ಮಹಿಳೆ-ಮನೆ-ಬದುಕು

ವಿಘ್ನ ವಿದ್ಯುತ್

ವಿದ್ಯುದ್ದೀಪಗಳು ಮನೆಯ ಅಂದವನ್ನು ಮತ್ತಷ್ಟು ಆಕರ್ಷಿಸುತ್ತವೆ. ಸೊಬಗಷ್ಟೇ ಅಲ್ಲ, ಮನಸ್ಸಿಗೂ ಹಿತ ನೀಡುತ್ತವೆ. ಆದರೆ, ಅದೇ ವಿದ್ಯುದ್ದೀಪ ನಮ್ಮ ಮನೆಗೆ ಎಷ್ಟು ಸುರಕ್ಷಿತ?
ಇಂದಿನ ದಿನಪತ್ರಿಕೆಗಳಲ್ಲಿ ವಿದ್ಯುತ್ ಅವಘಡಗಳ ವರದಿಗೆ ಬರವೇ ಇಲ್ಲ. ಅಂದಹಾಗೆ, ವಿದ್ಯುತ್ ನಮ್ಮ ಮನೆಗೆ ನಿಜಕ್ಕೂ ಬೆಳಕಾಗಿದೆಯಾ ಅಥವಾ ಮಾರಕವಾಗಿದೆಯಾ ಎಂಬ ಆತಂಕ ಮೂಡದಿರದು. ಹಾಗಾದರೆ ನಮ್ಮ ಮನೆ ವಿದ್ಯುತ್‌ನಿಂದ ಎಷ್ಟು ಸುರಕ್ಷಿತವಾಗಿದೆ? ಅದರ ನಿರ್ವಹಣೆ ಹೇಗಿದೆ ಎಂಬುದಕ್ಕೆ ಅಂತಾರಾಷ್ಟ್ರೀಯ ತಾಮ್ರ ಉತ್ತೇಜನಾ ಸಮಿತಿ (ಭಾರತ) ಬಿಲ್ಡಿಂಗ್ ವೈರ್‌ನ ಪ್ರಧಾನ ವ್ಯವಸ್ಥಾಪಕ ಅಮೋಲ್ ಕಲ್ಸೇಕರ್ ಅನೇಕ ಸಲಹೆಗಳನ್ನು ನೀಡಿದ್ದಾರೆ.

ಬಹುತೇಕ ಅಗ್ನಿ ಅನಾಹುತಗಳಲ್ಲಿ ವಿದ್ಯುತ್ ಪಾತ್ರವೇ ಹೆಚ್ಚಿರುತ್ತದೆ. ಎಲೆಕ್ಟ್ರಿಕಲ್ ಹಾಗೂ ಅಗ್ನಿ ಆಕಸ್ಮಿಕಗಳಿಂದ ಸಂಭವಿಸುವ ಅವಘಡಗಳಿಗೆ ಮುಖ್ಯ ಕಾರಣ ಅಸಮರ್ಪಕ ಹಾಗೂ ಗುಣಮಟ್ಟವಲ್ಲದ ವೈರ್‌ಗಳ ಬಳಕೆ. ಜತೆಗೆ ವಿದ್ಯುತ್ ವ್ಯವಸ್ಥೆಯ ಅನುಷ್ಠಾನ ಮತ್ತು ಅದರ ನಿರ್ವಹಣೆಯಲ್ಲಿನ ವಿಫಲತೆ ಕಾರಣ. ಹಾಗಾದರೆ ಅವಘಡಗಳು ಸಂಭವಿಸುವ ಮುನ್ನವೇ ಜಾಗೃತಿ ಇದ್ದರೆ ಒಳ್ಳೆಯದು. ಜತೆಗೆ ಒಂದಿಷ್ಟು ಮುನ್ನೆಚ್ಚರಿಕೆ ಕೂಡ ಅಗತ್ಯ.

  • ಇಂದು ಹಿಂದೆಂದಿಗಿಂತಲೂ ಈಗ ಹೆಚ್ಚು ವಿದ್ಯುತ್ ಉಪಕರಣಗಳನ್ನು ಬಳಸುತ್ತಿದ್ದೇವೆ. ಆದರೆ, ಗುಣಮಟ್ಟದ ಉಪಕರಣಗಳನ್ನು ಬಳಸುತ್ತಾ ಅವಘಡಗಳಿಗೆ ಅವಕಾಶ ಮಾಡಿಕೊಟ್ಟಿರುತ್ತೇವೆ. ಹೀಗಾಗಿ, ವಿದ್ಯುತ್ ಉಪಕರಣಗಳು ಉತ್ಕೃಷ್ಟ ಮಟ್ಟದ್ದಾಗಿರಲಿ.
  • ವಿದ್ಯುತ್ ದುರಸ್ತಿ ಕೈಗೊಳ್ಳುವ ಮುನ್ನ ವಿದ್ಯುತ್ ಮೂಲವನ್ನು ಸ್ಥಗಿತಗೊಳಿಸಿ. ಇಷ್ಟಾಗಿಯೂ ಕೆಲವೊಮ್ಮೆ ಶಾರ್ಟ್‌ಸರ್ಕ್ಯೂಟ್ ಆಗಿ ಅನಾಹುತ ಸಂಭವಿಸಿದಲ್ಲಿ ತಕ್ಷಣ ಸಂಪರ್ಕವನ್ನು ಕಡಿತಗೊಳಿಸಿ. ಅದರ ಮೇಲೆ ಮರಳು ಅಥವಾ ಅಗ್ನಿಶಾಮಕ ಪುಡಿಯನ್ನು ಸಿಂಪಡಿಸಿ. ಯಾವುದೇ ಕಾರಣಕ್ಕೂ ನೀರನ್ನು ಬಳಸಬೇಡಿ.
  • ಕಾಲಕಾಲಕ್ಕೆ ತಕ್ಕಂತೆ ವಿದ್ಯುತ್ ಉಪಕರಣ, ತಂತಿಗಳನ್ನು ತಪಾಸಣೆ ನಡೆಸಿ. ಸಾಧ್ಯವಿದ್ದಲ್ಲಿ ತಂತಿಗಳನ್ನು ಬದಲಾಯಿಸಿ.
  • ರಗ್ ಅಥವಾ ಕಾರ್ಪೆಟ್‌ಗಳ ಅಡಿಯಲ್ಲಿ ವಿದ್ಯುತ್ ವಿಸ್ತರಣಾ ಪೆಟ್ಟಿಗೆಯನ್ನು ಬಳಸದಿರಿ. ಇದರಿಂದ ವಿದುತ್ ಸೋರಿಕೆಯಾಗಿ ಆಕಸ್ಮಿಕ ಬೆಂಕಿ ಸಂಭವಿಸಬಹುದು. ಎಲ್ಲಾ ವಿಧದ ವಿದ್ಯುತ್ ತಂತಿಗಳು ಅಗತ್ಯ ಇನ್ಸುಲೇಷನ್‌ಗಳನ್ನು ಹೊಂದಿರಬೇಕು. ಇದರಿಂದ ತಂತಿಗಳೊಂದಿಗೆ ನೇರ ಸಂಪರ್ಕ ತಡೆದಂತಾಗುತ್ತದೆ.
  • ಅಧಿಕ ವೈರ್‌ಗಳನ್ನು ಬಳಸಿ ವಿಸ್ತರಣಾ ಪೆಟ್ಟಿಗೆಗೆ ಹೆಚ್ಚಿನ ಹೊರೆ ಹಾಕಬೇಡಿ. ವಿಸ್ತರಣಾ ಪೆಟ್ಟಿಗೆಯ ಬಳಕೆಯನ್ನು ಕಡಿತಗೊಳಿಸಿ ಅಥವಾ ಹೊಸ ವಿದ್ಯುತ್ ಸಂಪರ್ಕಕ್ಕೆ ಕೋರಿಕೆ ಸಲ್ಲಿಸಿ. ಪ್ರತಿಯೊಂದನ್ನೂ ಬಳಸುವ ಮುನ್ನ ವಿದ್ಯುತ್ ಪೆಟ್ಟಿಗೆಗಳ ತಪಾಸಣೆ ಕೈಗೊಳ್ಳುವುದು ಮುಖ್ಯ.
  • ವಿದ್ಯುತ್ ಉಪಕರಣಗಳಿಂದ ವಾಸನೆ ಅಥವಾ ಹೊಗೆ ಕಂಡುಬಂದಲ್ಲಿ ಅದರ ಸಂಪರ್ಕ ಕಡಿತಗೊಳಿಸಿ.
  • ವಿದ್ಯುತ್ ಉಪಕರಣಗಳ ಬಳಿ ಉರಿಯುವ ವಸ್ತುಗಳನ್ನು ಇಡಬೇಡಿ. ಅದರಲ್ಲೂ ಅಡುಗೆ ಕೋಣೆಯಲ್ಲಿ ಗ್ಯಾಸ್ ಒಲೆ ಹಾಗೂ ಸಿಲಿಂಡರ್‌ಗಳನ್ನಿಡುವುದು ಬೇಡ.
  • ತಿಳಿಯದೇ ಅಥವಾ ನಿರ್ಲಕ್ಷ್ಯದಿಂದ ಗೋಡೆಗಳು ತೇವಗೊಂಡ್ದಿದ್ದಲ್ಲಿ ತೆರೆದ ವಿದ್ಯುತ್ ತಂತಿಗಳು ಬಹುಬೇಗನೆ ಶಾಕ್ ನೀಡುತ್ತವೆ. ವಿದ್ಯುತ್ ತಂತಿಗೆ ನೀರು ತಗಲುವ ಅಪಾಯ ಇದ್ದಲ್ಲಿ ಸಂಪರ್ಕ ಬಂದ್ ಮಾಡಿ. ತೆರೆದ ತಂತಿ ಬದಲಿಸಿ, ಇನ್ಸುಲೇಟೆಡ್ ತಂತಿ ಬಳಸಿ ಅಥವಾ ಅದಕ್ಕೆ ಇನ್ಸುಲೇಷನ್ ಹಚ್ಚುವುದನ್ನು ಮರೆಯದಿರಿ.
  • ಹಾಳಾದ ವಿದ್ಯುತ್ ಉಪಕರಣಗಳು ಅಥವಾ ವಸ್ತುಗಳನ್ನು ದುರಸ್ತಿ ಕೇಂದ್ರಕ್ಕೆ ಕೊಂಡೊಯ್ದು ಸರಿಪಡಿಸಿ. ಇಲ್ಲವಾದಲ್ಲಿ, ಹೊಸದಾಗಿ ತಂದು ಅಳವಡಿಸಿ.
- ಮುರಳಿ ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ