ಸಾಂದರ್ಭಿಕ ಚಿತ್ರ 
ಮಹಿಳೆ-ಮನೆ-ಬದುಕು

ಹೆರಿಗೆ ಸಮಸ್ಯೆಗಳಿಂದ ದೇಶದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವು: ವಿಶ್ವ ಆರೋಗ್ಯ ಸಂಸ್ಥೆ

ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ...

ನವದೆಹಲಿ: ಹೆರಿಗೆ ಸಂದರ್ಭದಲ್ಲಿ ಸಮಸ್ಯೆಗಳುಂಟಾಗಿ ಪ್ರತಿ ಗಂಟೆಗೆ ಸುಮಾರು 5 ಮಂದಿ ಮಹಿಳೆಯರು ಭಾರತದಲ್ಲಿ ಸಾವನ್ನಪ್ಪುತ್ತಾರೆ. ಅದರಲ್ಲೂ ರಕ್ತಸ್ರಾವದಿಂದ ಸಾವನ್ನಪ್ಪುವ ಮಹಿಳೆಯರ ಸಂಖ್ಯೆ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಭಾರತದಲ್ಲಿ ಪ್ರತಿವರ್ಷ ಸುಮಾರು 45 ಸಾವಿರ ತಾಯಂದಿರು ಹೆರಿಗೆ ಸಂದರ್ಭದಲ್ಲಿ ಉಂಟಾಗುವ ತೊಂದರೆಯಿಂದ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಈ ಪ್ರಮಾಣ ಶೇಕಡಾ 17ರಷ್ಟಿದೆ ಎಂದು ಹೇಳಿದೆ.

ಹೆರಿಗೆ ಸಂದರ್ಭದಲ್ಲಿ ರಕ್ತಸ್ರಾವ ಸಾವಿಗೆ ಬಹುಮುಖ್ಯ ಕಾರಣವಾಗಿದೆ.ಮಗು ಹುಟ್ಟಿ 24 ಗಂಟೆಯೊಳಗೆ 500ರಿಂದ 1000 ಮಿಲಿ ಲೀಟರ್ ರಕ್ತ ದೇಹದಿಂದ ಹೋಗುವುದರಿಂದ ಮಹಿಳೆಯರು ಸಾವನ್ನಪ್ಪುತ್ತಾರೆ.

ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶ ಪ್ರಕಾರ, ಭಾರತದಲ್ಲಿ ಹೆರಿಗೆಯಾಗುವ ಪ್ರತಿ ಲಕ್ಷ ಮಹಿಳೆಯರಲ್ಲಿ 174 ಮಹಿಳೆಯರು ಸಮಸ್ಯೆಗಳಿಂದ ಸಾವನ್ನಪ್ಪುತ್ತಾರೆ. ಸುಮಾರು 26 ದಶಲಕ್ಷ ಗರ್ಭಿಣಿ ಮಹಿಳೆಯರು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದು, ಅವರಲ್ಲಿ ಸುಮಾರು 45 ಸಾವಿರ ಮಹಿಳೆಯರು ಸಾವನ್ನಪ್ಪುತ್ತಾರೆ. ಅಂದರೆ ಗಂಟೆಗೆ ಸುಮಾರು ಐವರು ಮಹಿಳೆಯರು ಮರಣ ಹೊಂದುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಕಚೇರಿಯ ವರದಿ ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!