ಅಡುಗೆ ಮಾಡುವ ಮಹಿಳೆಯರಿಗೆ ಅದರಲ್ಲೂ ಹೊರಗಡೆ ಕೆಲಸಕ್ಕೆ ಹೋಗಿಬರುವ ಮಹಿಳೆಯರಿಗೆ ಬಹಳಷ್ಟು ಗಡಿಬಿಡಿ, ಧಾವಂತ ಇರುತ್ತದೆ. ಸ್ವಲ್ಪ ಕೆಲಸ ಕಡಿಮೆಯಾದರೂ ಹೆಚ್ಚಿನ ಸಹಾಯವಾಗುತ್ತದೆ. ಅದಕ್ಕಾಗಿ ಕೆಲವು ಸುಲಭ ಟಿಪ್ಸ್‌ಗಳು... ಗಜ್ಜರಿ, ಮೆಂತ್ಯಸೊಪ್ಪಿನ ಪಲ್ಯ, ಪುಂಡಿಪಲ್ಯ ತಿಂದು ಮಿಕ್ಕಿದ್ದರೆ ಬಿಸಿಲಿನಲ್ಲಿ ಅಥವಾ ಓವನ್‌ನಲ್ಲಿ ಒಣಗಿಸಿ ಬೇಕಾದಾಗ ಉಪಯೋಗಿಸಬಹುದು. ನಿಂಬೆಹಣ್ಣನ್ನು ಬಿಸಿನೀರಿನಲ್ಲಿಟ್ಟು ಹೆಚ್ಚಿದರೆ ರಸವು ಹೆಚ್ಚು ಬರುತ್ತದೆ. ಅನ್ನವು ಹೆಚ್ಚು ಬಿಳುಪಾಗಿ ಕಾಣಲು ಅನ್ನ ಕುದಿಯುವಾಗ ಸ್ವಲ್ಪ ನಿಂಬೆರಸವನ್ನು ಹಾಕಿ. ಉಪ್ಪು ನೀರಿನಲ್ಲಿ ಹಸಿ ಕೊಬ್ಬರಿಯನ್ನು ಹಾಕಿಟ್ಟು 3-4 ದಿನ ಬಳಸಬಹುದು. ಬೇಳೆ ಕುದಿಯುವಾಗ ಸ್ವಲ್ಪ ಅರಿಸಿನ, ಎಣ್ಣೆ ಹಾಕಿದರೆ ಬೇಳೆ ಬೇಗನೇ ಬೇಯುತ್ತದೆ. ಜಾಸ್ತಿ ನೀರು ಕುಡಿಯುವ ಅಭ್ಯಾಸ ಇಲ್ಲದವರು ದೋಸೆ ತಿನ್ನುವುದರಿಂದ ಜಾಸ್ತಿ ಬಾಯಾರಿಕೆ ಆಗುತ್ತದೆ. ಇದು ಆರೋಗ್ಯಕ್ಕೆ ಉತ್ತಮ..- ಮಾಲಾ ಹುನಗುಂದ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics