ಮಹಿಳೆ-ಮನೆ-ಬದುಕು

ಕೀರ್ತನೆ ಅಚ್ಚರಿ

ಇವರ ಸಂಸಾರ ಸಂಗೀತದ ರಸಸಾಗರ. ಅಮ್ಮ ವತ್ಸಲಾ ಭಟ್ ಮೊದಲ ನುಡಿಯಾಡಿದ್ದೇ ಸಂಗೀತವನ್ನು...

ಇವರ ಸಂಸಾರ ಸಂಗೀತದ ರಸಸಾಗರ. ಅಮ್ಮ ವತ್ಸಲಾ ಭಟ್ ಮೊದಲ ನುಡಿಯಾಡಿದ್ದೇ ಸಂಗೀತವನ್ನು. ಹೆಣ್ಣುಮಕ್ಕಳಾದ ಕೀರ್ತನಾ ಮತ್ತು ಅರ್ಚನಾ ಕೂಡ ನಾಡಿನಾದ್ಯಂತ ಸಂಗೀತದ ಸೌರಭ ಪಸರಿಸಿದ ಪ್ರತಿಭೆಗಳು. ಅವರ ಮನೆಯಲ್ಲಿ ಮದುವೆ, ಪೂಜೆ ಯಾವುದೇ ಸಮಾರಂಭ ನಡೆಯಲಿ ಬಂದ ಅತಿಥಿಗಳ ಕಿವಿಗೆ ತಂಪನ್ನೆರೆಯುವ ಸಂಗೀತದ ತಂಪೂಡಲು ಈ ಅಮ್ಮ ಮಕ್ಕಳು ತಪ್ಪುವುದಿಲ್ಲ.
ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿರುವ ವತ್ಸಾಲಾ ಭಟ್ ಹುಟ್ಟಿದ ಮನೆಯೇ ಗೀತ ಗಾಯನದ ಆಡುಂಬೋಲ. ಅವರ ತಂದೆ ಪೆರ್ಲದ ಗಣಪತಿ ಪುಣಿಂಚಿತ್ತಾಯರು ಯಕ್ಷಗಾನದ ಖ್ಯಾತ ಅರ್ಥಧಾರಿ. ಅಜ್ಜ ಸಿರಿಕಂಠದ ಭಾಗವತ. ತಾಯಿಯ ತಂದೆಯೂ ಅದೇ ಸಾಲಿನವರು. ಹೀಗಾಗಿ ನಾನಾಡಿದ ಮೊದಲ ಮಾತೇ ಸಂಗೀತದ ಪಲುಕಾಗಿತ್ತು ಎನ್ನುತ್ತಾರೆ ವತ್ಸಲಾ. ಕಸೂತಿ ಅವರ ಪ್ರಿಯವಾದ ಹವ್ಯಾಸವಾದಂತೆ ಸಂಗೀತದಲ್ಲೂ ಅಪರಿಮಿತ ಆಸಕ್ತಿಯಿತ್ತು. ಪಡ್ರೆಯ ಪದ್ಮನಾಭ ಆಚಾರ್ ಮನೆಗೇ ಬಂದು ಪಾಠ ಹೇಳಿದರು. ನರಸಿಂಹ ಹೇರ್ಳೆ ಅವರು, ಪದ್ಮನಾಭ ಸರಳಾಯರೂ ತಮ್ಮ ಪ್ರತಿಭೆಯನ್ನು ಧಾರೆಯೆರೆದು ಶಿಕ್ಷಣ ನೀಡಿದರು.
ಹೀಗೆ ಶಾಸ್ತ್ರೀಯ ಸಂಗೀತವನ್ನೊಲಿಸಿಕೊಂಡ ವತ್ಸಲಾ ಕುಂಬಳೆಯ ಗೋಪಾಲಕೃಷ್ಣ ದೇಗುಲದಲ್ಲಿ ಮೊದಲ ಕಚೇರಿ ನೀಡಿದರು. ಕಲಾಭಿಮಾನಿಗಳಾದ ಕೇರಳದ ಜನ ಮದುವೆಗಳಲ್ಲಿ ಅವರ ಕಾರ್ಯಕ್ರಮ ಏರ್ಪಡಿಸಿ ಪ್ರೋತ್ಸಾಹಿಸಿದರು. ಅವರ ಗಾಯನದ ಕಂಪು ಬೆಂಗಳೂರಿನ ತನಕ ಹರಡಿತು. ಬೆಳ್ತಂಗಡಿಯ ರಾಮಚಂದ್ರ ಭಟ್ಟರನ್ನು ವಿವಾಹವಾದ ಬಳಿಕ ಪತಿಯಿಂದ ಪ್ರತಿಭೆಗೆ ನಿರಂತರ ಪ್ರೋತ್ಸಾಹ ಲಭಿಸಿತು.
ಕೀರ್ತನಾ ಮತ್ತು ಅರ್ಚನಾಗೆ ಸಂಗೀತದ ಗುರು ಜನನಿಯೇ. 5ನೇ ವಯಸ್ಸಿನಲ್ಲೇ ಮೊದಲ ಕಛೇರಿ ನಡೆಸಿದವರು ಇವರು. ಜತೆಗೂಡಿ ಹಾಡಿದ ಧ್ವನಿಮುದ್ರಿಕೆಗಳು ಹಲವು. ಶ್ರೀ ಕಾರ್ತಿಕೇಯ, ಶ್ರೀ ಶಬರೀಶ, ಮಧೂರ ಮಲ್ಲ ಶ್ರೀಗಣನಾಥ, ಪ್ರಣವ ಸ್ವರೂಪ, ಕೀರ್ತನಾರ್ಚನೆ, ಸ್ತುತಿ, ಜನನಿ- ಜನನಿ, ದೃಷ್ಟಿ ನಿನ್ನ ಪಾದದಲ್ಲಿ ಹಾಗೂ ತುಳುವಿನಲ್ಲಿ ಕನಕಾಲಂಕೃತೆ ಕಲ್ಲುಟರ್ ಎಂಬ 9 ಭಕ್ತಿಗೀತೆಗಳ ಧ್ವನಿ ಸುರುಳಿಗಳು ಈ ಸಹೋದರಿಯರ ಸಿರಿಕಂಠದಲ್ಲಿ ಅರಳಿ ಮಾರುಕಟ್ಟೆಗೆ ಬಂದಿವೆ. ಸೀನಿಯರ್ ಪರೀಕ್ಷೆಯನ್ನೂ ಗೆದ್ದಿರುವ ಅವರಿಬ್ಬರೂ ಜತೆಗೂಡಿ ಕಾಸರಗೋಡಿನ ವಿವಿಧೆಡೆಗಳಲ್ಲಿ, ಬೆಂಗಳೂರಿನ ದಸರಾ ಮಹೋತ್ಸವವೂ ಸೇರಿ ಕರ್ನಾಟಕದಾದ್ಯಂತ ಕಛೇರಿಗಳನ್ನು ನೀಡಿದ್ದಾರೆ. ಪ್ರಶಸ್ತಿಗಳು, ಗೌರವಗಳು ಈ ಸಂಸಾರವನ್ನು ಅರಸಿ ಬಂದಿವೆ. ಅಕ್ಕ ತಂಗಿ ಊರಿಗೆ ಬಂದಾಗ ಮನೆಯಲ್ಲಿ ಪೂಜೆ ಪುನಸ್ಕಾರದ ನೆವದಲ್ಲಿ ಹತ್ತು ಮಂದಿಯನ್ನು ಊಟಕ್ಕೆ ಕರೆಯುತ್ತಾರೆ. ಮೂವರೂ ಒಂದಾದರೆ ಮನೆ ತುಂಬ ಗೀತಗಾಯನದ ರಸಗವಳ. (ಮೊ. 94800 55609).
- ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video