ಕಾಸ್ಟ್ಯೂಮ್ ಜ್ಯುವೆಲ್ಲರಿ 
ಮಹಿಳೆ-ಮನೆ-ಬದುಕು

ಬೇಡಿಕೆಯ ಕಾಸ್ಟ್ಯೂಮ್ ಜ್ಯುವೆಲ್ಲರಿ

ಮಹಿಳೆಯರು ಅಸಲಿ ಚಿನ್ನದಂತೆ ಕಾಣುವ ನಕಲಿ ಚಿನ್ನದತ್ತ ಅಂದರೆ ಕಾಸ್ಟ್ಯೂಮ್ ಜ್ಯುವೆಲ್ಲರಿ (costume jewellery)ಗಳತ್ತ ಮೊರೆಹೋಗುತ್ತಾರೆ...

ಹಬ್ಬ-ಹರಿದಿನಗಳು, ಮದುವೆ ಅಂದ ಮೇಲೆ ಒಡವೆ ಹಾಗೂ ಉಡುಪಿಗೆ ಅಲ್ಲಿ ಪ್ರಾಶಸ್ತ್ಯ. ರಂಗು ರಂಗಿನ ಉಡುಪು, ತರತರದ ಒಡವೆ ತೊಟ್ಟು ಓಡಾಡುವುದೆಂದರೆ ಯುವತಿಯರಿಗೆ, ಹೆಂಗಳೆಯರಿಗೆ ಎಲ್ಲಿಲ್ಲದ ಸಂಭ್ರಮ.

ಭರ್ಜರಿ ರೇಷ್ಮೆ ಸೀರೆ ಅದಕ್ಕೆ ಒಪ್ಪುವ ಕಿವಿಯೋಲೆ, ಕುತ್ತಿಗೆ ಸರ, ಬಳೆ ಧರಿಸಿಕೊಂಡರೆ ಸೌಂದರ್ಯ ಇಮ್ಮಡಿಯಾಗುತ್ತದೆ. ಹಲವು ಬಾರಿ ಸಾದಾ ಸೀರೆ ಉಟ್ಟು ಉತ್ತಮ ಜ್ಯುವೆಲ್ಲರಿ ಧರಿಸಿದರೆ ಸಾಕು, ನಮ್ಮ ಅಂದವನ್ನು ಹೆಚ್ಚಿಸುತ್ತವೆ.

ಆದರೆ ಎಲ್ಲಾ ಸಮಯಗಳಲ್ಲೂ, ಎಲ್ಲರಿಗೂ ಅಸಲಿ ಚಿನ್ನವನ್ನು ಧರಿಸಲು ಸಾಧ್ಯವಾಗುವುದಿಲ್ಲ. ದುಬಾರಿ ಬೆಲೆ, ತಮ್ಮ ಮನಸ್ಸಿಗೆ ಹಿತವಾಗದಿರುವ ಚಿನ್ನದ ಡಿಸೈನ್, ಚಿನ್ನವನ್ನು ಧರಿಸಿ ಓಡಾಡಲು ಭಯ ಇದಕ್ಕೆ ಕಾರಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಅಸಲಿ ಚಿನ್ನದಂತೆ ಕಾಣುವ  ನಕಲಿ ಚಿನ್ನದತ್ತ ಅಂದರೆ ಕಾಸ್ಟ್ಯೂಮ್ ಜ್ಯುವೆಲ್ಲರಿ (costume jewellery)ಗಳತ್ತ ಮೊರೆಹೋಗುತ್ತಾರೆ.

ನಗರ ಪ್ರದೇಶಗಳು ಸೇರಿದಂತೆ ಗ್ರಾಮೀಣ ಭಾಗದ ಯುವತಿಯರು, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಕಾಸ್ಟ್ಯೂಮ್ ಜ್ಯುವೆಲ್ಲರಿಯತ್ತ ಮನಸೋಲುತ್ತಿದ್ದಾರೆ. ಅಸಲಿ ಚಿನ್ನದ ಶೋರೂಂಗಳಂತೆ ಕಾಸ್ಟ್ಯೂಮ್ ಜ್ಯುವೆಲ್ಲರಿ ಶೋರೂಂಗಳನ್ನೂ ನಾವು ನಗರಗಳಲ್ಲಿ ಕಾಣಬಹುದು.

ಚಿನ್ನದ ಬದಲಿಗೆ ಮಾರುಕಟ್ಟೆಯಲ್ಲಿ ದೊರಕುವ ವಿವಿಧ ವಿನ್ಯಾಸಗಳ ಆಭರಣಗಳನ್ನು ತೊಟ್ಟು ಮಹಿಳೆಯರು ಖುಷಿಪಡುತ್ತಾರೆ. ಈ ಆಭರಣಗಳು ಶ್ರೀಮಂತ ವರ್ಗದ, ಕಾರ್ಪೊರೇಟ್ ವಲಯದ ಮಹಿಳೆಯರನ್ನೂ ಸೆಳೆಯುತ್ತಿವೆ. ``ಮನಸೆಳೆಯುವ ಅತ್ಯಾಕರ್ಷಕ ಆಧುನಿಕ ಡಿಸೈನ್‍ಗಳು, ದೇಹಕ್ಕೆ ಒಪ್ಪುವಂತಹ ವಿನ್ಯಾಸ, ಕಣ್ಣು ಕೋರೈಸುವ ಹೊಳಪು ಮಹಿಳೆಯರನ್ನು ಈ ಜ್ಯುವೆಲ್ಲರಿಗಳತ್ತ ವಾಲುವಂತೆ ಮಾಡಿವೆ.

''ಚಿನ್ನದ ಬದಲಿಗೆ ನಮಗೆ ಬೇಕಾದ ರೀತಿಯ ಡಿಸೈನ್ ಗಳ  ಜ್ಯುವೆಲ್ಲರಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದು ನಮ್ಮ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ’’ ಎನ್ನುತ್ತಾರೆ ಬೆಂಗಳೂರಿನ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ  ಸೌಜನ್ಯ.

ಕಾಸ್ಟ್ಯೂಮ್ ಜ್ಯುವೆಲ್ಲರಿಯಲ್ಲಿ ಹಗುರ ಮತ್ತು ಭಾರ ಗಾತ್ರದ ಜ್ಯುವೆಲ್ಲರಿಗಳು ಸಿಗುತ್ತವೆ. ಉದ್ಯೋಗಕ್ಕೆ ಹೋಗುವ ಮಹಿಳೆಯರು ಮತ್ತು ಕಾಲೇಜಿಗೆ ಹೋಗುವ ಹುಡುಗಿಯರು ಹಗುರ ಗಾತ್ರದ ಆಕರ್ಷಕ ವಿನ್ಯಾಸಗಳ ಸೆಟ್ ಜ್ಯುವೆಲ್ಲರಿಗಳನ್ನು ಇಷ್ಟಪಡುತ್ತಾರೆ.ಪಾರ್ಟಿಗಳಿಗೆ, ಇತರ ಸಾಮಾಜಿಕ ಕಾರ್ಯಕ್ರಮಗಳಿಗೆ ಹೋಗುವಾಗಂತೂ ಇಂತಹ ಜ್ಯುವೆಲ್ಲರಿಯನ್ನು ಧರಿಸಿಕೊಂಡು ಹೋಗುತ್ತಾರೆ.

ಇಂದಿನ ಯುವತಿಯರು, ಉದ್ಯೋಗಸ್ಥ ಮಹಿಳೆಯರು ಕಾಸ್ಟ್ಯೂಮ್ ಜ್ಯುವೆಲ್ಲರಿಯನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಕುಶಲ್ಸ್ ಫ್ಯಾಶನ್ಸ್ ಜ್ಯುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಆರ್.ಗುಲೆಚ್ಚ.

ಮಹಿಳೆಯರು ತಾವು ಧರಿಸುವ ಒಡವೆ, ಉಡುಪುಗಳಲ್ಲಿ ಪ್ರಯೋಗಶೀಲರಾಗಿರುತ್ತಾರೆ. ಇಂದು ಒಂದು ಸಮಾರಂಭಕ್ಕೆ ಧರಿಸಿದ ಒಡವೆ, ಉಡುಪುಗಳನ್ನು ಇನ್ನೊಂದು ಬಾರಿ ಧರಿಸಲು ಇಷ್ಟಪಡುವುದಿಲ್ಲ. ದಕ್ಷಿಣ ಭಾರತೀಯರು ಉತ್ತರ ಭಾರತದ, ಉತ್ತರ ಭಾರತೀಯರು ದಕ್ಷಿಣದ ಒಡವೆಗಳನ್ನು ಇಷ್ಟಪಡುತ್ತಾರೆ. ಅಂತವರಿಗೆ ಕಾಸ್ಟ್ಯೂಮ್ ಜ್ಯುವೆಲ್ಲರಿ ಉತ್ತಮ ಆಯ್ಕೆ ಎನ್ನುತ್ತಾರೆ ಅವರು.

ಜ್ಯುವೆಲ್ಲರಿಯನ್ನು ತಾಮ್ರದಿಂದ ಹಾಗೂ ಬೆಳ್ಳಿಯನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಶೇಕಡಾ 80ರಷ್ಟು ವಿನ್ಯಾಸಗಳನ್ನು ಮುಂಬೈಯಿಂದ ಹಾಗೂ ಚೀನಾ, ಕೊರಿಯಾ ದೇಶಗಳಿಂದ ತರಿಸಿಕೊಳ್ಳುತ್ತೇವೆ. ಮಹಿಳೆಯರು ಹೆಚ್ಚಾಗಿ ಹಳೆಯ ಶೈಲಿಯ, ಕುಂದನ್ ಹಾಗೂ ಬೆಳ್ಳಿಯ ಟೆಂಪಲ್ ಜ್ಯುವೆಲ್ಲರಿಗಳನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ಅಂಕಿತ್ ಗುಲೆಚ್ಚ.

``ಕಾಸ್ಟ್ಯೂಮ್ ಜ್ಯುವೆಲ್ಲರಿಯ ಇನ್ನೊಂದು ಅನುಕೂಲವೆಂದರೆ ನಮ್ಮ ದೇಹಕ್ಕೊಪ್ಪುವ, ಉಡುಪಿಗೆ ಹೊಂದಿಕೆಯಾಗುವುದನ್ನು, ಸಂದರ್ಭಕ್ಕೆ ತಕ್ಕಂತೆ ಧರಿಸಿಕೊಳ್ಳಬಹುದು. ನಾವು ಬೇರೆಯವರಿಗೆ ಉಡುಗೊರೆಯಾಗಿ ಸಹ ನೀಡಬಹುದು. ನಾವು ಉಡುವ ಬಟ್ಟೆಗೆ ತಕ್ಕಂತ ನೆಕ್ಲೇಸ್, ಕಿವಿಯೋಲೆ, ಬಳೆಯನ್ನು ಧರಿಸಬಹುದು ಎನ್ನುತ್ತಾರೆ ಬಿಕಾಂ ಓದುತ್ತಿರುವ ದೀಪಿಕಾ.

ವಿದೇಶದಲ್ಲಿರುವ ಭಾರತೀಯ ಹೆಂಗಳೆಯರ ಮನವನ್ನೂ ಈ ಜ್ಯುವೆಲ್ಲರಿಯು ಗೆದ್ದಿದೆ. ಚಿನ್ನದ ಮೇಲಿನ ಸುಂಕದ ಕಾನೂನುಗಳು, ಹೊತ್ತೊಯ್ಯುವ ಸಮಸ್ಯೆಯಿಂದಾಗಿ ವಿದೇಶಗಳಲ್ಲಿ ನೆಲೆಸಿರುವ ಹೆಂಗಸರು, ಯುವತಿಯರು ಭಾರತದಿಂದ ಕಾಸ್ಟ್ಯೂಮ್ ಜ್ಯುವೆಲ್ಲರಿಯನ್ನು ಕೊಂಡು ಹೋಗುತ್ತಾರೆ.

ಕಾಸ್ಟ್ಯೂಮ್ ಜ್ಯುವೆಲ್ಲರಿ ಅಸಲಿ ಚಿನ್ನದ ವ್ಯಾಪಾರದಂತೆ ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದೆ. ಮಾರುಕಟ್ಟೆಯಲ್ಲಿ 200 ರೂಪಾಯಿಯಿಂದ 50 ಸಾವಿರದವರೆಗಿನ ಜ್ಯುವೆಲ್ಲರಿಗಳು ಸಿಗುತ್ತವೆ. ಅತ್ಯಾಕರ್ಷಕ ಆಧುನಿಕ ಶೈಲಿಯ ಡಿಸೈನ್‍ಗಳು, ಅವುಗಳ ಸ್ಟೈಲಿಶ್ ನೋಟ ಹೆಂಗಳೆಯರ, ಯುವತಿಯರ ಮನವನ್ನು ಗೆದ್ದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ