ಮಹಿಳೆ-ಮನೆ-ಬದುಕು

ಖಾಸ್‌ಬಾತ್ ರೂಮ್

ಮನೆ ನಿರ್ಮಿಸಿದ ನಂತರ ಅದನ್ನು ನಿರ್ವಹಿಸುವುದು ಸಾಮಾನ್ಯ ಕೆಲಸವೇನಲ್ಲ. ಅದರಲ್ಲೂ ವಿಶೇಷವಾಗಿ ಬಾತ್‌ರೂಮ್ ವಿಷಯದಲ್ಲಿ ಎಲ್ಲರೂ ಯಾಮಾರುತ್ತಾರೆ. ಸ್ವಚ್ಛತೆ ಕಾಪಾಡುವುದಿಲ್ಲ, ಎಲ್ಲೆಂದರಲ್ಲಿ ಸೋಪು, ಬ್ರಷ್ ಬಿಸಾಡಿ ಗಲೀಜು ಮಾಡುತ್ತಾರೆ. ಇದರಿಂದ ಎಲ್ಲವೂ ಹಾಳಾಗುತ್ತದೆ. ಹೀಗಾಗಿ ಪರಿಸರ ಸ್ನೇಹಿ, ಸ್ವಚ್ಛ ಬಾತ್‌ರೂಮ್‌ಗೆ ಇಲ್ಲಿವೆ ಕೆಲವು ಸಲಹೆಗಳು...

ಕಡಿಮೆ ನೀರು ವ್ಯಯಿಸಿ
ಆಶ್ಚರ್ಯವಾದರೂ ಇದು ಸತ್ಯ. ಮನೆ ಬಳಕೆಯ ಶೇ.27ರಷ್ಟು ನೀರು ಬಚ್ಚಲು ಮನೆಗೆ ಬಳಕೆಯಾಗುತ್ತದೆ. ಪ್ಲಂಬಿಂಗ್, ವಾಷಿಂಗ್ ಮಷಿನ್, ಡಿಶ್‌ವಾಷರ್ ಹಾಗೂ ಶವರ್‌ಗಳಿಗಾಗಿ ಹೆಚ್ಚಿನ ನೀರು ಪೋಲಾಗುತ್ತದೆ. ಸಾಮಾನ್ಯವಾಗಿ ಶೌಚಾಲಯದಲ್ಲಿ ಬಳಸುವ ಸಾಧನಗಳಲ್ಲಿ ಒಂದು ಬಾರಿ ಪ್ಲಶ್ ಮಾಡಿದರೆ 7 ಗ್ಯಾಲನ್ ನೀರು ಪೋಲಾಗುತ್ತದೆ. ಹೀಗಾಗಿ ಕಡಿಮೆ ಸೋರಿಕೆಯಾಗುವ ಸಾಧನಗಳನ್ನು ಬಳಸಿದರೆ ನೀರಿನ ಮಿತವ್ಯಯ ಸಾಧ್ಯ. 1.6 ಗ್ಯಾಲನ್ ಅಥವಾ ಅದಕ್ಕಿಂತಲೂ ಕಡಿಮೆ ನೀರು ಬರುವ ಪ್ಲಶ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. ಹೆಚ್ಚು ನೀರು ಬರುತ್ತಿರುವ ಪ್ಲಶ್‌ಗಳನ್ನು ಈಗಾಗಲೇ ಅಳವಡಿಸಿಕೊಂಡಿದ್ದರೆ ಸಾಧ್ಯವಾದಷ್ಟು ಬೇಗನೆ ಬದಲಿಸಿ ನೀರು ಉಳಿಸಿ. ಇದಕ್ಕೇನೂ ಹೆಚ್ಚು ವೆಚ್ಚವಾಗುವುದಿಲ್ಲ.

ಶಾವರ್ ಶುಚಿತ್ವ
ಇಂದು ಶವರ್ ಬಳಸುವುದು ಸಿರಿವಂತಿಕೆಯ ಪ್ರತೀಕ. ಆದರೆ, ಇದು ಹೆಚ್ಚು ನೀರನ್ನು ಪೋಲು ಮಾಡುತ್ತದೆ. ಇದು 'ನ್ಯಾಷನಲ್ ವೇಸ್ಟ್‌' ಎಂದರೂ ಅತಿಶಯೋಕ್ತಿಯಾಗದು. ಶವರ್‌ಗಳಲ್ಲಿ ಸ್ನಾನ ಮಾಡುವಾಗ ಒಬ್ಬ ವ್ಯಕ್ತಿ ಸರಾಸರಿ 5ರಿಂದ 8 ಗ್ಯಾಲನ್ ನೀರು ಬಳಸುತ್ತಾನೆ. ಹೀಗಾಗಿ ಕಡಿಮೆ ಹಾಗೂ ಚಿಕ್ಕ ರಂಧ್ರಗಳಿರುವ ಶವರ್ ಬಳಸಿದರೆ ನೀರಿನ ಬಳಕೆ ಮಿತವ್ಯಯವಾಗುತ್ತದೆ. ಅಲ್ಲದೇ ಸ್ನಾನಕ್ಕೆ ಬಳಸುವ ಬಿಸಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ವಿದ್ಯುತ್ ಉಳಿತಾಯವೂ ಆಗುತ್ತದೆ. ನಿಮ್ಮ ಜೇಬಿನ ಬಿಸಿಯೂ ತಗ್ಗುತ್ತದೆ.

ಸೆನ್ಸಾರ್ ನಲ್ಲಿ
ಕೈ ತೊಳೆಯುವ ಸಿಂಕ್ ಅಥವಾ ಇತರೆಡೆ ಬಳಸುವ ನಲ್ಲಿಗಳಿಗೆ 'ಮೋಷನ್ ಸೆನ್ಸಾರ್‌' ಇದ್ದರೆ ಒಳ್ಳೆಯದು. ಹಲ್ಲುಜ್ಜುವಾಗ ಅಥವಾ ಕೈಗೆ ಸೋಪು ಹಾಕಿಕೊಂಡು ತೊಳೆಯುವಾಗ ಅನವಶ್ಯಕವಾಗಿ ನೀರು ಪೋಲಾಗುತ್ತದೆ. ಮೋಷನ್ ಸೆನ್ಸಾರ್ ನಲ್ಲಿಗಳಿದ್ದರೆ ನಿಮಗೆ ನೀರಿನ ಬಳಕೆಯ ಅವಶ್ಯಕತೆ ಇಲ್ಲದಿದ್ದಾಗ ತನ್ನಿಂದ ತಾನಾಗಿಯೇ ನೀರು ಸೋರಿಕೆ ನಿಲ್ಲುತ್ತದೆ.

'ಲೈಟ್‌' ಆಗಿರಲಿ ಜೀವನ!
ಬಾತ್‌ರೂಮ್‌ನಲ್ಲಿ ಅನವಶ್ಯಕ ವಿದ್ಯುತ್ ಬಳಕೆ ಕಡಿಮೆ ಮಾಡಿ. ಮಾಮೂಲಿ ಬಲ್ಬ್‌ಗಳನ್ನು ಬಳಸಬೇಡಿ. ನೂತನ ತಂತ್ರಜ್ಞಾನದ ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚು ಬೆಳಕು ನೀಡುವ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಿ. ಇದರಿಂದ ನಿಮ್ಮ ಜೇಬು ತಣ್ಣಗಿರುತ್ತದೆ. ಅಲ್ಲದೇ ಆರೋಗ್ಯವೂ ಚೆನ್ನಾಗಿರುತ್ತದೆ. ಎಲ್‌ಇಡಿ ಬಲ್ಬ್‌ಗಳಿಗೆ ಮಾಮೂಲಿ ಬಲ್ಬ್‌ಗಳಿಗಿಂತ ಶೇ.80ರಷ್ಟು ಕಡಿಮೆ ವಿದ್ಯುತ್ ಬೇಕು. 

ಮುಕ್ತ ಗಾಳಿ, ಬೆಳಕು
ಬಾತ್‌ರೂಮ್ ಅಂದಮಾತ್ರಕ್ಕೆ ಕತ್ತಲೆಯಾಗಿರಬೇಕೆಂದಿಲ್ಲ. ಗಾಳಿ, ಬೆಳಕು ಬರುವ ವ್ಯವಸ್ಥೆ ಇದ್ದರೆ ಅನುಕೂಲ. ವೆಂಟಿಲೇಷನ್ ಸಮರ್ಪಕವಾಗಿ ಕೆಲಸ ಮಾಡುವಂತಿರಲಿ. ಧೂಳು ತುಂಬಿಕೊಳ್ಳದಂತೆ ನೋಡಿಕೊಳ್ಳಿ. ಗಾಳಿ, ಬೆಳಕು ಇದ್ದರೆ ವಿದ್ಯುತ್ ಬಳಕೆಯ ಅಗತ್ಯವೇ ಇರುವುದಿಲ್ಲ. ಹಾಗಂತ ಯಾವುದೂ ಅತಿಯಾಗದಿರಲಿ!

ಪರಿಸರ ಸ್ನೇಹಿ ವಸ್ತುಗಳು
ಬಚ್ಚಲು ಮನೆಯಲ್ಲಿ ಬಳಸುವ ವಸ್ತುಗಳು ಸಾಧ್ಯವಾದಷ್ಟು ಪರಿಸರ ಸ್ನೇಹಿಯಾಗಿರಲಿ. ಕೈ ಒರೆಸಿಕೊಳ್ಳುವ ಪೇಪರ್, ಟವೆಲ್, ಸೋಪು ಸೇರಿದಂತೆ ಇನ್ನಿತರೆ ವಸ್ತುಗಳು ಪರಿಸರ ಸ್ನೇಹಿಯಾಗಿರಲಿ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.  ಅಲ್ಲದೆ, ಬಚ್ಚಲು ಮನೆಯ ಬಾಗಿಲು ಸ್ನಾನ ಮಾಡಿ ಹೊರಗೆ ಬರುವಾಗ ಅವಸರದಲ್ಲಿ ಹಾಗೆಯೇ ಬಿಟ್ಟು ಬಿಡಬೇಡಿ. ಇದರಿಂದ ಅಲ್ಲಿನ ದುರ್ಗಂಧ, ಅನೈರ್ಮಲ್ಯ ಇಡೀ ಮನೆಗೆ ವ್ಯಾಪಿಸಿ ನಿಮ್ಮ ಮೂಡ್ ಹಾಳು ಮಾಡುತ್ತದೆ. ಬಾತ್‌ರೂಮ್‌ನಲ್ಲಿ ಸೋಪು, ಬ್ರಷ್, ಟೂತ್‌ಪೇಸ್ಟ್, ಶಾಂಪೂ ಎಲ್ಲೆಂದರಲ್ಲಿ ಬಿಸಾಡಬೇಡಿ. ನೀಟಾಗಿ ಜೋಡಿಸಿಡಿ.

- ಚನ್ನು ಮೂಲಿಮನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!