ಮಹಿಳೆ-ಮನೆ-ಬದುಕು

ಗುಮಾನಿಯ ಗುಮ್ಮ!

ಪಿಯುಸಿ ಓದುತ್ತಿರುವ ದೀಪಾಲಿ ಕಾಲೇಜಿನಲ್ಲಿ ಯಾವಾಗಲೂ ಮಂಕಾಗಿರುತ್ತಿದ್ದಳು. ಆಕೆ ಪಾರ್ಟಿ, ಕ್ಯಾಂಟಿನ್ ಅಂತ ಎತ್ತಲೂ ಮುಖಮಾಡಿದವಳೇ ಅಲ್ಲ. ಆಕೆಯ ನಗುವಿನಲ್ಲಿ ಸಹಜತೆ ಇರಲಿಲ್ಲ. ಫ್ರೆಂಡ್ಸ್ ಜತೆ ತಿರುಗಾಡುವುದೆಂದರೆ ಆಕೆಗೆ ಅಲರ್ಜಿ. ಹುಡುಗ- ಹುಡುಗಿಯರು ಕ್ಯಾಂಪಸ್‌ನಲ್ಲೋ, ಪಾರ್ಕ್‌ನಲ್ಲೊ ಹರಟೆ ಹೊಡೆಯುತ್ತಿದ್ದರೆ ಆಕೆ ಮಾರುದೂರ ಕೂತಿರುತ್ತಿದ್ದಳು.
ಇದಕ್ಕೆ ಕಾರಣ ಅವಳ ಕ್ಲಾಸ್‌ನಲ್ಲಿ ಪಕ್ಕದ ಮನೆಯ ಹುಡುಗನೂ ಇದ್ದ. ಆತ ತನ್ನ ನಡವಳಿಕೆಗಳ ಬಗ್ಗೆ ಮನೆಯವರಿಗೆಲ್ಲಿ ವರದಿ ಒಪ್ಪಿಸುತ್ತಾನೋ ಅನ್ನೋ ಭಯ. ಅದೂ ಅಲ್ಲದೆ ಆಕೆಯ ಪ್ರತಿ ಚಟುವಟಿಕೆಗಳಿಗೂ ಲಕ್ಷ್ಮಣರೇಖೆ ಎಳೆದಿದ್ದಳು ಅವಳ ಅಮ್ಮ. ಮನೆಯಾಚೆ ಓಡಾಡಿದರೂ 'ಮನೆ ಒಳಗೆ ಬಾ' ಎಂಬ ಆಜ್ಞೆ. ಮೊಬೈಲ್ ಪ್ರಪಂಚದ ಈ ದಿನಗಳಲ್ಲಿ ಈಕೆಗೆ ಮೊಬೈಲ್ ಕೊಡಿಸಿರಲಿಲ್ಲ. ಒಮ್ಮೆ ದೂರದ ಪ್ರಯಾಣದ ನಿಮಿತ್ತ ಅಪ್ಪನ ಮೊಬೈಲ್ ತೆಗೆದುಕೊಂಡು ಹೋಗಿದ್ದಳು. ಮನೆಗೆ ಬಂದಿದ್ದೇ ತಡ ಮೊಬೈಲನ್ನು ಅಮ್ಮ ಚೆಕ್ ಮಾಡಿದ ರೀತಿ ಆಕೆಗೆ ನಗು ತರಿಸಿತ್ತು.
ಮೊದಮೊದಲು ಮನೆಯವರ ಮಿತಿಮೀರಿದ ಕಾಳಜಿ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ಆದರೆ ಈಗೀಗ ಎಲ್ಲವೂ ಮಿತಿಮೀರಿಹೋಗಿತ್ತು. ತನ್ನ ಪ್ರತಿಯೊಂದು ತಿರುಗಾಟಕ್ಕೂ, ಚಟುವಟಿಕೆಗೂ ಅಮ್ಮನ ಕಡಿವಾಣ. ಸಭೆ-ಸಮಾರಂಭಗಳಿಗೆ ಮನೆಯವರ ಹೊರತು ಇನ್ನ್ಯಾರ ಜತೆಗೂ ಹೋಗುವ ಹಾಗಿರಲಿಲ್ಲ. ಒಮ್ಮೆ ಅಪರೂಪಕ್ಕೆ ಭೇಟಿಯಾದ ಹೈಸ್ಕೂಲ್ ಗೆಳೆಯನ ಕ್ಷೇಮ ವಿಚಾರಿಸಿದ್ದಕ್ಕೆ, ಮನೆಯಲ್ಲಿ ರಾದ್ಧಾಂತವೇ ನಡೆದುಹೋಯಿತು. ಇದು ದೀಪಾಲಿಯೊಬ್ಬಳ ಸಮಸ್ಯೆಯಲ್ಲ. ಅನೇಕ ಹದಿಹರೆಯದ ಹೆಣ್ಣುಮಕ್ಕಳು ಈ ತೆರನಾದ ಅನುಮಾನದ ಪೀಡೆಗೆ ಬಲಿಯಾಗುತ್ತಲೇ ಇರುತ್ತಾರೆ.
ನಂಬಿಕೆ, ವಿಶ್ವಾಸವಿಡಿ...
ಮಗಳು ಪ್ರೌಢಾವಸ್ಥೆಗೆ ಕಾಲಿಟ್ಟಳೆಂದರೆ ವಿಶೇಷ ಕಾಳಜಿಯಿಂದ ಆಕೆಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ತಂದೆತಾಯಿಗಳದು ಎಂಬುದನ್ನು ಅಲ್ಲಗಳೆಯಲಾಗದು. ಅಮ್ಮನಂತೂ ಪ್ರತಿಹಂತದಲ್ಲೂ ಆಕೆಗೆ ಹೆಣ್ತತನದ ಬದುಕಿನ ಸೂಕ್ಷ್ಮತೆಗಳನ್ನು ಹೇಳಿಕೊಡುವ ಗುರುವಾಗಿರುತ್ತಾಳೆ. ಆದರೆ ಕಾಳಜಿ, ರಕ್ಷಣೆ, ಜವಾಬ್ದಾರಿ ನೆಪದಲ್ಲಿ ಆಕೆಯನ್ನು ಅನುಮಾನಿಸೋದು ಸಲ್ಲದು. ಅತಿಯಾಗಿ ವಿಚಾರಣೆ ಮಾಡೋದು, ಆಕೆ ಫೋನ್‌ನಲ್ಲಿ ಸಂಭಾಷಿಸುತ್ತಿದ್ದರೆ ಅನುಮಾನಿಸೋದು, ಮನೆಗೆ ಬರುವುದು ಸ್ವಲ್ಪ ತಡವಾದರೂ ತರಾಟೆಗೆ ತೆಗೆದುಕೊಳ್ಳೋದು, ಗಂಡು ಹೆಣ್ಣು ಅಂತರ ಕಾಯ್ದುಕೊಳ್ಳುವಂತೆ ಪದೇಪದೆ ಹೇಳುವುದು. ಗಾಸಿಪ್‌ಗಳಿಗೆ ಕಿವಿಗೊಟ್ಟು ಆಕೆಯನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವುದು ಸರಿಯಲ್ಲ. ಅವಳು ನಿಮ್ಮ ಮಗಳು. ಅನುಮಾನದ ಬದಲು ಆಕೆಯ ಮೇಲೆ ನಂಬಿಕೆ, ವಿಶ್ವಾಸ ಇಡಿ. ಜತೆಗೆ ಪ್ರೀತಿ ಕೊಡಿ.

= ನಮಿತಾ ಚಾರ್ಮಾತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ