ಏಷ್ಯಾ ಹೂಡಿಕೆ ಬ್ಯಾಂಕ್ (ಸಂಗ್ರಹ ಚಿತ್ರ) 
ವಿದೇಶ

ಏಷ್ಯಾ ಹೂಡಿಕೆ ಬ್ಯಾಂಕ್ ಅಧಿಕೃತ ಚಾಲನೆ

ಚೀನಾ ಬೆಂಬಲ ಹೊಂದಿರುವ ಮತ್ತು ಭಾರತವೂ ಸಂಸ್ಥಾಪಕ ಸದಸ್ಯರಾಗಿರುವ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಎಐಐಬಿ)ಗೆ ಶುಕ್ರವಾರ ಔಪಚಾರಿಕ ಆರಂಭ ನೀಡಲಾಯಿತು...

ಬೀಜಿಂಗ್: ಚೀನಾ ಬೆಂಬಲ ಹೊಂದಿರುವ ಮತ್ತು ಭಾರತವೂ ಸಂಸ್ಥಾಪಕ ಸದಸ್ಯರಾಗಿರುವ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ (ಎಐಐಬಿ)ಗೆ ಶುಕ್ರವಾರ ಔಪಚಾರಿಕ ಆರಂಭ  ನೀಡಲಾಯಿತು.

56 ಸದಸ್ಯ ದೇಶಗಳು ಈ ಬ್ಯಾಂಕ್‍ನಲ್ಲಿ ಸದಸ್ಯ ರಾಷ್ಟ್ರಗಳಾಗಿದ್ದು ಮುಂದಿನ ತಿಂಗಳಿನಿಂದ ಕಾರ್ಯಾಚರಣೆ ಆರಂಭಿಸಲಿದೆ. ಎಐಐಬಿಯನ್ನು ನಿಯಮಾನುಸಾರ ಇಂದು ಸ್ಥಾಪಿಸಲಾಗಿದ್ದು, ಎಲ್ಲ  ಷರತ್ತು ಮತ್ತು ಒಪ್ಪಂದಗಳು ಚಾಲ್ತಿಗೆ ಬಂದಿವೆ ಎಂದು ಚೀನಾ ಹಣಕಾಸು ಸಚಿವ ಲೌ ಜಿವೆ ಹೇಳಿದ್ದಾರೆ. ಈ ಬ್ಯಾಂಕ್‍ನಲ್ಲಿ ಪ್ರತಿ ಸದಸ್ಯ ದೇಶವೂ ಹಣಕಾಸಿನ ಪಾಲು ಹೊಂದಿರಲಿದೆ. ನೀತಿ  -ಆಡಳಿತ ನಿರ್ವಹಣೆ ಸಂರಚನೆ, ವಹಿವಾಟು ಮತ್ತು ಕಾರ್ಯಾಚರಣೆ ವ್ಯವಸ್ಥೆ ಕುರಿತೂ ಪಾಲು ಹೊಂದಿರಲಿವೆ. ಬ್ಯಾಂಕ್ 100 ಶತಕೋಟಿ ಡಾಲರ್ ಬಂಡವಾಳದೊಂದಿಗೆ ಆರಂಭಿಸಲಾಗಿದೆ.

ಬೀಜಿಂಗ್‍ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ವಿದ್ಯುತ್, ಸಾರಿಗೆ, ನಗರ ನಿರ್ಮಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹಣಕಾಸಿನ ನೆರವು ನೀಡಲಿದೆ. ಈ ಬ್ಯಾಂಕ್ನಲ್ಲಿ ಚೀನಾ, ಭಾರತ ಮತ್ತು  ರಷ್ಯಾಗಳು ಅತಿದೊಡ್ಡ ಪಾಲುದಾರ ದೇಶಗಳಾಗಿವೆ. ಚೀನಾ ಶೇ .30.24, ಭಾರತ  ಶೇ. 8.52 ಮತ್ತು ರಷ್ಯಾ ಶೇ .6.66ರಷ್ಟು ಪಾಲು ಹೊಂದಿವೆ. ಈ ಪಾಲುದಾರಿಕೆ ಅನುಸಾರ ಭಾರತ ಉಪಾಧ್ಯ ಕ್ಷ  ಸ್ಥಾನ ಪಡೆಯುವ ಸಾಧ್ಯತೆಗೆಳಿವೆ. ವಿಶ್ವಬ್ಯಾಂಕ್ ಮತ್ತು ಐಎಂಎಫ್ ಗಳಿಗೆ ಪ್ರತಿಯಾಗಿ ಚೀನಾ ಈ ಬ್ಯಾಂಕ್ ಸ್ಥಾಪಿಸುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!