ಮಹಿಳೆ-ಮನೆ-ಬದುಕು

ಒಳಗಿದೆ ಅಗ್ನಿಕುಂಡ!

ಕಾಲೇಜು ಓದಿನ ಜತೆಗೆ ಗೆಳೆತನದ ಬೇರನ್ನೂ ಗಟ್ಟಿಯಾಗಿಸುವ ತಾಣ. ಅಲ್ಲಿ ಭಿನ್ನ ವ್ಯಕ್ತಿತ್ವದ ಮುಖಗಳಿವೆ. ಈ ವ್ಯಕ್ತಿತ್ವಗಳಲ್ಲಿ ಕೆಲವು...

ಕಾಲೇಜು ಓದಿನ ಜತೆಗೆ ಗೆಳೆತನದ ಬೇರನ್ನೂ ಗಟ್ಟಿಯಾಗಿಸುವ ತಾಣ. ಅಲ್ಲಿ ಭಿನ್ನ ವ್ಯಕ್ತಿತ್ವದ ಮುಖಗಳಿವೆ. ಈ ವ್ಯಕ್ತಿತ್ವಗಳಲ್ಲಿ ಕೆಲವು ಸಮಸ್ಯೆಗಳನ್ನು ಹುಟ್ಟುಹಾಕಲು ಕಾರಣವಾಗಬಹುದು. ಇನ್ನು ಕೆಲವು ಎದುರಾಗಬಲ್ಲ ಅನೇಕ ಸವಾಲುಗಳನ್ನು ಹಿಮ್ಮೆಟ್ಟಿಸಿ ಶಾಂತವಾಗಿ ಮುಂದುವರಿಯಬಲ್ಲವು. ಭಿನ್ನತೆಯೆಂಬುದು ವೈವಿಧ್ಯಕ್ಕೆ ಇನ್ನೊಂದು ಹೆಸರು ತಾನೇ. ಎಲ್ಲರೂ ಒಂದೇ ತೆರನಾಗಿ ಇರಬೇಕಾಗಿಲ್ಲ. ಸಮವಸ್ತ್ರ ಧರಿಸಿದ ತಕ್ಷಣ ಮನಸ್ಸು ಒಂದೇ ದಿಕ್ಕಿನೆಡೆಗೇನೂ ಓಡುವುದಿಲ್ಲವಲ್ಲ.
ನಮ್ಮಲ್ಲಿ ಕೆಲವರಿಗೆ ಎಲ್ಲವನ್ನೂ ತಾನೇ ಮಾಡಬೇಕು, ಎಲ್ಲ ಪ್ರಶಂಸೆ ತನಗೇ ಸಿಗಬೇಕೆಂಬ ಆಶೆ. ಕೆಲಸ ಮಾಡಿ ಕ್ರೆಡಿಟ್ಟು ಪಡೆಯುವವರು ಕೆಲವರಾದರೆ, ಇನ್ನೊಬ್ಬರ ಕೆಲಸವನ್ನು ತಾನು ಮಾಡಿದ್ದಾಗಿ ಮೆಚ್ಚುಗೆ ಗಳಿಸುವವರು ಮತ್ತೊಂದಿಷ್ಟು ಜನ. ಅವರಿಗೆ ಆ ಕುರಿತು ಯಾವ ಮುಜುಗರವೂ ಇರುವುದಿಲ್ಲ. ಬದಲಾಗಿ ಆ ರೀತಿ ಇರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಇರುತ್ತಾರೆ.
ಇನ್ನೂ ಒಂದು ವರ್ಗದ ಮಂದಿಗೆ ತಾನಿಲ್ಲದೇ ಯಾವ ಕಾರ್ಯವೂ ನಡೆಯಬಾರದು ಎನ್ನುವ ಮನೋಭಾವ. ಕೇವಲ ತಮ್ಮ ಏಳಿಗೆಯನ್ನು ಮಾತ್ರ ಬಯಸುತ್ತಾರೆ. ಇನ್ನೂ ಕೆಲವು ವ್ಯಕ್ತಿತ್ವದವರು ತಮ್ಮ ಪಾಡಿಗೆ ತಾವಿದ್ದು ಯಾರಿಗೂ ತೊಂದರೆಯಾಗದಂತೆ ತಮ್ಮ ಏಳಿಗೆಗೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಇನ್ನುಳಿದವರೆಂದರೆ ತಾವೂ ಶ್ರಮಿಸುತ್ತಾರೆ, ಉಳಿದವರನ್ನೂ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಎಲ್ಲರೂ ಚೆನ್ನಾಗಿರಬೇಕೆಂಬುದು ಇವರ ಆಶಯ. ಬಹುಶಃ ಇದು ಎಲ್ಲ ವರ್ಗದವರಲ್ಲೂ, ಎಲ್ಲ ಸ್ತರಗಳಲ್ಲೂ ಸಾಮಾನ್ಯ ಎನಿಸುತ್ತದೆ. ಕಾಲೇಜು ಇಂಥ ಹಲವು ಮುಖಗಳಿಗೆ ಸಾಕ್ಷಿಯಾಗುತ್ತದೆ.
ಸುಮನಾ ಮತ್ತು ಜ್ಯೋತಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರು. ಸುಮನಾಗೆ ಮಾತೇ ವರದಾನ. ಜ್ಯೋತಿ ಕೂಡ ಕಡಿಮೆಯಲ್ಲ, ಮಾತನಾಡುವ ಶೈಲಿ ಅಷ್ಟಾಗಿ ಇಲ್ಲದಿದ್ದರೂ ಬರವಣಿಗೆಯಲ್ಲಿ ಹಾಗೂ ಓದುವುದರಲ್ಲಿ ಮುಂದಿದ್ದಳು. ಇವರಿಬ್ಬರೂ ಆತ್ಮೀಯ ಗೆಳತಿಯರಂತಿದ್ದರು. ಆದರೆ ಸುಮನಾಳಿಗೆ ಒಂದು ಕೆಟ್ಟ ಬುದ್ಧಿ, ಎಲ್ಲರ ಮುಂದೆಯೂ ನಾನೇ, ಎಲ್ಲವೂ ನನ್ನಿಂದಲೇ ಎಂದು ತೋರಿಸಿಕೊಳ್ಳುವ ಚಟ. ಜತೆಗೆ ಅಸೂಯೆ. ಇವಳ ಈ ವರ್ತನೆಯಿಂದ ಇಡೀ ತರಗತಿಯ ಪರಿಸರವೇ ಹಾಳಾಗಿತ್ತು. ಇವಳ ಈ ಸ್ವಭಾವ ಮಿತಿಮೀರಿದಾಗ ಅದು ಶಿಕ್ಷಕರಿಗೂ ಬೇಸರ ತರಿಸಿದೆ. ಕೊನೆಗೆ ಈಕೆಯ ವರ್ತನೆಯಿಂದ ಪ್ರಯೋಜನವಾದದ್ದು ತರಗತಿಯ ಬೇರೆ ವಿದ್ಯಾರ್ಥಿಗಳಿಗೆ.
ಇನ್ನು ಸ್ವಾರ್ಥ. ಇದರಿಂದ ಹೊರತಾದ ಯಾವ ಸಂಬಂಧಗಳೂ ಇಲ್ಲವೆಂದೇ ಹೇಳಬಹುದು. ತಂದೆ ತಾಯಿಯಿಂದ ಹಿಡಿದು ಇತ್ತೀಚೆಗೆ ಚಿಕ್ಕ ಮಕ್ಕಳಲ್ಲೂ ಈ ಸ್ವಭಾವ ಇದ್ದದ್ದೇ. ಪಕ್ಕದ ಮನೆ ಹುಡುಗ ಅಥವಾ ಹುಡುಗಿ ನಿಜವಾದ ಸಾಧನೆ ಮಾಡಿದ್ದರೂ ತನ್ನ ಮಗ/ ಮಗಳಿಗಿಂತ ಹೆಚ್ಚೇನಿಲ್ಲ ಎಂಬ ತಂದೆ ತಾಯಿ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದಲ್ಲಿ ಕಂಡುಬರುವುದು ಅವಳು ನನಗಿಂತಲೂ ಚೆನ್ನಾಗಿದ್ದಾಳೆ, ಚೆನ್ನಾಗಿ ಓದುತ್ತಾಳೆ, ಶಿಕ್ಷಕರೆಲ್ಲಾ ಆಕೆಯನ್ನು ಹಾಡಿಹೊಗಳುತ್ತಾರೆ, ಹೇಗಾದರೂ ಮಾಡಿ ಆಕೆಯನ್ನು ಹಿಂದಿಕ್ಕಲೇಬೇಕೆನ್ನುವ ಸ್ವಾರ್ಥ. ಇನ್ನು ಚಿಕ್ಕ ಮಕ್ಕಳು ಈ ವಿಷಯದಲ್ಲಿ ಕಡಿಮೆಯೇನಲ್ಲ. ತನ್ನಲ್ಲಿರದ ಹೊಸ ಬಗೆಯ ಆಟಿಕೆಗಳು ಕಂಡಾಗ ಅದು ತನ್ನದಾಗುವವರೆಗೂ ಬಿಡುವ ಆಸಾಮಿಗಳೇ ಅಲ್ಲ. ಸ್ವಾರ್ಥ ಅಸೂಯೆಗಳೆರಡೂ ವ್ಯಕ್ತಿಗತವಾದ ಅಂಶಗಳಾದರೂ ವಿದ್ಯಾರ್ಥಿ ದೆಸೆಯಲ್ಲಿ ನಾವು ಇವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಬೇಕೇ ಹೊರತು, ಇತರರಿಗೆ ತೊಂದರೆಯನ್ನುಂಟು ಮಾಡಲು ಬಳಸಬಾರದು. ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ಎಂಬುದೆಲ್ಲಾ ಬಾಲ್ಯದಲ್ಲಿ ತಮಾಷೆ ಹೊರತು ಬೆಳೆದು ದೊಡ್ಡವರಾದ ಮೇಲೆ ಅಲ್ಲ.

- ದೀಪ್ತಿ ಜೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ