ಮಹಿಳೆ-ಮನೆ-ಬದುಕು

ವಯಸ್ಸಾದರೂ ಗರ್ಭಿಣಿ ಆಗಬಹುದು...

ಗರ್ಭ ಧರಿಸಲು ಇದೇ ಸರಿಯಾದ ವಯಸ್ಸು ಎಂದು ಇದೆಯೇ? ಈ ಪ್ರಶ್ನೆ ಬಹುಶಃ 30ರ ಆಸುಪಾಸಿನಲ್ಲಿರುವವರ...

ಗರ್ಭ ಧರಿಸಲು ಇದೇ ಸರಿಯಾದ ವಯಸ್ಸು ಎಂದು ಇದೆಯೇ? ಈ ಪ್ರಶ್ನೆ ಬಹುಶಃ 30ರ ಆಸುಪಾಸಿನಲ್ಲಿರುವವರ ಮನಸ್ಸಿನಲ್ಲಿ ಹಾದುಹೋಗಿರುತ್ತದೆ. ಅದರಲ್ಲೂ 30-40ರಲ್ಲಿದ್ದರಂತೂ ನಿಮ್ಮ ತಲೆ ಪ್ರಶ್ನೆಗಳಿಂದ ಚಿಟ್ಟುಹಿಡಿದುಹೋಗಿರುತ್ತದೆ. ಆದರೆ ನಿಮ್ಮ ವಯಸ್ಸು ಎಷ್ಟೇ ಇರಲಿ, ಆರೋಗ್ಯ ಉತ್ತಮವಾಗಿದ್ದು ಮಾತೃತ್ವದ ಆರೈಕೆ ಪಡೆದರೆ, ಉತ್ತಮ ಜೀವನಶೈಲಿ ಅಳವಡಿಸಿಕೊಂಡರೆ ಆರೋಗ್ಯವಂತ ಮಗುವನ್ನು ಪಡೆಯಬಹುದು.
20ರ ವಯೋವುತಿಯಲ್ಲಿರುವ ಆರೋಗ್ಯವಂತ ಮಹಿಳೆಯರಲ್ಲಿ ಅವರು ಬಯಸಿದ 2 ತಿಂಗಳ ಒಳಗೆ ಗರ್ಭ ಧರಿಸುತ್ತಾರೆ. ಅವರಲ್ಲಿ ಗರ್ಭಪಾತದ ಅಪಾಯ ಕಡಿಮೆ ಮತ್ತು ವೈದ್ಯಕೀಯ ತೊಂದರೆಗಳು ಕಡಿಮೆ. ಆದರೆ ಕೆಲವು ಸಂದರ್ಭಗಳಲ್ಲಿ 20-24 ವಯೋವುತಿಯ ಮಹಿಳೆಯರೂ ಬಸಿರುನಂಜಿಗೆ ತುತ್ತಾಗುವ ಅಪಾಯ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಇಂಥದರಲ್ಲಿ ಅವಧಿಪೂರ್ವ ಪ್ರಸವದ ಸಂಭವ ಹೆಚ್ಚು.
30ರ ಆರಂಭದಲ್ಲಿದ್ದರೆ ಅಪಾಯಗಳು 20ರ ಮಹಿಳೆಯರಿಗಿಂತ ತುಸು ಭಿನ್ನ. ಕಾರಣ, ಅಂಡಾಣುಗಳ ಬಿಡುಗಡೆ ಬೇಗ ಆಗದಿರುವುದರಿಂದ ಗರ್ಭಧಾರಣೆ ನಿಧಾನವಾಗಬಹುದು. ಸಾಮಾನ್ಯವಾಗಿ ಗರ್ಭದ ಸಮಸ್ಯೆಗಳಿಗೆ, ಫಲವಂತಿಕೆ ತಡವಾಗುವುದಕ್ಕೆ 35ನ್ನು ಮಾನದಂಡ ವಯಸ್ಸನ್ನಾಗಿ ಹೇಳುತ್ತಾರೆ. ಆದರೆ, ಸರಿಯಾದ ವೈದ್ಯಕೀಯ ಚಿಕಿತ್ಸೆ, ಉತ್ತಮ ಆರೈಕೆಯ ಮೂಲಕ 35 ಅಥವಾ ಹೆಚ್ಚಿನ ವಯಸ್ಸಿನ ಮಹಿಳೆಯರೂ ಆರೋಗ್ಯವಂತ ಮಕ್ಕಳನ್ನು ಪ್ರಸವಿಸುತ್ತಾರೆ.
ಅಂಕಿ-ಅಂಶಗಳು ಏನೇ ಇರಲಿ, ನಿಮ್ಮ ವಯಸ್ಸು ಏನೇ ಇರಲಿ ಗರ್ಭವತಿಯಾಗುವ ಮುನ್ನ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ಅದರಲ್ಲೂ ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳಿದ್ದರೆ, ನೀವು ತೆಗೆದುಕೊಳ್ಳುತ್ತಿರುವ ಔಷಧ ಗರ್ಭಾವಸ್ಥೆಯಲ್ಲೂ ಸುರಕ್ಷಿತವೇ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಳ್ಳಿ.
ಆದಷ್ಟು ಬೇಗ ಆರೈಕೆ ಆರಂಭಿಸಿ, ಆರೋಗ್ಯ ರಕ್ಷಣೆ ಒದಗಿಸುವವರ ಜತೆ ಸಮಾಲೋಚನೆ ನಡೆಸಿ. ಇದರಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿ, ಆರೋಗ್ಯವಾಗಿ ಇರಬಹುದು.
ಹೆಚ್ಚಿನ ಮಾಹಿತಿಗೆ:  ಡಾ. ಭಾವನಾ ಮಿಶ್ರಾ, ದಿ ಕ್ರಡಲ್ ಡೆಲಿವರಿಂಗ್ ಜಾಯ್, ಬೆಂಗಳೂರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!