ಮನೆ ಕಟ್ಟುವಾಗಲೇ ಗುಣಮಟ್ಟದ ವಸ್ತುಗಳನ್ನು ಬಳಸಿ. ವಿಶೇಷವಾಗಿ ಮನೆಯ ಚಾವಣಿ ಹಂಚಿನಿಂದ ನಿರ್ಮಿಸುವುದಾದರೆ ಮೊದಲೇ ಉತ್ಕೃಷ್ಟ ಮಟ್ಟದ ಹೆಂಚುಗಳನ್ನು ಬಳಸಿ. ಎಲ್ಲಿಯೂ ಸೋರದಂತೆ ಎಚ್ಚರವಹಿಸಿ. ಇದರಿಂದ ಮಳೆಗಾಲದಲ್ಲಿ ಪದೇ ಪದೇ ರಿಪೇರಿ ಮಾಡುವ ತಲೆಬಿಸಿಯನ್ನು ತಡೆಗಟ್ಟಬಹುದು.
ಕಿಟಕಿಯಿಂದ ರಾತ್ರಿ ವೇಳೆ ಹೆಚ್ಚು ಸೊಳ್ಳೆ, ಹುಳುಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಚರಂಡಿಯ ವಾಸನೆ (ನೆಲಮನೆಯಿದ್ದರೆ) ಬರುವುದು ಸಾಮಾನ್ಯ. ಹೀಗಾಗಿ ಕಿಟಕಿಯಲ್ಲಿ ಕಿಂಡಿಯಾಗದಂತೆ ಎಚ್ಚರವಹಿಸಿ. ಜೊತೆಗೆ ಅದರ ಕಪಾಟುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಇರಲಿ.