ಭಾರತದಲ್ಲಿ ವಿವಾಹಿತ ಮಹಿಳೆ ಕಾಲುಂಗರ ಧರಿಸುವುದು ಸರ್ವೇ ಸಾಮಾನ್ಯ. ಕಾಲುಂಗರ ಧರಿಸುವುದರಿಂದ ಮಹಿಳೆಗೆ ಮತ್ತು ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಮದುವೆಯಾದ ಪ್ರತಿ ಸ್ತ್ರೀ ಕಾಲುಂಗುರ ಧರಿಸುತ್ತಾಳೆ. ಹೂವು, ಕುಂಕುಮ, ಬಳೆ,ಮಾಂಗಲ್ಯ ಹಾಗೂ ಕಾಲುಂಗರ ಧರಿಸಿದರೇ ಆಕೆಯನ್ನು ಪರಿಪೂರ್ಣ ಮುತ್ತೈದೆ ಎಂದು ಕರೆಯಲಾಗುತ್ತದೆ.
ಮಹಿಳೆಯೊಬ್ಬಳು ಕಾಲುಂಗರ ಧರಿಸಿದರೇ ಆದು ಆಕೆ ವಿವಾಹಿತೆ ಎಂಬುದು ಸೂಚಕ. ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ವಿವಾಹಿತ ಮಹಿಳೆ ಕಾಲುಂಗರ ಧರಿಸುವ ಪದ್ಧತಿಯಿದೆ. ಇದು ಕೇವಲ ಸ್ತ್ರೀಯೋರ್ವಳು ವಿವಾಹಿತೆ ಎಂಬುದರ ಸೂಚಕವಷ್ಟೇ ಅಲ್ಲ, ಇದಕ್ಕೆವೈಜ್ಞಾನಿಕ ಕಾರಣವೂ ಕೂಡ ಇದೆ. ಇದು ವಿವಾಹಿತ ಸ್ತ್ರೀಯರಿಗೆ, ಗರ್ಭ ಧರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೇ, ನಿರ್ದಿಷ್ಟ ನರವೊಂದು ಕಾಲಿನ ಎರಡನೆಯ ಬೆರಳನ್ನು ಗರ್ಭಾಶಯಕ್ಕೆ ಸಂಪರ್ಕಿಸುವಾಗ, ಅದು ಹೃದಯದ ಮೂಲಕ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ.
ಭಾರತೀಯ ವೇದಶಾಸ್ತ್ರಗಳ ಪ್ರಕಾರ ಎರಡೂ ಪಾದಗಳಲ್ಲಿ ಕಾಲುಂಗುರಗಳನ್ನು ಧರಿಸುವುದರಿಂದ, ಸ್ತ್ರೀಯರ ಋತುಚಕ್ರವು ನಿಯಮಿತಗೊಂಡು, ಸಮರ್ಪಕವಾದ ಅಂತರದಲ್ಲಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ
ಅದ್ದರಿಂದ, ಕಾಲುಂಗುರಗಳನ್ನು ಯಾವಾಗಲೂ ಬಲ ಮತ್ತು ಎಡ ಪಾದಗಳ ಎರಡನೆಯ ಬೆರಳುಗಳಿಗೇ ಧರಿಸಲಾಗುತ್ತದೆ. ಬೆಳ್ಳಿಯು ಒಂದು ಉತ್ತಮ ವಾಹಕವಾಗಿದ್ದು, ಅದರಿಂದ ಮಾಡಲ್ಪಟ್ಟ ಕಾಲುಂಗುರಗಳು, ಭೂಮಿಯ ಪಾಸಿಟಿವ್ ಶಕ್ತಿಗಳನ್ನು ಹೀರಿ ಶರೀರಕ್ಕೆ ವರ್ಗಾಯಿಸುತ್ತವೆ
ಆದರೆ ಇತ್ತೀಚೆಗೆ ಕಾಲುಂಗರವನ್ನು ಫ್ಯಾಶನ್ ಗಾಗಿಯೂ ಧರಿಸುತ್ತಾರೆ. ಕಾಲೇಜಿನ ಹೆಣ್ಮಕ್ಕಳು ವಿವಾಹವಾಗದಿದ್ದರೂ ಇದನ್ನು ಧರಿಸುತ್ತಾರೆ. ಜೊತೆಗೆ ಬೀದಿ ಕಾಮಣ್ಣರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೆಲವರು ಕಾಲುಂಗರ ಧರಿಸುತ್ತಾರೆ. ಮದುವೆಯಾಗದೇ ಕಾಲುಂಗರ ಧರಿಸುವುದು ಒಳಿತಲ್ಲ ಎಂಬುದು ಹಿರಿಯರ ಅಭಿಪ್ರಾಯ.