ಮಹಿಳೆ-ಮನೆ-ಬದುಕು

ಪ್ರಯಾಸ ಕಥನ

'ಕಂಬ ಬಿಟ್ಟು ಹಿಂದೆ ಹೋಗ್ರೀ..' ನಿತ್ಯ ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವವರಿಗೆ ಕಂಡಕ್ಟರ್‌ನ ಈ ಮಾತು ಚಿರಪರಿಚಿತ. 'ನೀವ್ಯಾಕೆ ಹೀಗೆ? ಹಿಂದೆ ಹೋಗಿ' ಎಂದು ಕಂಡಕ್ಟರ್ ಬೊಬ್ಬೆ ಹಾಕಿದರೂ, ನಾವು ಹಿಂದೆ ಹೋಗಲು ಒಪ್ಪುವುದಿಲ್ಲ. ಅದ್ಯಾಕೆ? ಎಂಬ ಪ್ರಶ್ನೆಗೆ ಉತ್ತರ ಹೇಳ್ತೀನಿ ಕೇಳಿ...
ನಾವು ಬಸ್ಸಲ್ಲಿ ನಿಂತುಕೊಳ್ಳುವುದು ಮಹಿಳೆಯರಿಗೆ ಮೀಸಲಿರುವ ಮುಂದಿನ 4 ಸೀಟುಗಳವರೆಗೆ ಮಾತ್ರ. ಅದಕ್ಕಿಂತ ಹಿಂದೆ ಹೋಗಲು ಹಿಂಜರಿಯುತ್ತೇವೆ. 'ಲೇಡೀಸ್ ಸೆಕ್ಷನ್‌' ಅದನ್ನು ದಾಟಿ ಹಿಂದೆ ಹೋದರೆ ಯಡವಟ್ಟಾಗುತ್ತೆ ಎಂಬ ಭಯ. ಸುಮ್ನೆ ಯಾಕೆ ರಿಸ್ಕ್ ತೆಗೋಳೋದು, ಹೇಗಾದರೂ ಇಲ್ಲೇ ಅಡ್ಜೆಸ್ಟ್ ಮಾಡಿ ನಿಂತ್ಕೊಂಡ್ರೆ ಆಯ್ತು ಎಂದು ಅಲ್ಲೇ ಕಂಬದ ಬಳಿ ನಿಂತುಕೊಳ್ತೀವಿ.
ಬೆಂಗಳೂರಲ್ಲಿ ತುಂಬಿ ತುಳುಕುವ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡ್ತಿದ್ರೆ ನಿಮ್ಗೂ ಈ ಕಷ್ಟ ಅರ್ಥವಾಗುತ್ತೆ. ಬೆಳಗ್ಗಿನ ಗಡಿಬಿಡಿ, ಸಂಜೆ ಹೊತ್ತಿನ ಆಯಾಸದಲ್ಲಿ ನಮ್ಮ ಡ್ರೆಸ್, ಬ್ಯಾಗ್ ಎಲ್ಲವನ್ನೂ ಸಂಭಾಳಿಸಿಕೊಂಡು ಬಸ್‌ನಲ್ಲಿ ಓಡಾಟ ಮಾಡುವುದು ಸುಲಭದ ವಿಷಯವೇನಲ್ಲ. ಬಸ್ ಹತ್ತಿದ ಕೂಡಲೇ ಕಂಡಕ್ಟರ್ 'ಹಿಂದೆ ಹೋಗಿ...ತಳ್‌ಕೊಂಡು ಹೋಗಿ' ಎಂದು ಬೊಬ್ಬೆ ಹೊಡಿತಾ ಇದ್ರೆ, ಬಸ್ಸಲ್ಲಿದ್ದವರು 'ಯಾಕಮ್ಮಾ, ತಳ್ತೀಯಾ..ನಾವ್ ಹೆಂಗ್ ನಿಂತ್ಕೊಳ್‌ಬೇಕು' ಎಂದು ವಟಗುಟ್ಟುತ್ತಾರೆ. ಆ ಜನರ ಮಧ್ಯೆ ಹರಸಾಹಸ ಮಾಡಿ ಹಿಂದೆ ನಿಂತ್ಕೋತೀವಿ ಅಂತಾನೇ ಇಟ್ಕೊಳ್ಳಿ, ಆಗ ಕೆಲವು ಪುರುಷ ಪ್ರಯಾಣಿಕರು ಬ್ರೇಕ್ ಹಾಕದೇ ಇದ್ರೂ ಸುಮ್ ಸುಮ್ನೆ ಮೈಮೇಲೆ ಬೀಳ್ತಾರೆ. ಇನ್ನು ಕೆಲವರು ಏನೇನೋ ಚೇಷ್ಟೆ ಮಾಡೋಕೆ ಶುರು ಮಾಡ್ತಾರೆ. ಕೆಲವರಿಗೆ ಮೈಗೆ ತಾಕಿ ನಿಂತುಕೊಳ್ಳುವ ಚಟವಾದರೆ, ಇನ್ನು ಕೆಲವರಿಗೆ ಹುಡುಗೀರ ಪಕ್ಕನೇ ನಿಂತ್ಕೋಬೇಕು. ಸ್ವಲ್ಪ ಹಿಂದೆ ಹೋಗಿ ಎಂದರೆ ಒಂದು ಹೆಜ್ಜೆ ಹಿಂದೆ ಇಟ್ಟು ಎರಡು ಹೆಜ್ಜೆ ಮುಂದೆ ಬಂದು ನಿಲ್ತಾರೆ. ಹುಡುಗಿಯೊಬ್ಬಳು ಇಂಥವರ ವಿರುದ್ಧ ದನಿಯೆತ್ತಿದರೆ, ಅಲ್ಲಿರುವ ಮಹಿಳೆಯರೂ ಆಕೆಯೊಂದಿಗೆ ದನಿಗೂಡಿಸಲು ಹಿಂಜರಿಯುತ್ತಾರೆ. ಈ ಕಾರಣದಿಂದಾಗಿಯೇ ಹೆಚ್ಚಿನ ಹೆಣ್ಮಕ್ಕಳು ಕಿರಿಕಿರಿ ಅನುಭವಿಸುತ್ತಿದ್ದರೂ, ಅಲ್ಲಿಂದ ಜಾಗ ಬದಲಾಯಿಸಿ ನಿಂತುಕೊಳ್ಳುತ್ತಾರೆಯೇ ವಿನಾ ಪ್ರತಿಕ್ರಿಯಿಸುವ ಗೋಜಿಗೆ ಹೋಗಲ್ಲ.
ಇನ್ನು ಕೆಲವು ಗಂಡಸರಿಗೆ ಲೇಡಿಸ್ ಸೀಟು ಅಂದ್ರೆ ಭಾರಿ ಇಷ್ಟ. ಅದ್ಯಾಕೋ ಗೊತ್ತಿಲ್ಲ ಲೇಡೀಸ್ ಸೀಟಲ್ಲಿ ಕುಳಿತುಕೊಂಡ ತಕ್ಷಣವೇ ಅವರಿಗೆ ನಿದ್ದೆ ಬಂದು ಬಿಡುತ್ತೆ. 'ಲೇಡೀಸ್ ಸೀಟು ಇದು, ಏಳಿ' ಎಂದರೆ, ಕಾಲು ನೋವು, ಆರಾಮ ಇಲ್ಲ ಎಂಬ ನೆಪ ಬೇರೆ. ಅಲ್ಲ ಸ್ವಾಮೀ... ಆರಾಮ ಇಲ್ಲ ಅಂದ್ರೆ ಲೇಡೀಸ್ ಸೀಟಲ್ಲೇ ಯಾಕೆ ಕುಳಿತುಕೊಳ್ಬೇಕು? ಗಂಡಸರು ಸೀಟು ಬಿಟ್ಟುಕೊಡೋದಿಲ್ವಾ? ನಾವು ಜಬರ್ದಸ್ತಿನಿಂದ ಕೇಳುವವರೆಗೆ ಯಾರೊಬ್ಬರೂ ಸೀಟು ಬಿಟ್ಟೇಳುವುದೇ ಇಲ್ಲ. ಇನ್ನು ಕಂಡಕ್ಟರ್‌ಗೆ ಹೇಳಿದರೆ, 'ನೀವೇ ಕೇಳಿ' ಎಂದು ನುಣುಚಿಕೊಳ್ಳುವುದೇ ಜಾಸ್ತಿ.
ಇಷ್ಟೆಲ್ಲಾ ಕಿರಿಕಿರಿ ಸಹಿಸಿಕೊಂಡು, ಜಗಳ ಆಡ್ಕೊಂಡು ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವುದು ಅಂದ್ರೆ ಸುಮ್ನೇನಾ? ನಿಮ್ಮ ಅಕ್ಕ, ತಂಗಿ, ಹೆಂಡ್ತಿ, ಅಮ್ಮ, ಗೆಳತಿಯರಲ್ಲಿ ಕೇಳಿ ನೋಡಿ... ಅವರಿಗೂ ಈ ಥರದ ಅನುಭವ ಆಗಿಯೇ ಇರುತ್ತೆ. I am sure...

- ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ