ಸಾಂದರ್ಭಿಕ ಚಿತ್ರ 
ಮಹಿಳೆ-ಮನೆ-ಬದುಕು

25 ರ ನಂತರದ ತಾಯ್ತನ ನಿಮ್ಮನ್ನು 40ನೇ ವಯಸ್ಸಿನವರೆಗೂ ಆರೋಗ್ಯವಾಗಿಡುತ್ತದೆ

ಹೆಣ್ಣಿಗೆ ತಾಯ್ತನ ಒಂದು ವಿಶೇಷ ಅನುಭವ, ತಾಯಿಯಾಗದ ಹೊರತು ಹೆಣ್ಣಿನ ಜೀವನ ಅಪೂರ್ಣ ಎಂಬೆಲ್ಲಾ ಮಾತುಗಳಿವೆ. ಇದೆಲ್ಲದರ ನಡುವೆ ಯಾವ ವಯಸ್ಸಿನಲ್ಲಿ ...

ಹೆಣ್ಣಿಗೆ ತಾಯ್ತನ ಒಂದು ವಿಶೇಷ ಅನುಭವ, ತಾಯಿಯಾಗದ ಹೊರತು ಹೆಣ್ಣಿನ ಜೀವನ ಅಪೂರ್ಣ ಎಂಬೆಲ್ಲಾ ಮಾತುಗಳಿವೆ. ಇದೆಲ್ಲದರ ನಡುವೆ  ಯಾವ ವಯಸ್ಸಿನಲ್ಲಿ ತಾಯಿಯಾದರೇ ಸೂಕ್ತ ಎಂಬುದು ಹಲವರನ್ನು ಕಾಡುವ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಎಂಬಂತೆ ವಾಷಿಂಗ್ಟನ್ ಡಿ.ಸಿಯಲ್ಲಿ ನಡೆಸಿದ ಸಂಶೋಧನೆಯೊಂದು ಯಾವ ವಯಸ್ಸಿನಲ್ಲಿ ತಾಯಿಯಾದರೇ ಸೂಕ್ತ ಎಂಬುದನ್ನು ಬಹಿರಂಗ ಪಡಿಸಿದೆ.

25 ರಿಂದ 35 ರ ವಯಸ್ಸಿನ ಒಳಗೆ ತಾಯಿಯಾದರೇ 40 ವರ್ಷದವರೆಗೂ ಆರೋಗ್ಯವಂತರಾಗಿರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ವಾಷಿಂಗ್ಟನ್ ಡಿ.ಸಿಯ ಓಹಿಯೋ ವಿಶ್ವ ವಿದ್ಯಾನಿಲಯ ನಡೆಸಿದ ಸಂಶೋಧನೆ ಪ್ರಕಾರ, ಮಹಿಳೆ 25-35 ವಯಸ್ಸಿನ ಒಳಗೆ ಮೊದಲ ಬಾರಿಗೆ ತಾಯಿಯಾದರೆ ಆಕೆ 40 ನೇ ವಯಸ್ಸಿನವರೆಗೂ ಯಾವುದೇ ರೀತಿಯ ಸಮಸ್ಯೆಯಿಲ್ಲದೇ ಆರೋಗ್ಯ ವಂತಳಾಗಿರುತ್ತಾಳೆ ಎಂದು ತಿಳಿಸಿದೆ.

20 ನೇ ವಯಸ್ಸು ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನಲ್ಲೇ ತಾಯಿಯಾದವರಿಗೆ ಆರೋಗ್ಯ ಸಮಸ್ಯೆ ಹೆಚ್ಚು ಉಲ್ಬಣಿಸುತ್ತದೆ ಎಂಬುದನ್ನು ಸಂಶೋಧನೆಯ ವರದಿ ತಿಳಿಸಿದೆ. ಇನ್ನೂ ಸಿಂಗಲ್ ಮದರ್ ಆದವರೂ ಕೂಡ , ಹಲವಾರು ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ, ಇದರಿಂದ ಮಹಿಳೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಒಟ್ಟಿನಲ್ಲಿ ಅತಿ ಬೇಗ, ಅಥವಾ ಅತಿ ನಿಧಾನವಾಗಿ ತಾಯಿಯಾಗುವುದು ಎರಡೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತದೆ. ಹೀಗಾಗಿ ಸೂಕ್ತ ವಯಸ್ಸಿನಲ್ಲಿ ಅಂದರೆ 25ರಿಂದ 35 ನೇ ವಯಸ್ಸಿನ ಒಳಗೆ ತಾಯಿಯಾಗುವುದು ಸೂಕ್ತ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್