ಮಹಿಳೆ-ಮನೆ-ಬದುಕು

ಸಿಟ್ಯಾಕೋ ಸಿಡುಕ್ಯಾಕೋ...

ಓಹ್! ಗಂಟೆ ಏಳೂವರೆ ಆಗೋಯ್ತು! ಇನ್ನೇನು 'ಅವ್ರು' ಬರೋ ಹೊತ್ತು. ನೀವು ಬೇಗನೇ ಮನೆಗೆಲಸ ಮುಗಿಸ್ಕೊಳ್ತೀರಿ...

ಓಹ್! ಗಂಟೆ ಏಳೂವರೆ ಆಗೋಯ್ತು! ಇನ್ನೇನು 'ಅವ್ರು' ಬರೋ ಹೊತ್ತು. ನೀವು ಬೇಗನೇ ಮನೆಗೆಲಸ ಮುಗಿಸ್ಕೊಳ್ತೀರಿ. ಇಂದಿನ ಆಗುಹೋಗುಗಳ ಕುರಿತು, ಇನ್ನೇನೋ ಕೇಳೋದಿಕ್ಕೆ ಮನದೊಳಗೇ ಲೆಕ್ಕಾಚಾರ ಹಾಕ್ತೀರಿ. ಆದ್ರೆ.. ಗಂಟೆ ಒಂಬತ್ತಾಗೋಯ್ತು.. ನಿಮ್ಮ ಮನದೊಳಗೇನೋ ಪುಕಪುಕ.. ಯಾಕಿನ್ನೂ ಬಂದಿಲ್ಲ..! ಮೊಬೈಲ್ ಬೇರೆ ರಿಸೀವ್ ಮಾಡ್ತಿಲ್ಲ. ಏನೇನೋ ಕೆಟ್ಟ ಯೋಚನೆಗಳು. ಅಯ್ಯೋ ದೇವ್ರೇ, 'ಅವ್ರಿಗೆ ಏನೂ ಆಗದಿರ್ಲೀಪ್ಪಾ, ಅವ್ರು ಮನೆಗೆ ಸೇಫಾಗಿ ಬರ್ಲಿ'. ಹತ್ತಾರು ಸಲ ದೇವ್ರನ್ನ ಬೇಡ್ಕೋತೀರಿ. ಅಷ್ಟರಲ್ಲಿ ಹೊರಗೆ ಗಾಡಿ ಸದ್ದು. ಅಬ್ಬಾ!  ನಿರಾಳವಾಗಿಬಿಡ್ತೀರಿ.
'ಯಾಕಿಷ್ಟು ಲೇಟು?' ಎಂದು ಆತಂಕದಿಂದ ಕೇಳಿದ್ದಕ್ಕೆ, 'ಕಾಲೇಜು ಗೆಳೆಯ ಸಿಕ್ಕಿದ್ದ ಕಣೆ. ಕಾಫಿ ಕುಡೀತಾ ಮಾತಾಡ್ತಾ ಕೂತ್ಕೊಂಡೆ. ಟೈಮ್ ಹೋಗಿದ್ದೇ ಗೊತ್ತಾಗ್ಲಿಲ್ಲ' ಎಂಬ ತಣ್ಣಗಿನ ಉತ್ತರ!'ನನ್ನ ಕಕ್ಕುಲಾತಿಗೆ ಬೆಲೇನೇ ಇಲ್ವಲ್ಲ?' ನೀವು ನಖಶಿಖಾಂತ ಉರಿದುಬಿಡ್ತೀರಿ. ಸಿಟ್ಟಿನಿಂದ ಏನೇನೋ ಅಂದುಬಿಡ್ತೀರಿ. ಮಾತಿಗೆ ಮಾತು ಬೆಳೀತಾಹೋಗುತ್ತೆ. ರಾತ್ರಿಯಿಡೀ ಜಗಳ, ಅಳು...
ನೀವು ಅಂದುಕೊಂಡಿದ್ದೇನು? ಆಗಿರೋದೇನು? ಮಕ್ಕಳ ಕಲಿಕೆ ಬಗ್ಗೆ ಮಾತಾಡ್ಬೇಕು, ಶಾಪಿಂಗ್ ಮಾಡ್ಬೇಕು, ಮಕ್ಕಳ ರಜದಲ್ಲಿ ಟೂರ್‌ಗೆ ದಿನ ನಿಗದಿ ಮಾಡ್ಬೇಕು ಇನ್ನೂ ಏನೇನೋ ಯೋಚಿಸಿರ್ತೀರಿ, ರುಚಿರುಚಿಯಾದ ಅಡುಗೆ ಮಾಡಿಟ್ಟಿರ್ತೀರಿ. ಅದನ್ನು ಖುಷಿಯಾಗಿ ಸವಿಯುವ ಮೂಡ್ ಇಬ್ಬರಲ್ಲೂ ಇಲ್ಲ.
ಅದೆಷ್ಟೋ ಮನೆಗಳಲ್ಲಿ ಇವೆಲ್ಲ ಇದ್ದಿದ್ದೇ. ಅಂದುಕೊಳ್ಳುವುದೇ ಬೇರೆ, ಆಗುವುದೇ ಬೇರೆ. ಮನದೊಳಗಿನ ಪ್ರೀತಿ, ಕಕ್ಕುಲಾತಿಯನ್ನು ಸರಿಯಾಗಿ ಅಭಿವ್ಯಕ್ತಿಸಲು ಆಗುವುದಿಲ್ಲ. ಪರಿಣಾಮ, ಮನೆಯಲ್ಲಿ ದಿನಾ ಜಗಳ. ಮಕ್ಕಳೂ ಇದರಿಂದ ರೋಸಿಹೋಗುವುದು ಖಂಡಿತ.
ಹುಸಿಮುನಿಸು, ಹುಸಿ ಜಗಳವಾದ್ರೆ ಪರವಾಗಿಲ್ಲ. ಅದು ಕೊನೆಗೆ ವಿನೋದದಲ್ಲಿ, ಸಂತಸದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿರುವುದು 'ಟೇಕ್ ಇಟ್ ಈಸಿ' ಪಾಲಿಸಿ ಮಾತ್ರ. ಆಕೆ ಹೇಳಿದ್ದನ್ನು ಆತ, ಆತ ಹೇಳಿದ್ದನ್ನು ಆಕೆ ಲಘುವಾಗಿ ಪರಿಗಣಿಸುತ್ತಾರೆ. ಪರಸ್ಪರ ಛೇಡಿಸಿ, ನಕ್ಕು ಸುಮ್ಮನಾಗುತ್ತಾರೆ. ಆದರೆ ಪರಸ್ಪರ ಅರ್ಥ ಮಾಡಿಕೊಳ್ಳದೆ, ಸೀಸಿಯಸ್ ಜಗಳವಾದರೆ...? ಬೆಳಗ್ಗೆ ವಾಕಿಂಗ್ ಹೋಗುವಾಗ್ಲೂ ಜಗಳ, ಟಿಫಿನ್ ಮಾಡುವಾಗ್ಲೂ ಜಗಳ, ಶಾಪಿಂಗ್ ಹೋದಾಗಲೂ ಜಗಳ. ಅದೂ ಬೇರೆಯವರ ಗಮನ ಸೆಳೆಯುವಷ್ಟು! ಎಷ್ಟು ಹೊತ್ತಿಗೆ ನೋಡಿದರೂ ಬರೀ ಬಿಸಿಬಿಸಿ ವಾದ-ಪ್ರತಿವಾದವಾಗಿಬಿಟ್ಟರೆ, ಕೆಲವೇ ದಿನಗಳಲ್ಲಿ ಜೀವನವೇ 'ಸಾಕಪ್ಪಾ ಸಾಕು...' ಎನ್ನುವಂತಾಗುತ್ತದೆ.
ಜಗಳ ಸಾಕು, ಒಂದಿಷ್ಟು ನೆಮ್ಮದಿ ಬೇಕು ಅನಿಸುತ್ತಿದೆಯೇ? ಹಾಗಿದ್ದರೆ ಇವನ್ನು ಅನುಸರಿಸಲು ಸಾಧ್ಯವಾಗುತ್ತಾ ನೋಡಿ-
-    ಸಣ್ಣಪುಟ್ಟ ವಿಷಯಗಳಿಗೂ ಮಾತು ಬೆಳೆಸುತ್ತಾ ಹೋಗಬೇಡಿ. ಯಾರಾದರೊಬ್ಬರು ಮೌನವಹಿಸಿ. ನೆನಪಿಡಿ, ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಲಾಗುವುದಿಲ್ಲ.
-    ಸಣ್ಣಪುಟ್ಟ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸದಿರಿ. ಅದನ್ನಲ್ಲಿಗೇ ಬಿಟ್ಟುಬಿಡಿ. ಪತ್ನಿ ತನಗೆ ಹೇಳದೇ ಸ್ನೇಹಿತೆಯೊಂದಿಗೆ ಶಾಪಿಂಗ್ ಹೋದಳೆಂದೋ, ಪತಿ ತನಗೆ ಹೇಳದೆ ಸ್ನೇಹಿತನೊಂದಿಗೆ ಸಿನಿಮಾಕ್ಕೆ ಹೋದನೆಂದೋ ಕೋಪಿಸದಿರಿ. ಹೀಗೆ ಮಾಡಿದರೆ ಮನಸ್ಸಿಗೆ ನೋವಾಗುತ್ತದೆಂದು ಹೇಳಿ. ಕಡ್ಡಿಯನ್ನು ಗುಡ್ಡ ಮಾಡದಿರಿ. ಮಕ್ಕಳೆದುರು ಜಗಳವಾಡದಿರಿ.
-    ಎಷ್ಟೇ ಅಸಹನೆಯಿದ್ದರೂ ನೆಂಟರಿಷ್ಟರೆದುರು ಕೆಟ್ಟದಾಗಿ ಮಾತನಾಡುವುದು ತರವಲ್ಲ. ನಿಮ್ಮಿಬ್ಬರ ಕೆಸರೆರಚಾಟದಲ್ಲಿ ಹಾನಿಯಾಗುವುದು ನಿಮಗಿಬ್ಬರಿಗೇ.
-    ಪರಸ್ಪರರ ಅಭಿಪ್ರಾಯಕ್ಕೆ ಗೌರವ ಕೊಡಿ. ಒಬ್ಬರನ್ನೊಬ್ಬರು ಚುಚ್ಚಿ, ಕುಹಕವಾಡದಿರಿ. ಪರಸ್ಪರರ ಬಂಧುಗಳನ್ನು ಹೀಯಾಳಿಸಿ ಮಾತನಾಡಬೇಡಿ. ಅದು ಅಸಮಾಧಾನ ಹೊಗೆಯಾಡಲು ಕಾರಣವಾಗುತ್ತದೆ.
-    ಪರಸ್ಪರರ ಭಾವನೆಗಳನ್ನು ಗೌರವಿಸಿ. ಸಂಗಾತಿಯ ಇಷ್ಟದ ವಿಚಾರಗಳು, ಹವ್ಯಾಸಗಳ ಕುರಿತು ಕೊಂಕು ನುಡಿಯಬೇಡಿ.
-    ಕೆಲಸದ ಒತ್ತಡದಿಂದಲೋ, ಕೋಪದಿಂದಲೋ ಆಡಿದ ನೋವನ್ನುಂಟು ಮಾಡುವ ಮಾತಿಗೆ ಕ್ಷಮೆ ಕೇಳಿ.
-    ಮನೆಕೆಲಸವನ್ನು ಇಬ್ಬರೂ ಹಂಚಿಕೊಳ್ಳಿ ಅಥವಾ ಸಹಾಯ ಮಾಡಿ.
ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಬೆಳೆದ ವಾತಾವರಣ, ರುಚಿ ಅಭಿರುಚಿಗಳು ಬೇರೆ ಬೇರೆಯಾಗಿರುತ್ತವೆ. ಅರ್ಥ ಮಾಡಿಕೊಂಡು, ಹೊಂದಿಕೊಂಡು ಜೀವನ ಸಾಗಿಸಿದರೆ ಜಗಳಕ್ಕೆ ಆಸ್ಪದವಿರುವುದಿಲ್ಲ.

-ರಾಜೇಶ್ವರಿ ಜಯಕೃಷ್ಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!