ಮಹಿಳೆ-ಮನೆ-ಬದುಕು

ಸಂಸಾರಾಂಶ!

ಜೀವನದಲ್ಲಿ ವಿವಾಹ ಮಹತ್ವದ ಘಟ್ಟ. ಹಿರಿಯರು ನಿಶ್ಚಿಯಿಸಿದ ವಿವಾಹವಾಗಿರಲಿ, ಪ್ರೇಮ ವಿವಾಹವಾಗಿರಲಿ, ಕೊನೆಯವರೆಗೆ ...

ಜೀವನದಲ್ಲಿ ವಿವಾಹ ಮಹತ್ವದ ಘಟ್ಟ. ಹಿರಿಯರು ನಿಶ್ಚಿಯಿಸಿದ ವಿವಾಹವಾಗಿರಲಿ, ಪ್ರೇಮ ವಿವಾಹವಾಗಿರಲಿ, ಕೊನೆಯವರೆಗೆ ಉಳಿಸಿಕೊಂಡು ಹೋಗಬೇಕಿರುವ ಜವಾಬ್ದಾರಿ ದಂಪತಿ ಮೇಲಿದೆ. ಆದರೆ, ಈಗಿನ ಒತ್ತಡದ ಜೀವನಶೈಲಿ, ಪರಸ್ಪರ ಅವಿಶ್ವಾಸ, ಸಂಶಯದಿಂದ ಬಹುತೇಕರ ದಾಂಪತ್ಯ ವಿಚ್ಛೇದನಕ್ಕೊಳಗಾಗುತ್ತಿದೆ. ಇಬ್ಬರೂ ಒಂದಿಷ್ಟು ಮುನ್ನಚ್ಚರಿಕೆ ವಹಿಸಿದಲ್ಲಿ ಕೊನೆಯವರೆಗೂ ನೆಮ್ಮದಿಯಿಂದ ಬಾಳಬಹುದು. ಅದಕ್ಕೆ ಇಲ್ಲಿವೆ ಒಂದಿಷ್ಟು ಟಿಪ್ಸ್...
-ಪತಿ-ಪತ್ನಿಯರಿಬ್ಬರೂ ನಿತ್ಯ ಕನಿಷ್ಠ ಒಂದು ಸಲವಾದರೂ ಐ ಲವ್ ಯೂ ಹೇಳಿಕೊಳ್ಳಿ.
-ಮನೆಗೆಲಸವನ್ನು ಒಬ್ಬರ ಮೇಲೆಯೇ ಹೊರಿಸದೇ ಇಬ್ಬರೂ ಹಂಚಿಕೊಳ್ಳಿ. ಪರಸ್ಪರ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಬೇಡಿ.
-ವಾರದಲ್ಲಿ ಒಂದು ದಿನವಾದರೂ ಶಾಪಿಂಗ್ ಅಥವಾ ಸುತ್ತಾಡಲು ಹೋಗಿ. ಸ್ನೇಹಿತರಂತೆ ವರ್ತಿಸಿ. ಸುಳ್ಳು ಹೇಳಬೇಡಿ. ಸುಳ್ಳು ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತದೆ.
-ಸಣ್ಣಪುಟ್ಟ ಜಗಳವನ್ನು ದೊಡ್ಡದಾಗಿಸಬೇಡಿ. ಈ ಜಗಳದಲ್ಲಿ ಮೂರನೆಯವರು ಮಧ್ಯ ಪ್ರವೇಶಿಸದಂತೆ ಎಚ್ಚರ ವಹಿಸಿ. ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಅಹಂ ಬಿಟ್ಟುಬಿಡಿ. ನಿಮ್ಮ ನಿಮ್ಮಲ್ಲಿ ನಡೆದ ವಾದದಲ್ಲಿ ನೀವು ಗೆದ್ದಿದ್ದರೂ ನಿಜವಾಗಿ ಸೋಲನುಭಿಸಿರುತ್ತೀರಿ.
-ಆರೋಗ್ಯಕರ ಜೀವನ ನಡೆಸಿ. ಸಹಾಯ ಮಾಡಿದಾಗ ಪರಸ್ಪರ ಧನ್ಯವಾದ ಹೇಳಿಕೊಳ್ಳಿ. ತಪ್ಪು ಮಾಡಿದಾಗ ಕ್ಷಮೆ ಕೇಳಿ.
-ಕೆಲಸದೊತ್ತಡದ ಮಧ್ಯ ಒಂದಿಷ್ಟು ಸಮಯ ಪರಸ್ಪರ ಕೂಡಿ ಕಳೆಯಿರಿ. ಭವಿಷ್ಯದ ದಿನಗಳ ಬಗ್ಗೆ ಇಬ್ಬರೂ ಸೇರಿ ಚರ್ಚಿಸಿ, ಒಂದಿಷ್ಟು ಯೋಜನೆ ರೂಪಿಸಿ.
-ದೌರ್ಬಲ್ಯವನ್ನು ಎತ್ತಿ ತೋರಿಸಬೇಡಿ. ಬದಲಾಗಿ ಆಕೆಯ/ ಆತನ ಸಾಮರ್ಥ್ಯದ ಬಗ್ಗೆ ಮಾತನಾಡಿ. ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಎದುರು ಸಂಗಾತಿಯನ್ನು ಹೀಗಳೆಯಬೇಡಿ.
-ಪರಸ್ಪರರ ಗುರಿ ಮತ್ತು ಕನಸುಗಳಿಗೆ ಪ್ರೋತ್ಸಾಹಿಸಿ. ನಿಮ್ಮ ದಾಂಪತ್ಯವನ್ನು ಮತ್ತೊಬ್ಬರ ದಾಂಪತ್ಯಕ್ಕೆ ಹೋಲಿಸಿಕೊಳ್ಳಬೇಡಿ.
-ಸಂಗಾತಿ ಬದಲಿಸುವ ಬದಲು ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ. ಸಂಗಾತಿ ಬಗೆಗೆ ಪ್ರೀತಿ, ವಿಶ್ವಾಸ, ಕರುಣೆ ಇರಲಿ.

- ಆನಂದ ಅಂಗಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ