ವಿದೇಶ

ಸ್ವಚ್ಛ ಭಾರತಕ್ಕೆ ವಿಶ್ವಬ್ಯಾಂಕ್ ನೆರವು

Srinivas Rao BV

ವಾಷಿಂಗ್ಟನ್: ಕೇಂದ್ರ ಸರ್ಕಾರ ಕೈಗೊಂಡಿರುವ ಸ್ವಚ್ಛ ಭಾರತ ಯೋಜನೆಗೆ 150 ಕೋಟಿ ಡಾಲರ್ ನೆರವು ನೀಡಲು ವಿಶ್ವಬ್ಯಾಂಕ್ ಸಮ್ಮತಿಸಿದೆ. ವಿಶ್ವಬ್ಯಾಂಕ್‍ನ ಅಂಕಿಅಂಶಗಳ ಅನುಸಾರ ಜಗತ್ತಿನಲ್ಲಿ 240 ಕೋಟಿ ಮಂದಿಗೆ ಉತ್ತಮ ಶೌಚಾಲಯ ವ್ಯವಸ್ಥೆ ಇಲ್ಲ. ಈ ಪೈಕಿ 73 ಕೋಟಿ ಮಂದಿ ಭಾರತದಲ್ಲಿದ್ದು ಶೇ.80ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದಾರೆ.

ಪ್ರತಿ ಹತ್ತು ಸಾವುಗಳಲ್ಲಿ ಒಂದು ಸಾವಿಗೆ ಕಳಪೆ ನೈರ್ಮಲ್ಯವೇ ಕಾರಣ ಎಂಬುದು ಅಂಕಿಅಂಶದ ಮೂಲಕ ತಿಳಿದುಬಂದಿದೆ. ಕಡಿಮೆ ಆದಾಯ ಕುಟುಂಬಗಳು ಹೆಚ್ಚು ನೈರ್ಮಲ್ಯ ಸಂಕಷ್ಟ ಎದುರಿಸುತ್ತಿವೆ ಎಂದು ವಿಶ್ವಬ್ಯಾಂಕ್ ನ ಭಾರತೀಯ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT