ಮಹಿಳೆ-ಮನೆ-ಬದುಕು

ಗೇಟ್ ಐಡಿಯಾ!

Vishwanath S

ಮನೆಯ ಅಂದ ಹೆಚ್ಚಿಸಲು ವಿವಿಧ ವಿನ್ಯಾಸದ ಬಣ್ಣ ಬಣ್ಣದ ಹಲವಾರು ಗೇಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹಾಗಾಗಿ ನಿಮ್ಮ ಕನಸಿನ ಮನೆಗೆ ಸೂಕ್ತವೆನಿಸುವ ಗೇಟ್‌ಗಳನ್ನು ಖರೀದಿಸುವ ಮುನ್ನ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ...

* ನಿಮ್ಮ ಮನೆ ಕಟ್ಟಿದ ಏರಿಯಾದಲ್ಲಿ ಕಳ್ಳರು, ಪ್ರಾಣಿಗಳ ಕಾಟ ಹೇಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ. ಜೊತೆಗೆ ನಿಮ್ಮ ವಾಹನದ ಅಗಲ, ಗೇಟ್ ತೆರೆಯಲು ಇರುವ ಸ್ಥಳಾವಕಾಶ ಎಲ್ಲವನ್ನೂ ತಲೆಯಲ್ಲಿಟ್ಟುಕೊಳ್ಳಿ. ಇದು ನಿಮಗೆ ಯಾವ ರೀತಿಯ, ಎಷ್ಟು ದೊಡ್ಡದಾದ, ಗಟ್ಟಿಯಾದ ಗೇಟ್ ಬೇಕಾಗಬಹುದೆಂಬ ಹಿಂಟ್ ಕೊಡುತ್ತದೆ. ಜಾಗ ಕಡಿಮೆ ಇದ್ದರೆ ಸ್ಪೈಡ್ ಮಾಡುವಂಥ ಗೇಟ್ ಉತ್ತಮ. ಗೇಟ್ ತುಂಬಾ ದೊಡ್ಡದಾಗಿದ್ದರೆ ಮನುಷ್ಯರು ಪದೇಪದೆ ಓಡಾಟ ನಡೆಸುವಾಗ ಕಿರಿಕಿರಿ ಎನಿಸಬಹುದು. ಹೀಗಾಗಿ ಪಕ್ಕದಲ್ಲಿ ಚಿಕ್ಕದಾದ ಗೇಟೊಂದು ಮಾಡಿಕೊಳ್ಳುವುದು ಉತ್ತಮ.

* ಗೇಟ್‌ಗಳ ಆಯ್ಕೆ ಮಾಡುವಾಗ ಪರಿಸರದ ಕಾಳಜಿಯೂ ಕರ್ತವ್ಯವಾಗಿರಲಿ . ಇದಕ್ಕಾಗಿಯೇ ಎಕ್ಸ್‌ಪರ್ಟ್‌ಗಳಿಂದ ಕೇಳಿ ಪರಿಸರ ಸ್ನೇಹಿ ಗೇಟ್‌ಗಳನ್ನು ನಿಲ್ಲಿಸಿ. ಇವು ಮನೆಗೆ ರಕ್ಷಣೆ ಒದಗಿಸುವುದು ಮಾತ್ರವಲ್ಲದೆ, ಪರಿಸರಕ್ಕೂ ಪೂರಕವಾಗಿರುತ್ತವೆ. ಕೆಲವು ಮೆಟೀರಿಯಲ್‌ಗಳು ಹೊರಡಿಸುವ ಎಮಿಶನ್‌ಗಳು ಪ್ರಕೃತಿಗೆ ಮಾರಕವೆಂಬುದು ನಿಮಗೆ ತಿಳಿದಿರಲಿ.

* ಮನೆಯ ವಿನ್ಯಾಸಕ್ಕೆ ಹೊಂದುವಂತೆ, ನಿಮ್ಮ ವೈಯಕ್ತಿಕ ಆಸಕ್ತಿ, ಹವ್ಯಾಸಗಳು ಗೇಟ್‌ನಲ್ಲೂ ವ್ಯಕ್ತವಾಗುವಂತಿದ್ದರೆ ಚೆನ್ನ.


- ಲತಾ

SCROLL FOR NEXT