ಮಹಿಳೆ-ಮನೆ-ಬದುಕು

ಡಿಸೈನ್ ಟೈಮ್

ಮನಸ್ಸಿನಲ್ಲಿರುವಂತೆ ಮನೆ ರೂಪುಗೊಳ್ಳುವುದು ಕೆಲವೊಮ್ಮೆ ಕಷ್ಟ. ಕಟ್ಟಡ ವಿನ್ಯಾಸಕಾರರೂ ಲೇಟೆಸ್ಟ್ ಟ್ರೆಂಡ್, ಫ್ಯಾಶನ್, ಹಳೆಯ ವಿನ್ಯಾಸ ಹೀಗೆ ಹತ್ತಾರು ಕಾರಣಗಳನ್ನು ಹೇಳಿ ಕನಸಿನ ಸೂರು ಹೀಗೆಯೇ ಇರಬೇಕೆಂಬ ಆಶಯಕ್ಕೆ ತಣ್ಣೀರು ಎರಚುತ್ತಾರೆ.

ಅಷ್ಟೇ ಅಲ್ಲ, ಒಮ್ಮೆ ಕಟ್ಟಡ ವಿನ್ಯಾಸ ಮಾಡಿದ ಮೇಲೆ ಅದರಂತೆಯೇ ಕಟ್ಟಡ ರೂಪಿಸಲು ಆರ್ಕಿಟೆಕ್ಟರ್‌ಗಳು ಹವಣಿಸುತ್ತಾರೆಯೇ ಹೊರತು, ಅದರಲ್ಲಿ ನಿಮಗೆ ಇಷ್ಟವಾದ ಅಂಶಗಳನ್ನು ಸೇರಿಸಲು ಇಷ್ಟಪಡುವುದಿಲ್ಲ. ಇದರಿಂದ ಸ್ವಂತ ಮನೆ ಕಟ್ಟಿಸಿದರೂ ವಿನ್ಯಾಸದಲ್ಲಿ ನಿಮಗೆ ವಿಭಿನ್ನತೆ ಕಾಣಸಿಗದು. ಒಂದು ವೇಳೆ ಸೂರು ಸಂಪೂರ್ಣವಾದ ಮೇಲೆ ಅದರಲ್ಲಿ ಮೊಡಿಫೈ ಮಾಡಲು ಹೊರಟರೆ ವೆಚ್ಚ ತೆರಬೇಕು. ಇದು ತೀರಾ ಇತ್ತೀಚೆಗೆ ಮನೆ ಕಟ್ಟಿಸಿದವರಿಗೆ ಅನುಭವಕ್ಕೆ ಬಾರದೇ ಇರದು. ಹಾಗಾದರೆ ನಿಮ್ಮ ಇಚ್ಛೆಯಂತೆ ಮನೆ ಕಟ್ಟುವ ಮುನ್ನ ಏನು ಕ್ರಮ ಕೈಗೊಂಡಿರಬೇಕು? ಯಾವ ಅಂಶಗಳತ್ತ ಗಮನ ಹರಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

  • ಮನೆಯ ಸಂಪೂರ್ಣ ನೀಲನಕ್ಷೆ, ಕಾಮಗಾರಿ ನಕ್ಷೆಯನ್ನು ಸ್ಪಷ್ಟಪಡಿಸಿಕೊಳ್ಳಿ. ನೀಲನಕ್ಷೆ ಅನುಮತಿಗಾಗಿ ಮಾತ್ರ. ಕಾಮಗಾರಿ ನಕ್ಷೆ ಬೇರೆಯದೇ ಆಗಿರುತ್ತದೆ. ಇದರಲ್ಲಿ ಅಳತೆ ಸಹಿತ ಎಲ್ಲೆಲ್ಲಿ ಯಾವ್ಯಾವ ಭಾಗ ಇರುತ್ತದೆ ಎಂಬುದು ಚಿತ್ರಿಸಲು ಹೇಳಿ.
  •  ಮನೆ ನೆಲಮಟ್ಟ ರಸ್ತೆಯಿಂದ ಕನಿಷ್ಠ 30 ಇಂಚು ಎತ್ತರ ಇರಬೇಕು. ಹೆಚ್ಚಿನ ಗುತ್ತಿಗೆದಾರರು ಇದಕ್ಕೆ ಒಪ್ಪುವುದಿಲ್ಲ. ಕಾರಣ ನೆಲಭರ್ತಿ ಮಾಡಲು ಅಥವಾ ಫೌಂಡೇಶನ್‌ಗೆ ಹೆಚ್ಚು ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ. ಆದರೆ, ಇದು ಯಾವ ಲೆಕ್ಕದಲ್ಲೂ ದೊಡ್ಡದಲ್ಲ.
  •  ಒಳಭಾಗದಲ್ಲಿ ಮೆಟ್ಟಿಲುಗಳ ಕೆಳಗೆ, ಗೋಡೆಗಳಲ್ಲಿನ ಪ್ಯಾಕೇಟ್‌ಗಳನ್ನು ಸ್ಪಷ್ಟವಾಗಿ ಸೂಚಿಸಿರಿ. ನಕ್ಷೆಯಲ್ಲಿ ಇದರ ಪ್ರಸ್ತಾವ ಇರಲ್ಲ. ಕಪಾಟು ಮಾಡಲು ಜಾಗ ಬೇಕಿತ್ತು ಎನ್ನುವ ವೇಳೆಗೆ ಗೋಡೆಗಳು ಮೇಲೆದ್ದು ನಿಂತಿರುತ್ತವೆ.
  • ಕೋಣೆಗಳಲ್ಲಿ ಬೇಕಾಗುವ ಶೆಲ್ಫ್‌ಗಳ ಬಗ್ಗೆ ಮೊದಲೇ ನಿರ್ಧರಿಸಿ. ಚಾವಣಿಗೆ ನೇತಾಡಿಸಲು (ತೊಟ್ಟಿಲು, ತೂಗು ಮಂಚ, ಶಾಂಡಿಲೀಯಸರ್, ಫ್ಯಾನು) ಬೇಕಾಗುವ ಸಾಮರ್ಥ್ಯದ ಕೊಂಡಿಗಳು ಸಾಕಷ್ಟಿರಲಿ. ಕಾಂಕ್ರೀಟ್ ಹಾಕುವಾಗಿನ ಸಾಮರ್ಥ್ಯ ನಂತರ ಕೃತಕ ವಿನ್ಯಾಸದಲ್ಲಿ ಬಾರದು.
  • ರಿ-ಇನ್ಫೋರ್ಸ್‌ಮೆಂಟ್ ಡಿಟೈಲ್ ಯಾವುದೇ ನಿರ್ಮಾಣದಲ್ಲೂ ತಾಂತ್ರಿಕವಾಗಿ ಒಳ ರಿಂಗುಗಳನ್ನು ಐದರಿಂದ-ಆರು ಇಂಚಿಗಿಂತಲೂ ಹೆಚ್ಚಿಗೆ ಹಾಕುವಂತಿಲ್ಲ. ಆದರೆ ಬಾರ್ ಬೆಂಡರ್‌ಗಳು ತಮ್ಮಿಷ್ಟದಂತೆ 8-9 ಇಂಚಿಗೆ ಹಾಕುತ್ತಾರೆ ಎಚ್ಚರ.
  • ಕಾಂಕ್ರೀಟ್ ಕಂಬ, ಗೋಡೆಯನ್ನು ಸೇರಿಸಿ ಪ್ಲಾಸ್ಟರ್ ಮಾಡುವಾಗ ಮೆಶ್ ಬಳಸಿ ಜೋಡಿಸುವ ಕೆಲಸ ಮಾಡಿಸಲೇಬೇಕು. ಇಲ್ಲವಾದರೆ ಪಿಲ್ಲರ್ ಮತ್ತು ಗೋಡೆಯ ಸಿಮೆಂಟ್ ಮಿಶ್ರಣದ ಅನುಪಾತದಲ್ಲಿರುವ ವ್ಯತ್ಯಾಸದಿಂದ, ಎಷ್ಟೇ ಚೆನ್ನಾಗಿ ಫಿನಿಶಿಂಗ್ ಮಾಡಿದರೂ ಕೆಲವೇ ವರ್ಷದಲ್ಲಿ ಬಿರುಕು ಮೂಡುತ್ತದೆ.
  • ಇನ್ನು ಅಡುಗೆಮನೆಯ ಅರೆಗಳು, ಅಟ್ಟಗಳು, ಕಪಾಟುಗಳು, ಡೈನಿಂಗ್ ಹಾಲ್, ಶೆಲ್ಫ್, ದೇವರ ಕೋಣೆಯೊಳಗಿನ ಅರೆಗಳು, ನಲ್ಲಿಯ ಸ್ಥಳಗಳು, ಕಿಟಕಿ ಸೈಜುಗಳು, ಸ್ನಾನದ ಮನೆಯಲ್ಲಿ ಹಾಕಬೇಕಾಗಿರುವ ಸೈಜು ಕಲ್ಲು, ಹೀಗೆ ಸಣ್ಣ ಸಣ್ಣ ವಿಷಯವಾದರೂ ಅನುಕೂಲದ ದೃಷ್ಟಿಯಿಂದ ಅಗತ್ಯವಾಗಿರುವ ವಿಷಯಗಳನ್ನು ಕಟ್ಟುವ ಮೊದಲೇ ನಿರ್ಧರಿಸಿ ಪಟ್ಟಿ ಮಾಡಿಟ್ಟುಕೊಂಡು ಅದನ್ನು ವಿನ್ಯಾಸಗಾರರಿಗೆ ತೋರಿಸಿ.
  • ಸುರಕ್ಷತಾ ನಿಯಮದ ವಿನ್ಯಾಸಗಳಿಗಾಗಿ- 09448996165.
- ಸಂತೋಷಕುಮಾರ್ ಮೆಹೆಂದಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; ಮುಖ್ಯ CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ