ಕೆಲ್ಸದೋಳು ಕೈಯಲ್ಲಿ ಮಗೂನ ಕೊಟ್ರಾ?
ಮಗು ಯಾಕೋ ಮಂಕಾಗಿದೆ, ಹೆದರಿಕೊಂಡಂತಿದೆ ಎನ್ನಿಸಿತು ತಾಯಿಗೆ. ಗಂಡನ ಹತ್ತಿರ ಹೇಳಿದರೆ, ಹೌದು ಪಾಪು ದಿನೇದಿನೇ ಸೊರಗುತ್ತಿದ್ದಾನೆ, ನಿನ್ನನ್ನು ಬಿಟ್ಟಿರುತ್ತಾನಲ್ಲಾ ಅದಕ್ಕಿರಬಹುದು ಎಂದು ಸಮಾಧಾನ ಪಟ್ಟುಕೊಂಡರು. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಅವರ ಗಮನ ಮಗುವನ್ನು ರಾತ್ರಿ ನೋಡಿಕೊಳ್ಳುತ್ತಿದ್ದ ಕೆಲಸದಾಕೆಯ ಕಡೆ ಹೋಯಿತು. ಅವಳಿಗೆ ಗೊತ್ತಿಲ್ಲದಂತೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾಯಿತು. ಮಾರನೇ ದಿನ ಅಲ್ಲಿ ಮೂಡಿದ್ದ ದೃಶ್ಯವನ್ನು ನೋಡಿ ತಂದೆ ತಾಯಿ ಹೌಹಾರಿದಳು. ಅಳುತ್ತಿದ್ದ ಮಗುವನ್ನು ಆ ಕೆಲಸದಾಕೆ ಬಟ್ಟೆ ಒಗೆದಂತೆ ಎತ್ತೀ ಎತ್ತಿ ಹಾಕುತ್ತಿದ್ದಳು. ಮಂಚದ ಮೇಲೆ ಬಿಸಾಡುತ್ತಿದ್ದಳು. ಮಗು ಸುಮ್ಮನಾಗುವ ತನಕ ಇದು ನಡೆದೇ ಇರುತ್ತಿತ್ತು. ಇದು ಪುಣೆಯಲ್ಲಿ ನಡೆದ ಸತ್ಯ ಕಥೆ. ಟಿ.ವಿ. ಪರದೆಯ ಮೇಲೆ ತೋರಿಸುತ್ತಿದ್ದ ದೃಶ್ಯ ಎಂಥವರ ಎದೆಯನ್ನೂ ಝಲ್ಲೆನ್ನಿಸುವಂತಿತ್ತು.
ಸುಂದರ ಸಂಸಾರ, ಇಬ್ಬರೂ ಉದ್ಯೋಗಸ್ಥರು ಒಳ್ಳೆಯ ಸಂಬಳ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಮಗುವೊಂದು ಇವರ ಜೀವನದಲ್ಲಿ ಕಾಲಿಟ್ಟಿತು. ಇಬ್ಬರ ಕೆಲಸವೂ ರಾತ್ರಿ ಹೊತ್ತಿನದು. ಹಿರಿಯರೂ ಹತ್ತಿರವಿಲ್ಲ. ಆದ್ದರಿಂದ ಮಗುವನ್ನು ರಾತ್ರಿ ನೋಡಿಕೊಳ್ಳಲು ಏಜೆನ್ಸಿಯ ಮೂಲಕ ಕೆಲಸದಾಕೆಯನ್ನು ಮನೆಗೆ ಕರೆದುಕೊಂಡು ಬಂದರು. ಒಳ್ಳೆಯ ಸಂಬಳವನ್ನೇ ನೀಡಲಾಗುತ್ತಿತ್ತು. ಆದರೂ ಆಕೆ ಮಗುವನ್ನು ನೋಡಿಕೊಂಡ ರೀತಿ!
ಇಂದು ಗಂಡ ಹೆಂಡತಿಯರಿಬ್ಬರೂ ಉದ್ಯೋಗಿಗಳು. ಮಕ್ಕಳಾಗುವ ತನಕ ಹೇಗೋ ನಡೆದು ಹೋಗಿ ಬಿಡುತ್ತದೆ. ನಂತರದ ಕಥೆ ಏನೆನ್ನುವುದೇ ಜಟಿಲ ಪ್ರಶ್ನೆ. ಹಾಗಾದರೆ ಮಕ್ಕಳ ಪಾಡೇನು?
ಈ ಸಮಸ್ಯೆ ಬರಿಯ ನಮ್ಮ ದೇಶದ್ದಲ್ಲ, ವಿಶ್ವವ್ಯಾಪಿ. ಉದ್ಯೋಗ ಮತ್ತು ಮಕ್ಕಳನ್ನು ಸಾಕುವುದು ನಿಜಕ್ಕೂ ಕಷ್ಟದ ಕೆಲಸ. ಈ ಬಗ್ಗೆ ಇತ್ತೀಚೆಗೆ ಹಾಂಕಾಂಗ್‌ನಲ್ಲಿ ದೊಡ್ಡ ಚರ್ಚೆಯೇ ಆಯಿತು. ತೊಟ್ಟಿಲು ತೂಗುವ ಕೈ ಬೋರ್ಡ್ ರೂಮಿನ ಕೆಲಸಗಳನ್ನು ತೂಗಲಾರಳು. ಒಳ್ಳೆಯ ತಾಯಿಗೆ ಮಕ್ಕಳನ್ನು ನೋಡಿಕೊಳ್ಳುವುದರ ಜತೆಗೆ ಕಚೇರಿಯ ಕೆಲಸವನ್ನು ತೂಗಿಸಲು ಸಮಯವಿರುತ್ತದೆಯೇ? ಪ್ರಖ್ಯಾತ ಕಾದಂಬರಿ ಗ್ಟಿಟಿಜಜ್ಠ ಗ್ಟಿಟಜಟಿ: ಖಜ್ಢ, ಕ್ಟಿಢಿಜ್ಠ, ಛಟಿಜ ಝಿಜ ್ಕ್ಡಜಡಡಿ ಜ್ಟ್ಠಿ ಕಿಜ್ಠಜಿಜ್ಛಡ್ಝ್ಟಿಟಿ ಬರೆದ ಲೇಖಕಿ ಡೆಬೋರಾ ಸ್ಪಾರ್ ಮತ್ತು ಖ್ಯಾತ ಪತ್ರಕರ್ತೆ ಮತ್ತು ಕಾದಂಬರಿಕಾರ್ತಿ ಐ ಉ್ಟಟಿ'ಡಿ ಓಟ್ಟಿಢಿ ಏ್ಟಢಿ ಝಜ ಉ್ಟಜಡ ಐಡಿ.ವಿಷಯದ ಪರವಾಗಿ ವಾದಿಸಿದರೆ ಪ್ರಖ್ಯಾತ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಒಂಬತ್ತು ಮಕ್ಕಳ ತಾಯಿ ಹೆಲೆನಾ ಮಾರಿಸೇ ಮತ್ತು ಚೀನಾದ ಸೋಹೋ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಎರಡು ಮಕ್ಕಳ ತಾಯಿ ಝಾಂಗ್ ಇನ್ ವಿಷಯಕ್ಕೆ ವಿರೋಧವಾಗಿ ಅಂದರೆ ಎರಡೂ ಕೆಲಸಗಳನ್ನು ನಿಭಾಯಿಸಬಹುದೆನ್ನುವ ವಾದ ಮಡಿಸಿದರು. ಒಟ್ಟಿನಲ್ಲಿ ಈ ವಿಷಯ ವಿಶ್ವವ್ಯಾಪಿ ಎನ್ನುವುದು ನಿಚ್ಚಳ. ಉದ್ಯೋಗದ ಮಂಚೂಣಿಯಲ್ಲಿರುವಾಗಲೇ ಮಕ್ಕಳಾಗುವುದು, ಆಗ ಯಾವುದು ಮುಖ್ಯ ಎನ್ನುವ ಪ್ರಶ್ನೆ ಬರುತ್ತದೆ. ಎರಡನ್ನೂ ನಿರ್ವಹಿಸುವುದು ನಿಜಕ್ಕೂ ಸುಲಭವಲ್ಲ. ಇಂಥ ಸಮಯಗಳಲ್ಲಿ ನಮ್ಮ ಹಿಂದಿನ ಅವಿಭಕ್ತ ಕುಟುಂಬಗಳ ನೆನಪಾಗುತ್ತದೆ. ಅಲ್ಲಿ ಇಂಥ ಸಮಸ್ಯೆಗಳಿಗೆ ಸ್ವಲ್ಪಮಟ್ಟಿನ ಪರಿಹಾರ ಸಿಗುತ್ತಿತ್ತು.
ಯಾರಿಗೆ ಯಾರೂ ಬೇಡ, ಯಾರೊಡನೆ ಯಾತಕ್ಕಾಗಿ ಹೊಂದಿಕೊಳ್ಳಬೇಕು ಎನ್ನುತ್ತಿರುವ ಈ ಜಗತ್ತಿಗೆ ಮಗು ಪಾಲನೆ ದೊಡ್ಡ ಸಮಸ್ಯೆ. ಆದ್ದರಿಂದ ಏನೇ ಆಗಲಿ... ಚಿಕ್ಕ ಮಕ್ಕಳನ್ನು ಕೆಲಸದವರ ಮೇಲೆ ಒಪ್ಪಿಸುವ ಮುನ್ನ ಯೋಚಿಸಬೇಕು. ಅವರ ಆರೈಕೆ ಎಷ್ಟಿದ್ದರೂ ಕೃತಕವೇ ಆಗಿರುತ್ತದೆ.
-ಮಂಜುಳಾರಾಜ್