ಮಹಿಳೆ-ಮನೆ-ಬದುಕು

ಬಸಮ್ಮ ಬಹುಪರಾಕ್

ಇವರನ್ನು ನೋಡಿದರೆ ಇವರಿಗೇನು ಮಾತುಬಾರದು ಎಂದೆನಿಸುವುದೇ ಇಲ್ಲ. ಸದಾ ಹಸನ್ಮುಖಿಯಾಗಿರುವ ಬಸಮ್ಮ ಹುಟ್ಟು ಮೂಕಿ, ಕಿವಿ ಕೇಳಿಸದು. ಆದರೂ ಈ ನ್ಯೂನತೆಯನ್ನು ಶಾಪವೆಂದು ಭಾವಿಸದೆ ಛಲದಿಂದ ಕ್ರಿಯಾಶೀಲರಾಗಿದ್ದಾರೆ.

ನರಗುಂದ ಕನ್ನಡ ವಿಶ್ವವಿದ್ಯಾಲಯದ ಬಾದಾಮಿಯಲ್ಲಿರುವ ಶಿಲ್ಪ ಮತ್ತು ಚಿತ್ರಕಲಾ ವಿಭಾಗದಲ್ಲಿ ಡಿಪ್ಲೋಮಾ ಪಡೆದ ಬಸಮ್ಮ, ಶಿಲ್ಪಕಲೆಯಲ್ಲಿ ಸಾಧನೆ ಮಾಡುತ್ತ ಇತರರಿಗೆ ಮಾದರಿಯಾಗಿದ್ದಾರೆ. ಡಿಪ್ಲೋಮಾದ ನಂತರ ಶಿಲ್ಪಕಲೆಯಲ್ಲಿ ಪದವಿ ಪ್ರವೇಶ ಪಡೆದು; ಉಳಿ, ಸುತ್ತಿಗೆಗಳನ್ನು ಹಿಡಿದು ಶಿಲ್ಪಗಳನ್ನು ಕೆತ್ತಿದ್ದಾರೆ. ಭೂಮಿಯನ್ನು ಹೊತ್ತು ನಿಂತ ಮಹಿಳೆ, ಕ್ರಿಯೇಟಿವ್ ಹೆಡ್, ಕಾಳಿಂಗ ಮರ್ದನ... ಹೀಗೆ ಅನೇಕ ಶಿಲ್ಪಗಳನ್ನು ಸೃಷ್ಟಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಇವರೇ ಕೆತ್ತಿರುವ 'ಭೂಮಿ ಹೊತ್ತ ಮಹಿಳೆ'ಯನ್ನು ಇಡಲಾಗಿದೆ. ಇಷ್ಟೇ ಅಲ್ಲ, ಬಸಮ್ಮ ಪಟ್ಟದಕಲ್ಲು ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಲಲಿತಕಲಾ ಅಕಾಡೆಮಿ, ಚಿತ್ರಕಲಾ ಪರಿಷತ್, ಕರಕುಶಲ ಕಲೆ ಮೊದಲಾದ ಹತ್ತು ಹಲವು ಕಲಾ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಸದ್ಯ ಬಾದಾಮಿಯ ಚಿತ್ರಕಲೆ ಮತ್ತು ಶಿಲ್ಪಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಿಲ್ಪಕಲೆ ಕುರಿತಂತೆ ಮಾರ್ಗದರ್ಶನ ಮಾಡುತ್ತಿರುವ ಇವರು, ಮೊದಲಿನಿಂದಲೂ ಸಾಮಾನ್ಯ ವಿದ್ಯಾರ್ಥಿಗಳ ಶಾಲೆಯಲ್ಲಿಯೇ ಅಭ್ಯಾಸ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಚಿತ್ರಕಲಾ ಶಿಕ್ಷಕಿಯಾಗಬೇಕೆಂಬ ಮಹದಾಸೆಯನ್ನು ಈಡೇರಿಸಿಕೊಂಡಿದ್ದಾರೆ.

ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿ ಬಹುಮಾನ ಗೆದ್ದುಕೊಂಡಿದ್ದಾರೆ. ಕಲ್ಲು ಕೊರೆಯುವ ಅತ್ಯಾಧುನಿಕ ಮಶೀನ್ ಸ್ಥಾಪಿಸುವ, ಕಲಾಕೃತಿಗಳನ್ನು ರಚಿಸುವ ಗುರಿ ಹೊಂದಿರುವ ಬಸಮ್ಮ ತಮ್ಮ ಮನದಾಸೆಯನ್ನು ನಗುನಗುತ್ತಲೇ ಕೈಸನ್ನೆ ಮೂಲಕ ವಿವರಿಸುತ್ತಾರೆ. ಹ್ಯಾಟ್ಸಾಫ್ ಬಸಮ್ಮ.

- ಪ್ರವೀಣರಾಜು ಎಸ್. ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು