ಮಹಿಳೆ-ಮನೆ-ಬದುಕು

ಜೋಡಿ ಕೋಗಿಲೆ

ತೊದಲ್ನುಡಿಯಾಗಿ ಕಲಿತದ್ದೇ ಸಂಗೀತ. ಅಪ್ಪನ ಸುಶ್ರಾವ್ಯ ಕೊಳಲುವಾದನ. ಅಜ್ಜನ ಮರಾಠಿ ಅಭಂಗಗಳು ಕಿವಿಗೆ ಸದಾಕಾಲ ಬೀಳುತ್ತಿದ್ದಾಗ ...

ತೊದಲ್ನುಡಿಯಾಗಿ ಕಲಿತದ್ದೇ ಸಂಗೀತ. ಅಪ್ಪನ ಸುಶ್ರಾವ್ಯ ಕೊಳಲುವಾದನ. ಅಜ್ಜನ ಮರಾಠಿ ಅಭಂಗಗಳು ಕಿವಿಗೆ ಸದಾಕಾಲ ಬೀಳುತ್ತಿದ್ದಾಗ ಈ ಮಕ್ಕಳು ಸಂಗೀತವನ್ನೇ ಕುಡಿದು ಬೆಳೆದರು. ಇಂದು ವಿದ್ಯಾಭ್ಯಾಸದ ಜತೆಗೆ ಸಂಗೀತ ಸಾಧನೆಯ ಮೂಲಕ ಜನಮನರಂಜಿಸುವ ಮಧುರ ಕಂಠದ ಸಹೋದರಿಯರು ಅಕ್ಕ ಸ್ವಾತಿ ಎಸ್. ರಾವ್, ತಂಗಿ ಸೌರಭ ಎಸ್.ರಾವ್. ಬೆಳ್ತಂಗಡಿ ತಾಲೂಕಿನ ಕಾಪಿನಡ್ಕದ ಬಳಿಯ ಕೆಳ್ಕರದ ಸತೀಶ ರಾವ್ ಗೀತಾ ದಂಪತಿಯ ಪುತ್ರಿಯರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಅಕ್ಕ ಮೊದಲ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ. ತಂಗಿ ಪಿಯು ಮೊದಲ ವರ್ಷದಲ್ಲಿದ್ದಾಳೆ.
ಈ ಸಹೋದರಿಯರ ಮನೆ ಸಂಗೀತದ ಆಡುಂಬೊಲ. ಅಜ್ಜ ಸೋಮಶೇಖರರಾಯರು ಕಲಿಸಿದ್ದು ಹಿಂದೂಸ್ತಾನಿ ಸಂಗೀತದ ಪಲುಕುಗಳನ್ನು, ಅಪ್ಪ ಸತೀಶ ರಾವ್ ತಬಲ ಮತ್ತು ಕೊಳಲುವಾದನದಲ್ಲಿ ನಿಷ್ಣಾತ. ತಾಯಿಯ ತಂದೆ ರಘುವೀರ ಭಂಡಾರ್ಕರ್ ಯಕ್ಷಗಾನ ಪ್ರಸಂಗಕರ್ತರಾಗಿದ್ದು ಸಂಗೀತದಲ್ಲೂ ಪಳಗಿದವರು. ಇವರೆಲ್ಲರ ಕುಲುಮೆಯಲ್ಲಿ ಈ ಅಕ್ಕ ತಂಗಿ ಚಿಕ್ಕವರಿದ್ದಾಗಲೇ ಅಭಂಗಗಳನ್ನು ಮೀರಾಭಜನ್‌ಗಳನ್ನು ಹಾಡುತ್ತಾ ಸಂಗೀತದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡು ಬಂದರು. ಆರಂಭದ ಗುರು ಅಜ್ಜನೇ. ಬಳಿಕ ಜಯಶ್ರೀ ಭಟ್ ಅವರಿಂದ ಹಿಂದೂಸ್ತಾನೀ ಸಂಗೀತದ ಪಾಠ, ಏಳು ವರ್ಷಗಳಿಂದ ಶಾಮಲಾ ನಾಗರಾಜ್ ಅವರಲ್ಲಿ ನಾಟಕ ಸಂಗೀತ ಕಲಿಯುತ್ತಿದ್ದಾರೆ.
ಶಾಸ್ತ್ರೀಯ ಸಂಗೀತದ ಕಚೇರಿಗೆ ಕುಳಿತರೆ ನಿರಂತರ ಮೂರು ತಾಸಿನ ಕಾಲ ಬಿಡುವಿಲ್ಲದೆ ಸುಮ ಕೋಮಲ ಕಂಠದಿಂದ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಬಲ್ಲ ಈ ಸಹೋದರಿಯರು ತ್ಯಾಗರಾಜರ ಕೀರ್ತನೆ ತಮಗೆ ತುಂಬ ಇಷ್ಟವಾದುದು. ಹಾಡುತ್ತಿದ್ದರೆ ನಮ್ಮನ್ನೇ ನಾವು ಮರೆತುಬಿಡುತ್ತೇವೆ ಎನ್ನುತ್ತಾರೆ. ಹಾರ್ಮೋನಿಯಂ ಜತೆಗೆ ತಬಲವಾದನವೂ ಅವರಿಗೆ ಕರಗತ. ದಾಸರ ಕೀರ್ತನೆಗಳನ್ನು ಭಾವಪರವಶರಾಗಿ ಶೃತಪಡಿಸುತ್ತಾರೆ.
ಕರ್ನಾಟಕ ದಾದ್ಯಂತ ಈ ಪ್ರತಿಭೆಗಳ ಕಂಠಸಿರಿ ಕೇಳುಗರಿಗೆ ಪರಿಚಯವಾಗಿದೆ. ಬಾಚಿಕೊಂಡ ಬಹುಮಾನಗಳಿಗೆ ಲೆಕ್ಕವೇ ಇಲ್ಲ. ನೀವೂ ಅವರಿಗೆ ವಿಶ್ ಮಾಡಿ, ಮೊ. 9449714724.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ