ಲಂಡನ್: ಕಂಠಪೂರ್ತಿ ಕುಡಿದಿದ್ದಲ್ಲದೆ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಜತೆಗಿದ್ದ ಪ್ರೇಯಸಿ ಜತೆ ಸೆಕ್ಸ್ ನಲ್ಲಿ ನಿರತನಾಗಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಕಾರನ್ನು ಚಲಾಯಿಸಿ ಕಾರು ಭೀಕರ ಅಪಘಾತಕ್ಕೀಡಾಗಿ ಪ್ರೇಯಸಿ ಸಾವಿಗೆ ಕಾರಣನಾದ ಭಾರತೀಯನಿಗೆ ಲಂಡನ್ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪಶ್ಚಿಮ ಸಸೆಕ್ಸ್ ಭಾಗದಲ್ಲಿ ವಾಸವಿದ್ದ 36 ವರ್ಷದ ಮಿನೇಶ್ ಪರ್ಬತ್ ಕಾರು ಓಡಿಸುವುದನ್ನು ಬಿಟ್ಟು ಜೊತೆಗಿದ್ದ ಪ್ರೇಯಸಿ ಜೊತೆ ಪ್ರಣಯಕ್ಕೆ ಜಾರಿದ್ದ. ಹೀಗಾಗಿ ಕಾರು ಭೀಕರ ರಸ್ತೆ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 2 ಮಕ್ಕಳ ತಾಯಿ 28 ವರ್ಷದ ಲಿಸಾ ವಾಟ್ಲಿಂಗ್ ಸಾವನ್ನಪ್ಪಿದ್ದಳು. ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಿನೇಶ್ ಗೆ 7 ವರ್ಷಗಳ ಶಿಕ್ಷೆ ವಿಧಿಸಿದೆ.
ಈ ಸಂದರ್ಭ ಮಿನೇಶ್ ಧರಿಸಿದ್ದ ಪ್ಯಾಂಟ್ ಮತ್ತು ಒಳ ಉಡುಪು ಮೊಣಕಾಲಿನಿಂದ ಕೆಳಗೆ ಇದ್ದವು. ಇದನ್ನ ಗಮನಿಸಿದ್ದ ಸ್ಥಳೀಯರು ಕಾರಿನಲ್ಲಿ ನಡೆದಿದ್ದ ಕಾಮಕಾಂಡದ ಬಗ್ಗೆ ಸಾಕ್ಷ್ಯ ನುಡಿದಿದ್ದರು. ಅಷ್ಟೇ ಅಲ್ಲ, ಗಾಯಗೊಂಡಿದ್ದ ಗರ್ಲ್ ಫ್ರೆಂಡ್ ಮೈಮೇಲೂ ಟೀಶರ್ಟ್ ಮತ್ತು ಬ್ರಾ ಬಿಟ್ಟರೆ ಬೇರಾವ ಬಟ್ಟೆಯೂ ಇರಲಿಲ್ಲ.
ನ್ಯಾಯಾಲಯದಲ್ಲಿ ಪರ್ಬಾತ್, ಚಲಿಸುತ್ತಿದ್ದ ಕಾರಿನಲ್ಲಿ ಸೆಕ್ಸ್ ನಡೆಸಿದ ಆರೋಪವನ್ನು ಅಲ್ಲಗಳೆದಿದ್ದಾನೆ. ಕೋರ್ಟ್ ಇದಕ್ಕೆ ಸೊಪ್ಪು ಹಾಕಲಿಲ್ಲ. ಅಲ್ಲದೇ, ಪರ್ಬಾತ್ ರಕ್ತದಲ್ಲಿ 102 ಮಿಲಿಗ್ರಾಂ ಆಲ್ಕೋಹಾಲ್ ಸಹ ಪತ್ತೆಯಾಗಿದ್ದು, ಡ್ರಂಕ್ ಅಂಡ್ ಡ್ರೈವ್ ಅಪರಾಧವೂ ಸುತ್ತಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics