ಮಹಿಳೆ-ಮನೆ-ಬದುಕು

ಅವಳು ಸುಳ್ಳಿ

ಟೀಚರ್, 'ಗೌರಿ ನಿನ್ನೆ ಕೊಟ್ಟಿದ್ದ ಹೋಂವಕರ್ ತೋರಿಸು..' ಎಂದಾಗ ಗೌರಿಯ ಮುಖದಲ್ಲಿ ದಿಢೀರ್ ಬದಲಾವಣೆ. ಅಲ್ಲಿಯವರೆಗೆ ಖುಷಿಯಾಗಿದ್ದ ಗೌರಿ ಕೂಡಲೇ ಮುಖವನ್ನು ಸುಸ್ತಾದವಳಂತೆ ಮಾಡಿಕೊಂಡು, 'ಮೇಡಂ, ನಿನ್ನೆಯಿಂದ ಜ್ವರ. ಹೋಂವರ್ಕ್ ಮಾಡಿಲ್ಲ' ಅಂತ ಸಲೀಸಾಗಿ ಸುಳ್ಳು ಹೇಳಿ ಮುಗಿಸಿದ್ದಳು.
ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರತಿಯೊಬ್ಬರೂ ಸುಳ್ಳು ಹೇಳಿರುತ್ತೇವೆ. ಕೆಲವೊಮ್ಮೆ ಇನ್ನಾರೋ ನಮಗೆ ಸುಳ್ಳು ಹೇಳುವಂತೆ ಮಾಡಿರುತ್ತಾರೆ ಕೂಡ. ಮಹಾಭಾರತದಲ್ಲಿ ಧರ್ಮರಾಯನ ಬಾಯಲ್ಲಿ ಸುಳ್ಳು ಹೇಳಿಸಿದಂತೆ! ಅಷ್ಟೆ ಏಕೆ... ನಮ್ಮಿಂದ ಸುಳ್ಳು ಹೇಳಿಸೋಕೆ ಮತ್ತ್ಯಾರೋ ಪಂದ್ಯ ಕಟ್ಟಿದ್ದರೂ ಅಚ್ಚರಿಪಡಬೇಕಿಲ್ಲ. ಏಕೆ ಹೇಳಿ... ಹರಿಶ್ಚಂದ್ರನ ಬಾಯಲ್ಲಿ ವಿಶ್ವಾಮಿತ್ರ ಮಿಥ್ಯ ಆಡಿಸಿಯೇ ಆಡಿಸುತ್ತೇನೆ ಅಂತ ಹಠಕ್ಕೆ ಬಿದ್ದಿರಲಿಲ್ಲವೇ? ಹಾಗೆ. ಒಟ್ಟಾರೆ, ಈ ಸುಳ್ಳು ಯಾರನ್ನೂ ಬಿಡದೇ ಎಲ್ಲರ ಬಾಯಲ್ಲೂ ಉಲಿಯುಲು ಹಾತೊರೆಯುತ್ತದೆ.
ಸುಳ್ಳು ಸತ್ಯಕ್ಕಿಂತ ಹೆಚ್ಚು ಪ್ರಭಾವಶಾಲಿ. ಹೀಗಾಗಿ ಸದ್ಯದ ಮಟ್ಟಿಗೆ ಪಾರಾಗಲು ಸಲೀಸಾಗಿ ಸುಳ್ಳು ಹೇಳೋದನ್ನು ಎಲ್ಲರು ಅಭ್ಯಾಸ ಮಾಡಿಕೊಂಡಿರುತ್ತೇವೆ. ಹೀಗೆ ಹೇಳುವ ಸುಳ್ಳಿನಿಂದ ಆಗುವ ಪ್ರಯೋಜನವೇನು? ಆ ಕ್ಷಣಕ್ಕೊಂದಿಷ್ಟು ನೆಮ್ಮದಿ ಸಿಗೋದು ಬಿಟ್ಟರೆ ಬೇರೇನನ್ನೂ ಕೊಡಲಾರದು. ಬಿಟ್ಟರೂ ಬಿಡದ ಮಾಯೆಯಂತೆ ಸುಳ್ಳಿನ ಸರಮಾಲೆ ಬೆಳೆಯುತ್ತಲೇ ಹೋಗುತ್ತದೆ. ಇನ್ನು ಹೆಣ್ಣಿಗೂ ಸುಳ್ಳಿಗೂ ಏನೋ ನಂಟಿದೆ. ಪುರುಷರಿಗಿಂತ ಮಹಿಳೆಯರ ಬಾಯಲ್ಲಿ ಸುಳ್ಳು ನಿರರ್ಗಳವಾಗಿ ಬರುತ್ತದಂತೆ. ಹಾಗಂತ ಪುರುಷರು ಸುಳ್ಳು ಹೇಳಲ್ಲ ಎಂದಲ್ಲ. ಮಹಿಳೆಯರಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಅಷ್ಟೆ. ಅಲ್ಲದೆ ತಕ್ಷಣದ ಕಷ್ಟದಿಂದ ಪಾರಾಗಲು ನಿತ್ಯ ಹೇಳುವ ಸುಳ್ಳು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಅನಗತ್ಯ ಸುಳ್ಳುಗಳನ್ನು ನಿಲ್ಲಿಸುವುದರಿಂದ ಆರೋಗ್ಯವನ್ನು ಒಳ್ಳೆಯ ಸ್ಥಿತಿಯಲ್ಲಿಡುವುದರ ಜೊತೆಗೆ ಮಾನಸಿಕ ಒತ್ತಡವನ್ನೂ ಸ್ಥಿಮಿತದಲ್ಲಿಡಬಹುದು. ಇದು ಕೇವಲ ಬಾಯಿ ಮಾತಿಗೆ ಹೇಳಿದ ವಿಷಯವಲ್ಲವಾದ್ದರಿಂದ ನಂಬಲೇಬೇಕು.
ಹೌದು, ಒಂದು ಅಧ್ಯಯನದ ಪ್ರಕಾರ ಇದು ಸಾಬೀತಾಗಿದೆ. ವಾಷಿಂಗ್ಟನ್ನಿನ ನೋಟ್ರೆ ಡಾಮಾ ವಿಶ್ವವಿದ್ಯಾಲಯ ಸುಳ್ಳಿನ ಪ್ರಭಾವದ ಬಗ್ಗೆ ನಡೆಸಿರೋ ಸಂಶೋಧನೆಯಿಂದ ಇಂಥದ್ದೊಂದು ಮಹತ್ತರ ವಿಷಯ ಬೆಳಕಿಗೆ ಬಂದಿದೆ.
18- 71 ವರ್ಷದ ವರೆಗಿನ ಎಲ್ಲಾ ವಯೋವಾನದ 110 ಜನರನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು. ಇದರಲ್ಲಿ 33 ವಯಸ್ಕರರು ಹಾಗೂ ಉಳಿದ 77 ಮಂದಿ ಕಾಲೇಜು ವಿದ್ಯಾರ್ಥಿಗಳು. ಇದರಲ್ಲಿನ ಅರ್ಧದಷ್ಟು ಸ್ಪರ್ಧಿಗಳಿಗೆ ಸುಳ್ಳು ಹೇಳದಂತೆ ನಿರ್ದೇಶಿಸಲಾಗಿತ್ತು. ಇನ್ನುಳಿದವರಿಗೆ ಯಾವುದೇ ನಿರ್ದೇಶನ ನೀಡದೇ ಅವರ ಪಾಡಿಗೆ ಅವರನ್ನು ಬಿಡಲಾಗಿತ್ತು. ಸತತ 10 ವಾರಗಳ ಸಂಶೋಧನೆಯ ನಂತರ ಎಲ್ಲ ಸ್ಪರ್ಧಿಗಳ ಆರೋಗ್ಯವನ್ನ ತಪಾಸಣೆಗೊಳಪಡಿಸಲಾಯಿತು. ಇದರಿಂದ ಹೊರಬಿದ್ದ ಮಾಹಿತಿ ಏನೆಂದರೆ, ಸುಳ್ಳು ಹೇಳದೇ ಇದ್ದ ಸ್ಪರ್ಧಿಗಳ ಆರೋಗ್ಯ ಹಾಗೂ ಮಾನಸಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿತ್ತು. ಹಾಗೆಯೇ ಸುಳ್ಳು ಹೇಳಿದ್ದವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.63 ಮಹಿಳೆಯರು. ಅಲ್ಲದೇ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಸುಳ್ಳಿನ ಛಾಯೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಆವರಿಸಿದೆ ಎನ್ನುವುದು ಬಹಿರಂಗವಾಯಿತು.
ಮಹಿಳೆಯರ ಆರೋಗ್ಯದಲ್ಲಿ ಬಹಳಷ್ಟು ಏರುಪೇರಾಗುತ್ತದೆ. ಬಹುಶಃ ಇದೇ ಕಾರಣಕ್ಕೇ ಇರಬಹುದು!

- ಕೋಕಿಲ ಎಂ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್