ಕರಾಚಿ: ಪಾಕಿಸ್ತಾನಕ್ಕೆ ಭಾರತದಿಂದ ಮಾತ್ರ ಬಾಹ್ಯ ಬೆದರಿಕೆ ಇದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.
ಸೆನೆಟ್ ರಕ್ಷಣಾ ಸಮಿತಿಯ ನೇತೃತ್ವ ವಹಿಸಿರುವ ಸೆನೆಟರ್ ಮುಸಾಹಿದ್ದೀನ್ ಹುಸೈನ್ ಸಯ್ಯದ್ ನಿನ್ನೆ ರಾವಲ್ಪಿಂಡಿಯಲ್ಲಿರುವ ಸೇನಾ ಜಂಟಿ ಸಿಬ್ಬಂದಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸೇನಾ ಅಧಿಕಾರಿಗಳು ಚರ್ಚೆ ನಡೆಸಿದರು.
ಸೇನಾ ಅಧಿಕಾರಿಗಳು ಸೇನಾ ಸದಸ್ಯರೊಂದಿಗೆ ಪಾಕಿಸ್ತಾನಕ್ಕೆ ಭಾರತದಿಂದ ಬಾಹ್ಯ ಬೆದರಿಕೆ ಇದೆ. ಕಳೆದ ಹಲವು ವರ್ಷಗಳಿಂದ ಭಾರತ ಶಸ್ತ್ರಾಸ್ತ್ರಗಳ ಖರೀದಿಗೆ 100 ಬಿಲಿಯನ್ ಡಾಲರ್ ವ್ಯಹಿಸಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.