದಿವೆ. ಜತೆಗೆ ಪುರುಷರ ಆಯ್ಕೆಗಳಾದ ಎಕ್ಸ್‌ಟ್ರೀಮ್ ಮತ್ತು ಸ್ಟೀಲೆ ಯೂ ಡಿ ಪರ್‌ಫ್ಯೂಮ್‌ಗಳು ಈ ಸರಣಿಯಲ್ಲಿವೆ. ಬಲ್ಗೇರಿಯನ್ ರೋಸ್, ಇಟಲಿಯ ಲೆಮನ್, ಇಂಡೋನೇಷಿಯನ್ ಪಚೌಲಿ, ವೆನಿಜುವೆಲಾ ಕಾಡಿನ ತೊನ್‌ಕಾ ಬೀನ್ಸ್ ಮತ್ತು ಮಡಗಾಸ್ಕರ್‌ನ ವೆನಿಲಾ ದ್ರವ್ಯಗಳನ್ನು ಈ ಸುಗಂಧ ಹೊಂದಿದೆ. 6 ಸುಗಂಧ ದ್ರವ್ಯಗಳಿಂದ ಕೂಡಿದ ಸ್ಕಿನ್ ದ್ರವ್ಯ ದೇಶದಾದ್ಯಂತದ ವರ್ಲ್ಡ್ ಆಫ್ ಟೈಟಾನ್ ಮಳಿಗೆ, ಮಲ್ಟಿ ಬ್ರ್ಯಾಂಡ್ ಲೈಫ್‌ಸ್ಟೈಲ್ ಮತ್ತು ಇತರೆ ಅಂಗಡಿಗಳಲ್ಲಿ ಲಭ್ಯ. 50 ಎಂಎಲ್ ಸೀಸೆಯ ಬೆಲೆ 990 ರು. ಮತ್ತು 100 ಎಂ.ಎಲ್ ಸೀಸೆಯ ಬೆಲೆ 1790 ರು.