ಸಂಗ್ರಹ ಚಿತ್ರ 
ವಿದೇಶ

ಚೀನಾದ ಒಂದೇ ಮಗು ನೀತಿಗೆ ಅಧಿಕೃತ ವಿದಾಯ

ಚೀನಾದಲ್ಲಿ ಅಸ್ತಿತ್ವದಲ್ಲಿದ್ದ ಒಂದೇ ಮಗು ನೀತಿಗೆ ಭಾನುವಾರ ಅಧಿ ಕೃತವಾಗಿ ವಿದಾಯ ಹೇಳಲಾಗಿದೆ. ವಿವಾಹಿತ ದಂಪತಿ ಇಬ್ಬರು...

ಬೀಜಿಂಗ್: ಚೀನಾದಲ್ಲಿ ಅಸ್ತಿತ್ವದಲ್ಲಿದ್ದ ಒಂದೇ ಮಗು ನೀತಿಗೆ ಭಾನುವಾರ ಅಧಿಕೃತವಾಗಿ ವಿದಾಯ ಹೇಳಲಾಗಿದೆ. ವಿವಾಹಿತ ದಂಪತಿ ಇಬ್ಬರು ಮಕ್ಕಳನ್ನು ಹೊಂದಬಹುದು ಎನ್ನುವ ವಿಧೇಯಕವನ್ನು ಅಂಗೀಕಾರ ಮಾಡಲಾಗಿದೆ. 
ಚೀನಾ ಸಂಸತ್‍ನ ಪ್ರಮುಖ ಅಂಗವಾದ 159 ಸದಸ್ಯಬಲದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸ್ಟ್ಯಾಂಡಿಂಗ್ ಕಮಿಟಿಯು ಭಾನುವಾರ ಈ ಐತಿಹಾಸಿಕ ವಿಧೇಯಕವನ್ನು ಅಂಗೀಕರಿಸಿತು. ಒಂದೇ ಮಗು ನೀತಿಯನ್ನು ಸಡಿಲಗೊಳಿಸಿ ಅಕ್ಟೋಬರ್‍ನಲ್ಲಿ ಚೀನಾ ಸರ್ಕಾರ ಆದೇಶ ಹೊರಡಿಸಿತ್ತು. 
2016ರ ಜನವರಿ 1ರಿಂದ ಈ ನಿಯಮ ಜಾರಿಯಾಗಲಿದೆ. ಅದರಂತೆ, ಎಲ್ಲ ವಿವಾಹಿತ ದಂಪತಿಗಳಿಗೆ ಇಬ್ಬರು ಮಕ್ಕಳನ್ನು ಹೊಂದುವ ಅವಕಾಶವಿರುತ್ತದೆ. ಆದರೆ, ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯುವಂತಿಲ್ಲ. ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವ ಹಾಗೂ ಕೆಲಸ ಮಾಡಲು ಶಕ್ತರುಳ್ಳವರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಚೀನಾ ತನ್ನ ಕಠಿಣ ನೀತಿಯನ್ನು ಸಡಿಲಗೊಳಿಸಲು ನಿರ್ಧರಿಸಿತ್ತು. 
ಚೀನಾದಲ್ಲಿ 1978ರಲ್ಲಿ ಈ ಒಂದೇ ಮಗು ನೀತಿ ಜಾರಿಗೆ ಬಂದಿತ್ತು. ಈ ನೀತಿ ಜಾರಿಯಾದ ಬಳಿಕ 400 ದಶಲಕ್ಷ ಜನಸಂಖ್ಯೆ ಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಹಾಗೂ ಚೀನಾದ ಆರ್ಥಿಕತೆಯೂ ಪ್ರಗತಿ ಕಂಡಿದೆ ಎಂದು ಸರ್ಕಾರ ಹೇಳಿ ಕೊಂಡಿತ್ತು. ಸದ್ಯ ಚೀನಾದಲ್ಲಿ 60 ವಯಸ್ಸು ದಾಟಿದವರ ಸಂಖ್ಯೆ 21.20 ಕೋಟಿಯಾಗಿದ್ದು, ಒಟ್ಟು ಜನಸಂಖ್ಯೆಯ ಶೇ.15.5ರಷ್ಟಿದ್ದಾರೆ. 
2030ರ ವೇಳೆಗೆ ಈ ಪ್ರಮಾಣ ಶೇ.18ರಷ್ಟಾಗಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಉಗ್ರ ನಿಗ್ರಹ ಕಾನೂನಿಗೆ ಒಪ್ಪಿಗೆ: ಇದೇ ವೇಳೆ, ಚೀನಾವು ಮೊತ್ತ ಮೊದಲ ಬಾರಿಗೆ ಕಠಿಣವಾದ ಉಗ್ರ ನಿಗ್ರಹ ಕಾನೂನನ್ನು ಜಾರಿ ಮಾಡಿದೆ. ಅದರಂತೆ, ಸಾಗರೋ ತ್ತರ ಉಗ್ರ ನಿಗ್ರಹ ಕಾಯರ್Áಚ ರಣೆ ನಡೆಸುವ ಅವಕಾಶವೂ ಚೀನಾ ಸೇನೆಗೆ ಸಿಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!