ಮಹಿಳೆ-ಮನೆ-ಬದುಕು

ಸರಳ ಶೃಂಗಾರ

ದೀಪಾವಳಿಯಂಥ ದೊಡ್ಡ ಹಬ್ಬ ನಮ್ಮ ಕಣ್ಮುಂದಿದೆ. ಈ ವೇಳೆ ಅತಿಥಿಗಳು ಬಂದುಹೋಗುವುದು ಕಾಮನ್. ಈ ವೇಳೆ ಮನೆಯನ್ನು...

ದೀಪಾವಳಿಯಂಥ ದೊಡ್ಡ ಹಬ್ಬ ನಮ್ಮ ಕಣ್ಮುಂದಿದೆ. ಈ ವೇಳೆ ಅತಿಥಿಗಳು ಬಂದುಹೋಗುವುದು ಕಾಮನ್. ಈ ವೇಳೆ ಮನೆಯನ್ನು ವಿಶೇಷವಾಗಿ ಅಲಂಕರಿಸಿದರೆ ತನು ಮನ ಎರಡೂ ತಣಿಯುವುದು ನಿಶ್ಚಿತ. ಆದರೆ, ಮನೆಯನ್ನು ಹಬ್ಬಕ್ಕೆ ತಯಾರಿ ಮಾಡುವುದು ಅಷ್ಟು ಸುಲಭವಲ್ಲ. ಸರಳ ಮತ್ತು ಸುಂದರವಾಗಿ ಮನೆಯನ್ನು ಸಿಂಗಾರಗೊಳಿಸಿದರೆ ಹಬ್ಬದ ಕಳೆ ತಾನಾಗಿಯೇ ಬರುತ್ತದೆ. ಹಾಗಾದರೆ, ಹಬ್ಬಕ್ಕೂ ಮುನ್ನ ಮನೆಯನ್ನು ಸರಳವಾಗಿ ಹೇಗೆ ಶೃಂಗರಿಸುವುದು?

ಮೊದಲು ತೋರಣ
ಹಸಿರು ತೋರಣವಿದ್ದರೆ ಹಬ್ಬಕ್ಕೆ ಒಂದು ಕಳೆ. ಮನೆಯ ಮುಖ್ಯಬಾಗಿಲು ಮತ್ತು ಪೂಜಾ ಕೋಣೆಯ ಬಾಗಿಲನ್ನು ಹಸಿರು ಅಥವಾ ಹೂವಿನ ತೋರಣದಿಂದ ಅಲಂಕಾರ ಮಾಡಬಹುದು. ಇಲ್ಲವೆಂದರೆ, ಈಗ ಲಭ್ಯವಿರುವ ಪ್ಲಾಸ್ಟಿಕ್ ಹೂವು ಮತ್ತು ಮೆಟಲ್ ತೋರಣ ಹಾಕಬಹುದು.

ಅಲಂಕಾರಿಕ ವಸ್ತುಗಳು
ಮನೆಯ ಅಲಂಕಾರಕ್ಕೆಂದು ಹೆಚ್ಚು ಹಣ ವ್ಯಯಿಸುವ ಅಗತ್ಯವಿಲ್ಲ. ಹಬ್ಬದ ದಿನ ಕುಷನ್ ಕವರ್, ಬೆಡ್ ಶೀಟ್ಗಳನ್ನು ಬದಲಿಸಿ ಶುಭ್ರ ಮತ್ತು ಚೆಂದವಾಗಿದ್ದನ್ನು ಹಾಕಿದರೆ ಮನೆ ಸುಂದರವಾಗಿ ಕಾಣುತ್ತದೆ. ಜೊತೆಗೆ ವಿವಿಧ ಬಗೆಯ ಹೂವು, ರಂಗೋಲಿ, ದೀಪಗಳನ್ನು ಬಾಗಿಲಲ್ಲಿ ಮತ್ತು ದೇವರ ಕೋಣೆಯಲ್ಲಿ ಅಲಂಕಾರಕ್ಕಿಟ್ಟರೆ ಹಬ್ಬದ ಕಳೆ ಎತ್ತಿ ತೋರುತ್ತದೆ.

ಎಲ್ಲೆಡೆ ಸುಗಂಧ
ಮನೆಯಲ್ಲಿ ಹಬ್ಬದ ದಿನದಂದು ಸುಗಂಧ ವಾಸನೆ ತುಂಬಿರಲಿ. ಕರ್ಪೂರ, ಸಾಂಬ್ರಾಣಿ, ಸುಗಂಧಪೂರಿತ ಗಂಧದ ಕಡ್ಡಿಗಳನ್ನು ಹೊತ್ತಿಸಿಡಿ. ಸುಗಂಧಪೂರಿತ ಎಣ್ಣೆಯೂ ಲಭ್ಯವಿರುವುದರಿಂದ ಅದನ್ನು ಕೊಂಡು ದೀಪಕ್ಕೆ ಬಳಸಬಹುದು. ಮನೆಗೆಂದೇ ಇರುವ ಸುಗಂಧ ದ್ರವ್ಯವನ್ನೂ ಈ ದಿನ ಬಳಸಿದರೆ ಮನೆಯ ಮೆರುಗು ಮತ್ತಷ್ಟು ಹೆಚ್ಚುತ್ತದೆ.

ಡೈನಿಂಗ್ ಟೇಬಲ್
ಹಬ್ಬಕ್ಕೆ ಊಟೋಪಚಾರ ಇರಲೇಬೇಕು. ಡೈನಿಂಗ್ ಟೇಬಲ್ ಮೇಲೆ ಅಡುಗೆ ಮಾಡಿದ ಪಾತ್ರೆಗಳನ್ನು ಒಪ್ಪವಾಗಿಟ್ಟು ಜೋಡಿಸಿದರೆ ಕೂತು ತಿನ್ನಲು ಇನ್ನಷ್ಟು ಅನುಕೂಲವಾಗುತ್ತದೆ. ಅತಿಥಿಗಳಿಗೂ ಏನೋ ಒಂದು ಆರಾಮದಾಯಕ ಉಪಚಾರ ಅನಿಸುತ್ತದೆ. ಊಟಕ್ಕಾಗಿ ಬಾಳೆ ಎಲೆ ಉಪಯೋಗಿಸಿದರೆ ಉತ್ತಮ.

ಹೂವಿನ ಕುಂಡ
ಹಬ್ಬದ ದಿನ ಮನೆಯಲ್ಲಿರುವ ಹೂವಿನ ಕುಂಡಗಳಿಗೆ ತಾಜಾ ಹೂವನ್ನು ಬಳಸಿ ಅಥವಾ ಪ್ಲಾಸ್ಟಿಕ್ ಹೂವುಗಳಿದ್ದರೆ ಅವುಗಳನ್ನು ಮುನ್ನವೇ ಚೆನ್ನಾಗಿ ತೊಳೆದು ಒಪ್ಪವಾಗಿ ಜೋಡಿಸಿ. ಹಬ್ಬದ ದಿನ ಹೂ ಕುಂಡಗಳಿಗೆ ಸುಗಂಧ ಪೂರಿತ ಹೂವುಗಳನ್ನಿಟ್ಟರೆ ಮನೆ ತುಂಬ ಹಬ್ಬದ ಗಂಧ ಸುಳಿಯುತ್ತದೆ. ಇದರ ಜೊತೆಗೆ ದೈನಂದಿನ ಒತ್ತಡದಿಂದ ನೀವು ಹೊರಬನ್ನಿ. ಊಟವಾದ ನಂತರ ಕುಟುಂಬದರೊಂದಿಗೆ ಹರಟೆ ಹೊಡೆಯಿರಿ. ಇದರಿಂದ ಮನಸ್ಸೂ ತಿಳಿಯಾಗುತ್ತದೆ.

- ಜಮುನಾ ರಾಣಿ ಎಚ್. ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!