ನವದೆಹಲಿ: ಹೊಸ ವರುಷಕ್ಕೆ ಶರೀರ ಫಿಟ್ ಆಗಬೇಕು, ಬೊಜ್ಜು ಕರಗಿಸಬೇಕು ಎಂದು ಅದೆಷ್ಟೋ ಮಹಿಳೆಯರು ಸಂಕಲ್ಪ ಮಾಡಿಕೊಂಡಿರುತ್ತಾರೆ. ಮಿತವಾದ ಆಹಾರ ಮತ್ತು ವ್ಯಾಯಾಮದಿಂದ ಬೊಜ್ಜು ಕರಗಿಸ ಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದಕ್ಕೆ ತಂತ್ರಜ್ಞಾನವೂ ಸೇರಿದರೆ?ಅದು ಹೇಗೆ ಅಂತೀರಾ? ಅದಕ್ಕಾಗಿ ಬಂದಿದೆ ಸ್ಮಾರ್ಟ್ ಬ್ರಾ
ಓಂರನ್ ಎಂಬ ಮೊಬೈಲ್ ಅಪ್ಲಿಕೇಷನ್ ಹೊಂದಿರುವ ಈ ಬ್ರಾ ನಡಿಗೆ ಅಥವಾ ಓಟದ ದೂರ, ವೇಗ, ಉಸಿರಾಟದ ವೇಗ ಮತ್ತು ಸುಸ್ತು ಆಗುವ ಹಂತ ಯಾವುದು ಎಂಬುದನ್ನು ತೋರಿಸುತ್ತದೆ.
ಈ ಬ್ರಾ ಧರಿಸಿ ವ್ಯಾಯಾಮ ಮಾಡಿದರೆ ಶರೀರದ ಚಲನೆಗಳ ಮೇಲೆ ಇದು ನಿಗಾ ಇರಿಸಿ ಮಾಹಿತಿ ಕೊಡುತ್ತದೆ.ಮಹಿಳೆಯರಿಗೆ ಸ್ಫೋರ್ಟ್ಸ್ ಬ್ರಾ ದಂತಿರುವ ಈ ಬ್ರಾ ಹೃದಯ ಬಡಿತ, ಉಸಿರಾಟದ ವೇಗ ಮತ್ತು ಕ್ಯಾಲರಿಯ ಇಳಿಕೆಯನ್ನು ತೋರಿಸುತ್ತದೆ.
ಲಾಸ್ ವೇಗಸ್‌ನಲ್ಲಿ ಕನ್ಸ್ಯೂಮರ್ ಇಲೆಕ್ಟ್ರಾನಿಕ್ ಶೋನಲ್ಲಿ ಪ್ರದರ್ಶಿಸಲ್ಪಟ್ಟ ಈ ಬ್ರಾದ ಬೆಲೆ ಸರಿ ಸುಮಾರು 150 ಡಾಲರ್‌ಗಳಷ್ಟಿದೆ.