ಬ್ರಿಟನ್‍ನಲ್ಲಿ ನೌಕರಿ ಸಿಗಲು ಸರಾಗ ಇಂಗ್ಲಿಷ್ ಕಡ್ಡಾಯ (ಸಂಗ್ರಹ ಚಿತ್ರ) 
ವಿದೇಶ

ಬ್ರಿಟನ್‍ನಲ್ಲಿ ನೌಕರಿ ಸಿಗಲು ಸರಾಗ ಇಂಗ್ಲಿಷ್ ಕಡ್ಡಾಯ

ಕರ್ನಾಟಕದಲ್ಲಿ ಕನ್ನಡ ಕಡ್ಡಾಯ. ಕಚೇರಿಗಳಲ್ಲಿ ಕನ್ನಡ ಬಳಕೆ ಅಗತ್ಯ ಎಂಬ ನಿಯಮಗಳಂತೆಯೇ ಇದೀಗ ಬ್ರಿಟನ್ ನಲ್ಲಿಯೂ ಇಂಗ್ಲಿಷ್ ಭಾಷೆಯ ಬಗ್ಗೆ ಒಂದಷ್ಟು ಕಟ್ಟುನಿಟ್ಟು ಮಾಡಲಾಗಿದೆ...

ಲಂಡನ್: ಕರ್ನಾಟಕದಲ್ಲಿ ಕನ್ನಡ ಕಡ್ಡಾಯ. ಕಚೇರಿಗಳಲ್ಲಿ ಕನ್ನಡ ಬಳಕೆ ಅಗತ್ಯ ಎಂಬ ನಿಯಮಗಳಂತೆಯೇ ಇದೀಗ ಬ್ರಿಟನ್ ನಲ್ಲಿಯೂ ಇಂಗ್ಲಿಷ್ ಭಾಷೆಯ ಬಗ್ಗೆ ಒಂದಷ್ಟು ಕಟ್ಟುನಿಟ್ಟು ಮಾಡಲಾಗಿದೆ.

ಅಲ್ಲಿನ ಸರ್ಕಾರಿ ನೌಕರಿಗಳು ಹಾಗೂ ಪಬ್ಲಿಕ್ ಸೆಕ್ಟರ್ ಉದ್ಯೋಗಗಳು ಸಿಗಬೇಕಿದ್ದಲ್ಲಿ ಸುಲಲಿತ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ಕಡ್ಡಾಯ ಎಂದು ನಿಯಮ ಜಾರಿಗೊಳಿಸಲಾಗಿದೆ. ಇಂಗ್ಲಿಷ್ ಸರಾಗವಾಗಿ ಮಾತನಾಡಲು ಬಾರದಿರುವವರಿಗೆ ಕೆಲಸ ನೀಡಲಾಗುವುದಿಲ್ಲ ಎಂದು ಘೋಷಣೆ ಮಾಡಿದೆ. ಇದು ವಲಸಿಗರು ಹಾಗೂ ಅನಿವಾಸಿ
ಬ್ರಿಟಿಷರ ಮೇಲೆ ಪರಿಣಾಮ ಬೀರಲಿದೆ. ನ್ಯಾಷನಲ್ ಹೆಲ್ತ್ ಸೆಂಟರ್ ಮತ್ತು ಕೌನ್ಸಿಲ್ ನ ಉದ್ಯೋಗಿಗಳು ಜಿಸಿಎಸ್‍ಇ ಗ್ರೇಡಿ ಸಿ ಅಥವಾ ಅದಕ್ಕಿಂತ ಹೆಚ್ಚಿನ ಇಂಗ್ಲಿಷ್ ಪರಿಣತಿ
ಪಡೆದಿರಲೇಬೇಕು ಎಂದು ಸರ್ಕಾರ ತಿಳಿಸಿದ್ದು, ಪೊಲೀಸರು, ಸಮಾಜ ಸೇವಕರು, ಶಿಕ್ಷಕರು ಹಾಗೂ ಇನ್ನು ಕೆಲವು ಹುದ್ದೆಯಲ್ಲಿ ದುಡಿಯುವ ವರಿಗೆ ಸರಾಗ ಇಂಗ್ಲಿಷ್ ಕಡ್ಡಾಯ ಎಂದಿದೆ.

ಇದೇ ಮೊದಲ ಬಾರಿಗೆ ಇಂಥದೊಂದು ನಿಯಮವನ್ನು ಬ್ರಿಟನ್‍ನಲ್ಲಿ ಜಾರಿ ಮಾಡಲಾಗಿದೆ ಎನ್ನಲಾಗಿದ್ದು, ದೇಶದಲ್ಲಿ ಭಾಷೆಯ ಘನತೆ ಉಳಿಸಲು ಹಾಗೂ ಉದ್ಯೋಗದಲ್ಲಿ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಬ್ರಿಟಿಷ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT