ಇಸ್ಲಾಮಾಬಾದ್ ಸಮೀಪವಿರುವ ಚಕ್‌ವಾಲ್ ಜಿಲ್ಲೆಯಲ್ಲಿರುವ ಪವಿತ್ರ ಕಟಾಸ್ ರಾಜ್ ದೇಗುಲ (ಸಂಗ್ರಹ ಚಿತ್ರ) ಚಿತ್ರ ಕೃಪೆ: ಟ್ವಿಟರ್
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ನಡೆಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ. ಇಲ್ಲಿರುವ ಪುರಾತನ ಹಿಂದೂ ದೇವಾಲಯಗಳಿಗೆ ಯಾತ್ರಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಪಾಕ್ ಈ ಕಾರ್ಯಕ್ಕೆ ಮುಂದಾಗಿದೆ.
ಇಸ್ಲಾಮಾಬಾದ್ ಸಮೀಪವಿರುವ ಚಕ್‌ವಾಲ್ ಜಿಲ್ಲೆಯಲ್ಲಿರುವ ಪವಿತ್ರ ಕಟಾಸ್ ರಾಜ್ ದೇಗುಲಕ್ಕೆ 124 ಯಾತ್ರಾರ್ಥಿಗಳು ಶುಕ್ರವಾರ ಆಗಮಿಸಿದ್ದು, ಇವರನ್ನು ಪಾಕ್ ಅಧಿಕೃತರು ಆತ್ಮೀಯತೆಯಿಂದ ಬರ ಮಾಡಿಕೊಂಡಿದ್ದಾರೆ.
ದೇವಾಲಯದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಇವಾಕ್ವೀ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಮುಖ್ಯಸ್ಥ ಮೊಹಮ್ಮದ್ ಸಿದ್ದಿಖುಲ್ ಫರೂಖ್, ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಬಾಂಧವ್ಯವಿರಬೇಕೆಂದು ಉಭಯ ರಾಷ್ಟ್ರದ ಜನರು ಬಯಸುತ್ತಾರೆ. ಆದ್ದರಿಂದಲೇ ಪಾಕ್ ಸರ್ಕಾರ ಇಲ್ಲಿನ ದೇಗುಲಗಳ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಂಡರೆ ಉತ್ತಮ. ದೇಶ ವಿಭಜನೆಯಿಂದಾಗಿ ಎರಡೂ ದೇಶದ ಜನರಿಗೆ ನಷ್ಟವಾಗಿದೆ. ದೇಶ ವಿಭಜನೆಯ ಈ ಸತ್ಯವನ್ನು ನಾವು ಒಪ್ಪಿಕೊಂಡು ಮುಂದೆ ಸಾಗಬೇಕಿದೆ. ಉಭಯ ರಾಷ್ಟ್ರಗಳು ತುಂಬು ಹೃದಯದಿಂದ ಪರಸ್ಪರ ಸಂವಹನ ನಡಸಬೇಕಾಗಿದೆ ಎಂದಿದ್ದಾರೆ.
ಇಲ್ಲೀಗ ದೇವಸ್ಥಾನ ಆವರಣದಲ್ಲೇ 30 ಕೋಣೆಗಳ ಹಾಸ್ಟೆಲ್ ಮತ್ತು ಇನ್ನಿತರ ಸೌಕರ್ಯಗಳಳನ್ನು ಮಾಡಲಾಗಿದೆ. ಯಾತ್ರಾರ್ಥಿಗಳನ್ನು ಆಕರ್ಷಿಸಲು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು.
ಕಳೆದ ಡಿಸೆಂಬರ್ ನಲ್ಲಿ ಭಾರತದಿಂದ 85 ತೀರ್ಥಯಾತ್ರಿಕರು ಬಂದಿದ್ದು, ಈ ವರ್ಷ 124 ಜನರು ಆಗಮಿಸಿರುವುದು ಖುಷಿಯ ವಿಚಾರ ಎಂದು ಯಾತ್ರಾರ್ಥಿಗಳ ಸಂಘದ ಮುಖಂಡ ಶಿವ್ ಪ್ರತಾಪ್ ಬಜಾಜ್ ಹೇಳಿದ್ದಾರೆ.