ವಿದೇಶ

ಕರಡಿಗೆ ಆಹಾರ ಕೊಟ್ಟದ್ದಕ್ಕೆ ಸೇರಬೇಕಾಯ್ತು ಜೈಲು

Mainashree

ಆಕೆಯ ಹೆಸರು ಅನ್ನಾ ಮೆಡೀನಾ. ಮಧ್ಯವಯಸ್ಸಿನ ಈ  ಮಹಿಳೆಯನ್ನು ಪೊಲೀಸರು ಸದ್ಯ ಜೈಲಿನಲ್ಲಿ ಇಟ್ಟಿದ್ದಾರೆ. ತಾನು ತಪ್ಪು ಮಾಡಿಲ್ಲ ಎಂದು ಆಕೆ ಎಷ್ಟು ಬಗೆಯಲ್ಲಿ ಕೇಳಿಕೊಂಡರೂ ಅವಳ ಮಾತು ಕೇಳಲು ಮಾತ್ರ ಯಾರೂ ತಯಾರಿಲ್ಲವಂತೆ.

ಆಕೆ ಸಾಕಿಕೊಂಡಿರುವ ಪ್ರಾಣಿಗಳು ನಮಗೆ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿವೆ ಎಂದು ನೆರೆಹೊರೆಯವರು ಗಂಭೀರವಾಗಿ ದೂರಿದ್ದು, ಪೊಲೀಸರು ಕೂಡ ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ.

ಅಷ್ಟಕ್ಕೂ ಅನ್ನಾ ಮಾಡಿದ್ದು ಅಂಥ ಘೋರ ಅಪರಾಧವೇನಲ್ಲ ಎಂಬುದು ಪ್ರಾಣಿಪ್ರಿಯರ ಆಂಬೋಣ. ಅನ್ನಾ ಮೇಲಿರುವ ಆರೋಪ, ಆಕೆ ಕರಡಿಗಳಿಗೆ ನಿಯಮಿತವಾಗಿ ಆಹಾರ ಹಾಕುತ್ತಿದ್ದಳು. ಹಾಗಾಗಿ ಆಕೆಯ ಮನೆಯ ಸುತ್ತ ಸದಾ ಕರಡಿಗಳೇ ಇರುತ್ತಿದ್ದವು.

SCROLL FOR NEXT